Wednesday, April 30, 2025
Google search engine
Homeರಾಜ್ಯಸಾಯಿ ಗಾರ್ಮೆಂಟ್ಸ್ ನ  ಸೈಲೆಂಟ್ ಸ್ಲೀಪಿಂಗ್ ಪಾರ್ಟ್ನರ್ ಯಾರು..? ಆಯನೂರು ಮಂಜುನಾಥ್ ಪ್ರಶ್ನೆ..!

ಸಾಯಿ ಗಾರ್ಮೆಂಟ್ಸ್ ನ  ಸೈಲೆಂಟ್ ಸ್ಲೀಪಿಂಗ್ ಪಾರ್ಟ್ನರ್ ಯಾರು..? ಆಯನೂರು ಮಂಜುನಾಥ್ ಪ್ರಶ್ನೆ..!

ಶಿವಮೊಗ್ಗ ನಗರದ ಮಿಷನ್ ಕಾಂಪೌಂಡಿನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ಸಿನ ವಕ್ತಾರರಾದ  ಆಯನೂರು ಮಂಜುನಾಥ್ ಅವರು ಆಗ ಬಂಗಾರಪ್ಪರನ್ನು ಬಿಜೆಪಿ ಗೆಲ್ಲಿಸಿದ್ದಲ್ಲ, ಬಿಜೆಪಿಯನ್ನೇ ಗೆಲ್ಲಿಸಿದ್ದು ಬಂಗಾರಪ್ಪ.

2000ನೇ ಸಾಲಿನಲ್ಲಿ ಯಡಿಯೂರಪ್ಪ, ಈಶ್ವರಪ್ಪ, ನಾನು ಎಲ್ಲ ಸೋತು ಹೋದ್ವಿ. ಬಂಗಾರಪ್ಪರನ್ನು ಧೃತಿಗೆಟ್ಟು ಕರೆತರಲಾಯಿತು. ರಾಜಕೀಯ ಶರಣಾಗತಿಗೆ ಬಿಜೆಪಿಗೆ ಒಳಗಾಯ್ತು. ಶಿವಮೊಗ್ಗ ಸಂಸತ್ ಚುನಾವಣಾ ಅಭ್ಯರ್ಥಿ ಬಂಗಾರಪ್ಪರಿಗೆ ನೀಡಲಾಯಿತು. ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿ ಬಂಗಾರಪ್ಪರ ಅಭ್ಯರ್ಥಿಗಳು ನಿಂತಿದ್ದು.

ಬಂಗಾರಪ್ಪ ಬಂದ ನಂತರ 79 ಸ್ಥಾನ ಬಿಜೆಪಿಗೆ ಬಂತು. ಬಿಜೆಪಿಗೆ ಬೂಸ್ಟ್ ಆಗಿದ್ದು ಬಂಗಾರಪ್ಪ. ರಾಜ್ಯದಲ್ಲಿ ಬಿಜೆಪಿಗೆ 7℅ ಹೆಚ್ಚಿನ ಮತಗಳು.

ಇದೆಲ್ಲ ಆಗುತ್ತಿದ್ದಾಗ ರಾಘವೇಂದ್ರ ಇರಲೇ ಇಲ್ಲ. ಬಿಜೆಪಿಯ ಕೆಲವು ನಾಯಕರ ಕಿರಿಕಿರಿಯಿಂದ ಬಂಗಾರಪ್ಪ ಬಿಜೆಪಿ ಬಿಡುವಂತಾಯ್ತು. ಬಂಗಾರಪ್ಪ ಸಮಾಜವಾದಿ, ನಾನು ಕಾಂಗ್ರೆಸ್, ಬಿಜೆಪಿಯಿಂದ ಭಾನುಪ್ರಕಾಶ್ ಸ್ಪರ್ಧೆ ಆಯ್ತು. ಬಿಜೆಪಿ ಆಗ ನಾಲ್ಕನೇ ಸ್ಥಾನಕ್ಕೆ ಬಂತು.

ಆನಂತರ ನನ್ನನ್ನು ಬಿಜೆಪಿಗೆ ಕರೆದುಕೊಂಡರು ಯಡಿಯೂರಪ್ಪ. ನೀನೇ ಮುಂದಿನ ಸಂಸತ್ ಅಭ್ಯರ್ಥಿ ಅಂದಿದ್ರು. ಭದ್ರಾವತಿ ವಿಧಾನಸಭೆಗೆ ಹಾಕಿದ್ರು. ಸಂಸತ್ ಚುನಾವಣೆಯ ಅಭ್ಯರ್ಥಿ ಸ್ಥಾನ ತಪ್ಪಿಸಲು ನನಗೆ ಭದ್ರಾವತಿಗೆ ವಿಧಾನ ಸಭೆಗೆ ಹಾಕಿದ್ರು.

ರುದ್ರೇಗೌಡರಿಗೆ ಪಾರ್ಲಿಮೆಂಟ್ ಕ್ಯಾಂಡಿಡೇಟ್ ಅನ್ನೋ ರೀತಿಯಲ್ಲಿ ಬಿಂಬಿಸಿ ನನಗೆ ಕೈಬಿಡಲಾಯಿತು. ಆನಂತರ ಬಿ.ವೈ.ರಾಘವೇಂದ್ರ ಹೆಸರು ಚಾಲ್ತಿಗೆ ಬಂತು.

ಶಿಕಾರಿಪುರ ಪುರಸಭಾ ಸದಸ್ಯ ರಾಘವೇಂದ್ರ ಯಾರಿಗೂ ಗೊತ್ತಿರಲಿಲ್ಲ. ದೇವರಾಣೆ ನನ್ ಮಗ ನಿಲ್ಲಲ್ಲ ಎಂದು ಹೇಳಿದ್ದರು ತುಮಕೂರಲ್ಲಿ. ಆಮೇಲೆ ರುದ್ರೇಗೌಡರಿಗೆ ಒಂದೇ ಒಂದು ಫೋನ್ ಕೂಡ ಇರಲಿಲ್ಲ.

ನನ್ನನ್ನು ಯಡಿಯೂರಪ್ಪ ಸಿದ್ಧ ಮಾಡಿದ್ರು. ರಾಘವೇಂದ್ರ ಹೆಸರು ಚಾಲ್ತಿಗೆ ತಂದಿದ್ದು ನಾನೇ. ಈಶ್ವರಪ್ಪ ಹೇಳಿದಂತೆ, ಇದು ಇವತ್ತಿನ ಪರಂಪರೆಯಲ್ಲ…ರಾಘವೇಂದ್ರ ಚಾಲ್ತಿಗೆ ಬಂದಿದ್ದೇ ಇಂಥ ಸುಳ್ಳುಗಳ ಮೂಲಕ, ಮೋಸದ ಮೂಲಕ.

ರಾಘವೇಂದ್ರರಿಗೆ ಏನು ಇತಿಹಾಸ ಗೊತ್ತಿದೆ? ಬಂಗಾರಪ್ಪರನ್ನು ಗೆಲ್ಲಿಸಿದ್ದು ಬಿಜೆಪಿಯ ಚೇಲಾಗಳು ಅಂತಾರೆ ರಾಘವೇಂದ್ರ. ಬಿಜೆಪಿಗೆ ಗೆಲ್ಲಿಸಿದ್ದೇ ಬಂಗಾರಪ್ಪ. ಯಾಕೋ ರಾಘವೇಂದ್ರ ತಬ್ಬಿಬ್ಬಾದಂತೆ ಕಾಣ್ತಿದ್ದಾರೆ. ಬಿಜೆಪಿ ಬೆಳವಣಿಗೆಯಲ್ಲಿ ಬಂಗಾರಪ್ಪ ಮಹತ್ವ ಆಗ ಏನೆಂದು ಎಲ್ಲರಿಗೂ ಗೊತ್ತಿದೆ.

ಚಂದ್ರಿಕೆ ಇಟ್ಟು ರಾಜಕಾರಣ ಮಾಡಿದ್ದು ಪರಂಪರೆ. ಇದೆಲ್ಲ ಇತಿಹಾಸ ನೆನಪಿಸಿಕೊಳ್ಳಬೇಕು.ಕಂಡವರ ಮಗನಿಗೆ ಪೆಟ್ಟು ಬಿದ್ದಾಗ ಒಂದಕ್ಷರವೂ ಮಾತಾಡದ ಈಶ್ವರಪ್ಪರಿಗೆ ಈಗ ಅರ್ಥವಾಗ್ತಿರೋದು ಆಶ್ಚರ್ಯ.

ಜಿಲ್ಲಾ ಬಿಜೆಪಿ ಅಧ್ಯಕ್ಷರು ನನ್ನ ಸಾಧನೆಗಳೇನು ಅಂತ ಕೇಳಿದ್ದಾರೆ. ನನಗೆ ಉಚಿತವಾಗಿ ಯಾರೂ ನೀಡಿದ್ದಲ್ಲ. ನನ್ನ ಹೋರಾಟಗಳಿಂದ, ಜೈಲಿಂದ, ಲಾಠಿಯಿಂದ ಸಿಕ್ಕ ಫಲಗಳವು.

ಸ್ವತಃ ರಾಘವೇಂದ್ರರಿಗೇ ಇತಿಹಾಸ ಗೊತ್ತಿಲ್ಲ…ಕೇಳುತ್ತಿರುವ ಪ್ರಶ್ನಗಳಿಗೆ ಮೊದಲು ಉತ್ತರಿಸಿ. ತಂದೆ ಹೆಗಲ ಮೇಲೆ ಜಾತ್ರೆಗೆ ಬಂದಂತಹ ರಾಘವೇಂದ್ರರಿಗೆ ಯಾವ ಅನುಭವವಿತ್ತು? ಗೀತಾರವರದು ರಾಜಕೀಯ ಕುಟುಂಬ. ಬಂಗಾರಪ್ಪ ಇಂದಿರಾಗಾಂಧಿಗೆ ಗೆಲ್ಲಿಸಿದವರು. ಇಂದಿರಾಗಾಂಧಿಯವರ ತೊಡೆ ಮೇಲೆ ಕುಳಿತಿದ್ದ ಗೀತಾ ಶಿವರಾಜ್ ಕುಮಾರ್ ಅತ್ಯಂತ ಹೆಚ್ಚಿನ ಬಹುಮತದಿಂದ ಗೆದ್ದೇ ಗೆಲ್ಲುತ್ತಾರೆ.

13 ತಿಂಗಳಲ್ಲಿ ಸಂಸದನಾಗಿ ನಾನು ಕೆಲಸ ಮಾಡಿದ್ದೇನು ಎಂಬುದು ದಾಖಲೆಗಳನ್ನು ಪರಿಶೀಲಿಸಲು ಹೇಳಿ. ವಿಮಾನ ನಿಲ್ದಾಣ, ಹೈವೇಗಳಿಗೆ ಮುನ್ನುಡಿ ಬರೆದಿದ್ದೇನೆ. ಸೈಲ್ ವಿಲೀನಗೊಳಿಸಿದ್ದು ನಾನು…ಇಂಥ ಹತ್ತು ಹಲವು ಯೋಜನೆಗಳು ನನ್ನ ಹೆಸರಲ್ಲಿವೆ. ಹಣ ತರಲು ನನ್ನ ತಂದೆ ಸಿಎಂ ಆಗಿರಲಿಲ್ಲ…
ಶಾಸಕನಾಗಿ, ಎಂಎಲ್ ಎ ಆಗಿ ಸಾಧನೆಗಳಿವೆ. 30 ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತವನಲ್ಲ. ಕಪ್ಪು ಚುಕ್ಕೆ ನಾನಲ್ಲ…ರಾಜಕಾರಣ ಇದು. ಆಪರೇಷನ್ ಮಾಡಲು ಬಂದ ಡಾಕ್ಟರಿಗೇ ಆಪರೇಷನ್ ಮಾಡುವ ಪೇಷಂಟ್ ಗಳು ರಾಜಕಾರಣದಲ್ಲಿದ್ದಾರೆ…

ಶಾಹಿ ಗಾರ್ಮೆಂಟ್ಸ್ ನ ಅಭಿವೃದ್ಧಿ ಪಡಿಸಿದ ಜಾಗಕ್ಕೆ 24 ಕೋಟಿ ಕೊಟ್ಟಿದ್ದಾರೆ. ಸಬ್ಸಿಡಿ 25 ಕೋಟಿ ಕೊಡಲಾಗಿದೆ. ಇಡೀ ಭೂಮಿಯನ್ನು ಉಚಿತವಾಗಿ ಕೊಡಲಾಗಿದೆ. ಸಂಸದರು ಈ ಬಗ್ಗೆ ಉತ್ತರಿಸಬೇಕು. ಅದರ ವಿರುದ್ಧದ ಹೋರಾಟದ ಬಗ್ಗೆ ಸಂಸದರು ಮಾತೇ ಆಡಲ್ಲ.

ಶಿವಮೊಗ್ಗದ ಬಹುದೊಡ್ಡ ಹಗರಣ ಇದು. ಎಂದೂ ಇವರು ಬಡವರ, ಕಾರ್ಮಿಕರ ಪರ ಇಲ್ಲ…ಶಿಕಾರಿಪುರ, ಸಾಗರದಲ್ಲೂ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆ ಇದೆ. ಸೈಲೆಂಟ್, ಸ್ಲೀಪಿಂಗ್ ಪಾರ್ಟನರ್ ಯಾರು? ದೇಶಭಕ್ತರು ಯಾರೂ ಮಾತಾಡ್ತಿಲ್ಲ…ಬಾಡಿಗೆ ಮೇಲಷ್ಟೇ ಕಣ್ಣು ಇವರೆಲ್ಲರಿಗೆ…

ಮಹಿಳಾ ಆಯೋಗದ ಮಂಜುಳಾರವರು ಕೂಡ ಒಂದೆರಡು ಹೋರಾಟ ಮಾಡಿದ್ರು. ಶಾಹಿ ವಿರುದ್ಧದ ಹೋರಾಟ ಅವರು ಕೈ ಬಿಟ್ರು. ಎಕರೆಗೆ ಎಂಟೂವರೆ, ಒಂಭತ್ತು ಲಕ್ಷಕ್ಕೆ ಕೊಡಲಾಗಿದೆ. ಇದರ ವಿರುದ್ಧ ಶಾಸಕರಾದ ಬೇಳೂರು ಹೋರಾಟಕ್ಕಿಳಿದಿರುವುದು ಸಂತೋಷ. ಇನ್ನಷ್ಟು ಆಳಕ್ಕಿಳಿಯಲಿ ಬೇಳೂರುರವರು. ಈ ಬಗ್ಗೆ ದೊಡ್ಡ ಹೋರಾಟ ಆಗಬೇಕು ಎಂದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...