
ಶಿವಮೊಗ್ಗ: ನಗರದ ಸರ್ಜಿ ಕನ್ವೆನ್ಷನ್ ಎದುರು ಕುವೆಂಪು ನಗರ ಬಳಿ ವೈದ್ಯರೊಬ್ಬರ ಮನೆಯ ಎದುರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ವೈದ್ಯರ ಮನೆಯ ಸಿಸಿ ಕ್ಯಾಮೆರಾದಲ್ಲಿ ಇದು ಸೇರೆಯಾಗಿದೆ.
ಇಂದು ಮುಂಜಾನೆ ಸುಮಾರು 12ರಿಂದ ಒಂದು ಗಂಟೆಯ ಅವಧಿಯಲ್ಲಿ ಚಿರತೆ ವೈದ್ಯರ ಮನೆಯ ಎದುರುಗಡೆ ಹೋಗಿದ್ದು ಹಿಂದಿನಿಂದ ನಾಯಿ ಓಡಿಸಿಕೊಂಡು ಹೋಗಿರುವ ದೃಶ್ಯಗಳು ಲಭ್ಯವಾಗಿವೆ.
ಇದು ಕಾಡಿನ ಚಿರತೆಯ ಅಥವಾ ಮೃಗಾಲಯದ ಚಿರತೆಯ ಎನ್ನುವ ಹುಡುಕಾಟದಲ್ಲಿ ಇದ್ದೇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆ ಈ ಚಿರತೆಯನ್ನು ಹಿಡಿಯುವ ಸಲುವಾಗಿ ಈಗಾಗಲೇ ಕಾರ್ಯಾಚರಣೆ ಶುರು ಮಾಡಿದ್ದು ಯಾರು ಭಯಪಡುವ ಅಗತ್ಯತೆ ಇಲ್ಲ ಒಂದು ವೇಳೆ ರಾತ್ರಿ ಚಿರತೆ ಏನಾದರೂ ಕಾಣಿಸಿಕೊಂಡರೆ ಅರಣ್ಯ ಅಧಿಕಾರಿಗಳ ಈ ಕೆಳಗಿನ ನಂಬರ್ಗೆ ಕರೆ ಮಾಡಿ ಮಾಹಿತಿ ತಿಳಿಸಿ ಭಯಪಡುವ ಅಗತ್ಯತೆ ಇಲ್ಲ ಎಂದು ಆರ್‌ಎಫ್ಓ ಸುಧಾಕರ್ ತಿಳಿಸಿದ್ದಾರೆ.
ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ:ನರೇಂದ್ರ :+919449757005..