
ಶಿವಮೊಗ್ಗ: ನಗರದ ಹೊರವಲಯದ ಶರಾವತಿ ಡೆಂಟಲ್ ಕಾಲೇಜ್ ಪಕ್ಕ ಮಲೆನಾಡು ಕಾಲೇಜ್ ಎನ್ನುವ ಹೆಸರಿನ ಕಾಲೇಜ್ ನೋಂದಾವಣೆಯಾಗಿದ್ದು ಆದರೆ ಅದನ್ನು ದಾವಣಗೆರೆ ಮೂಲದ ಸರ್ ಎಂವಿ ಸಂಸ್ಥೆ ಖರೀದಿಗೆ ತೆಗೆದುಕೊಂಡಿದ್ದು ಅದನ್ನು ಸರ್ ಎಂವಿ ಸಂಸ್ಥೆಯ ಹೆಸರಿನಲ್ಲಿ ನಡೆಸಲು ಶಿಕ್ಷಣ ಇಲಾಖೆಗೆ ಅನುಮತಿಗಾಗಿ ಕೋರಿದೆ.
ಆದರೆ ಸರ್ ಎಂವಿ ಕಾಲೇಜಿಗೆ ಶಿಕ್ಷಣ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಆದರೆ ಇವರು ಈಗಾಗಲೇ ಈ ಕಾಲೇಜಿನ ಹೆಸರಿನಲ್ಲಿ ಬೋರ್ಡ್ ಗಳನ್ನು ಹಾಕಿಕೊಂಡು ಕಾಲೇಜಿಗೆ ಅಡ್ಮಿಶನ್ ಪ್ರಾರಂಭ ಮಾಡಿದ್ದಾರೆ.
ಹಾಗೆ ಕಾಲೇಜಿನ ಹೆಸರಿನಲ್ಲಿ ಜಾಹೀರಾತುಗಳನ್ನು ನೀಡಿದ್ದಾರೆ .
ಇದು ಸರೀನಾ..? ಕಾಲೇಜಿಗೆ ಅನುಮತಿನೆ ಸಿಕ್ಕಿಲ್ಲ ಜಾಹೀರಾತು ನೀಡಲು ಹೇಗೆ ಸಾಧ್ಯ ..?ಹಾಗೂ ಅಡ್ಮಿಶನ್ ತೆಗೆದುಕೊಳ್ಳುವುದು ಹೇಗೆ ಸಾಧ್ಯ..? ಜಾಹೀರಾತು ನೀಡಿರುವ ಬಗ್ಗೆ ಡಿ ಡಿ ಪಿ ಯು ಕೃಷ್ಣಪ್ಪ ಅವರನ್ನು ಪತ್ರಿಕೆ ಮಾತನಾಡಿಸಿದಾಗ ಇದರ ಬಗ್ಗೆ ದಿನಾಂಕ 14/6 /24ರಂದು ನೋಟಿಸ್ ನೀಡಿದ್ದೇವೆ ಆ ನೋಟಿಸ್ ಗೆ ಉತ್ತರ ನೀಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು ಆದರೆ ಇಲ್ಲಿಯವರೆಗೂ ಆ ನೋಟಿಸ್ ಗೆ ಯಾವುದೇ ಉತ್ತರವನ್ನು ಸಂಸ್ಥೆ ನೀಡಿಲ್ಲ ಇದನ್ನು ಮತ್ತೆ ಪರಿಶೀಲಿಸಿ ಮತ್ತೆ ನೋಟಿಸ್ ನೀಡಿ ಕಾನೂನಿನ ನಡೆಯಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗೆ ಮುಂದುವರಿದು ಇನ್ನೂ ಪರ್ಮಿಷನ್ನೇ ಸಿಗದೇ ಕಾಲೇಜ್ ಅಡ್ಮಿಶನ್ ಪ್ರಾರಂಭ ಮಾಡಿರುವುದು ಹಾಗೂ ಬೋರ್ಡ್ ಗಳನ್ನು ಹಾಕಿಕೊಂಡಿರುವುದರ ಬಗ್ಗೆ ಕೇಳಿದಾಗ ಅದರ ವಿರುದ್ಧವೂ ಕೂಡ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹೀಗೆ ಹಲವು ಕಾಲೇಜುಗಳು ಶಿವಮೊಗ್ಗದಲ್ಲಿ ತಲೆ ಎತ್ತಿವೆ ಪರ್ಮಿಷನ್ ಇರುವುದು ಬೇರೆ ಸಂಸ್ಥೆಗೆ ಆದರೆ ಕಾಲೇಜ್ ಪ್ರಾರಂಭವಾಗುವುದೆ ಬೇರೆ ಸಂಸ್ಥೆಯ ಹೆಸರಿನಲ್ಲಿ ಇದರ ಬಗ್ಗೆ ಡಿಡಿಪಿಯು ಕಠಿಣ ಕ್ರಮ ತೆಗೆದುಕೊಳ್ಳಬೇಕು ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪತ್ರಿಕೆ ನೀಡಲು ಸಿದ್ದ ಈ ದಂದೆಗೆ ಫುಲ್ ಸ್ಟಾಪ್ ಬೀಳಬೇಕು ಎನ್ನುವುದು ಪತ್ರಿಕೆಯ ಕಳಕಳಿ…