
ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯ ನೋಡಲು ಶಿಕಾರಿಪುರ ಹಿತ್ತಲ ಗ್ರಾಮದ ಪಲ್ಲವಿ ಹಾಗೂ ಎನ್ ಆರ್ ಪುರ ಮೂಲದ ಪ್ರತಾಪ್ ಜೊತೆ ಆತನ ಸ್ನೇಹಿತ ಕಿರಣ ಹೋಗಿದ್ದಾರೆ ಅಲ್ಲಿ ಕಿರಣ್ ಪಲ್ಲವಿ ನಡುವೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಐವರು ಯುವಕರಿಂದ ಗುಂಪಿನ ನಡುವೆ ಗಲಾಟೆ ಮಾಡಿದ್ದಾನೆ. ಪ್ರೇಮಿಗಳು ಈ ನಡುವೆ ಪರಾರಿಯಾಗಿದ್ದಾರೆ ಆದರೆ ಕಿರಣ್ ಈ ಐವರು ಗುಂಪೆ ಆ ಯುವತಿಯನ್ನು ಅಪರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಇದನ್ನು ಗಂಭೀರವಾಗಿ ತೆಗೆದುಕೊಂಡ ತುಂಗಾನಗರ ಠಾಣೆಯ ಪೊಲೀಸರು ರಾತ್ರಿಯೆಲ್ಲಾ ಹುಡುಕಾಟ ನಡೆಸಿದ್ದಾರೆ.
ನಂತರ ಪೊಲೀಸರು ಗಾಜನೂರಿನ ಯುವಕರನ್ನು ಹಾಗೂ ಪ್ರೇಮಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ನಿಜವಾಗಿ ಅಲ್ಲಿ ನಡೆದಿದ್ದೇನು ಎನ್ನುವುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಾಗಿದೆ.