
ಶಿವಮೊಗ್ಗ: ನಗರದಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗಗಳನ್ನು ಅತಿಕ್ರಮಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುವುದು ಹಾಗೂ ಮನೆಗಳನ್ನು ಕಟ್ಟಿಕೊಳ್ಳುವುದು ಒಂದು ದಂದೆಯಾಗಿ ಶಿವಮೊಗ್ಗದಲ್ಲಿ ಮಾರ್ಪಟ್ಟಿದೆ.

ಇದು ಕೆಲವು ಕಡೆ ಎಕರೆಗಳ ಜಾಗದಲ್ಲಿ ಇದ್ದರೆ ಕೆಲವು ಕಡೆ ಸೈಟುಗಳ ಲೆಕ್ಕದಲ್ಲಿ ನಡೆಯುತ್ತಿದೆ. ಇತ್ತೀಚಿಗೆ ಗೋಪಾಲದ 26ನೇ ವಾರ್ಡಿನಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗವನ್ನು ಅತಿಕ್ರಮಣ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಸುದ್ದಿ ಬಿತ್ತರವಾಗಿತ್ತು ಹಾಗೆ ಅಲ್ಲಿಯ ಸ್ಥಳೀಯರು ಕೂಡ ಇದರ ವಿರುದ್ಧ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ನೀಡಿದ್ದರು.

ಮೊನ್ನೆ ಅಂದರೆ ಶುಕ್ರವಾರ ಅತಿಕ್ರಮಿಸಿದ ಒಂದಷ್ಟು ಜಾಗವನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಸುರ್ಪದಿಗೆ ತೆಗೆದುಕೊಂಡಿದ್ದರು ಇಂದು ಕೂಡ ಗೋಪಾಲದ ಅದೇ ವಾರ್ಡಿನ ಸ್ಥಳಕ್ಕೆ ಸಂಬಂಧಪಟ್ಟಂತೆ ಕೆಲವು ಜಾಗಗಳನ್ನು ವಶಪಡಿಸಿಕೊಂಡು ತಮ್ಮ ಸುರ್ಪದಿಗೆ ತೆಗೆದುಕೊಂಡಿದ್ದಾರೆ.
ಮಹಾನಗರ ಪಾಲಿಕೆಯ ನೂತನ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾದ ವಿರೂಪಾಕ್ಷಪ್ಪ ಪೂಜಾರ್ , ರೆವಿನ್ಯೂ ಇನ್ಸ್ಪೆಕ್ಟರ್ ಮಾರುತಿ, ಜೂನಿಯರ್ ಇಂಜಿನಿಯರ್ ಜಗದೀಶ್, ಸರ್ವೆಯರ್ ವೇಣುಗೋಪಾಲ್, ಎ ಆರ್ ಓ ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು.
ಇನ್ನೂ ಬಾಕಿ ಇದೆ ಅತಿಕ್ರಮಣದ ತೆರವು :
ಇನ್ನು ಕೆಲವು ಕಡೆ ಕೆಲವು ಭೂಗಳ್ಳರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗಗಳನ್ನು ಅತಿಕ್ರಮಿಸಿಕೊಂಡಿದ್ದು ಅದನ್ನು ಕೂಡ ಮಹಾನಗರ ಪಾಲಿಕೆಯವರು ತಮ್ಮ ಸುರ್ಪದಿಗೆ ತೆಗೆದುಕೊಳ್ಳಬೇಕಿದೆ ಕೆಲವು ಕಡೆ ಬಫರ್ ಜೊನ್ಗಳನ್ನು ಬಿಡದೆ ಅತಿಕ್ರಮಿಸಿಕೊಂಡಿದ್ದಾರೆ. ಕೆಲವು ಕಡೆ ಪಾರ್ಕ್ ಗಳನ್ನು , ಪುಟ್ ಬಾತ್ ಗಳನ್ನು, ಅತಿಕ್ರಮಿಸಿಕೊಂಡಿದ್ದಾರೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೂತನ ಆಯುಕ್ತರಿಗೆ ಪತ್ರಿಕೆ ನೀಡಲಿದೆ ಕೂಡಲೇ ಇವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಸರ್ಕಾರದ ಬಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ಉಳಿಸಬೇಕು ಸಾರ್ವಜನಿಕರ ಆಸ್ತಿಯನ್ನು ಕಾಪಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ ಹಾಗೂ ಮನವಿ.