

ದಾವಣಗೆರೆ >ಸೆಪ್ಟೆಂಬರ್ >17 >> ಲಯನ್ಸ್ ಕ್ಲಬ್ ದಾವಣಗೆರೆ ಆಸರೆ ವತಿಯಿಂದ ಕರ್ನಾಟಕ ಸರ್ಕಾರ ಆಯೋಜಿಸಿದ 75 ನೇ ಸ್ವಾತಂತ್ರ ದಿನ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಇದೆ ಸಂದರ್ಭದಲ್ಲಿ ವಿಶ್ವಕರ್ಮ ಜಯಂತಿ ಸಹ ನೆರವೇರಿಸಲಾಯಿತು.
ಮತ್ತು ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್, ಜ್ಯೂಸ್, ಬಿಸ್ಕೆಟ್ ಹಾಗೂ ರಕ್ತದಾನಿಗಳಿಗೆ ಲಯನ್ಸ್ ರಕ್ತನಿಧಿ ಕೇಂದ್ರದ ವತಿಯಿಂದ ಅಭಿನಂದನಾ ಪತ್ರವನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್. ಎಲ್. ಲಾ ಕಾಲೇಜ್ ನ ಪ್ರಿನ್ಸಿಪಾಲರದ ಎಂ.ಸೋಮಶೇಖರಪ್ಪ ನವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡುತ್ತಾ ಇದೊಂದು ಉತ್ತಮ ಕಾರ್ಯಕ್ರಮ ರಕ್ತ ಎನ್ನುವುದು ಬಹಳ ಮುಖ್ಯವಾದದ್ದು ಮನುಷ್ಯನಿಗೆ ಬೇಕಾದ ಅಗತ್ಯತೆ ಗಳಲ್ಲಿ ಒಂದು ಅಂತಹ ರಕ್ತದಾನವನ್ನು ಮಾಡುವುದು ಶ್ರೇಷ್ಠವಾದ ದಾನ ವಾಗಿದ್ದು. ಇಂತಹ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವರಿಗೂ ರಕ್ತದಾನ ಮಾಡಲು ಸ್ವಯಂ ಪ್ರೇರಿತವಾಗಿ ಬಂದಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಅಸಿಸ್ಟೆಂಟ್ ಪ್ರೊಫೆಸರ್ ವಿದ್ಯಾದರ್ ವೇದ ವರ್ಮ ಮಾತನಾಡಿ ರಕ್ತ ಎನ್ನುವುದು ಎಲ್ಲೋ ಮಾರ್ಕೆಟಿನಲ್ಲಿ ಕೊಳ್ಳಲು ಸಿಗುವಂತ ವಸ್ತುವಲ್ಲ ಅದು ಮನುಷ್ಯನ ದೇಹದಲ್ಲಿ ಉತ್ಪತಿ ಆಗುವಂಥದ್ದು ಅಂತ ರಕ್ತವನ್ನು ಇರುವವರು ಇಲ್ಲದವರಿಗೆ ಕೊಟ್ಟು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಆರ್ ಎಲ್ ಲಾ ಕಾಲೇಜ್ ತಮ್ಮ ಜೊತೆ ಕೈಜೋಡಿಸುತ್ತದೆ.ಪರೀಕ್ಷೆಗಳು ನಡೆಯುತ್ತಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಬರಲು ಆಗಲಿಲ್ಲ ಮುಂದಿನ ದಿನಗಳಲ್ಲಿ ಮುಂಚೆ ತಿಳಿಸಿದರೆ ಇನ್ನಷ್ಟು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡುತ್ತಾರೆ ಎಂದು ತಿಳಿಸಿದರು.

ಕೊನೆಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮ ಆಯೋಜಕರಾದ ದಾವಣಗೆರೆ ಆಸರೆ ಅಧ್ಯಕ್ಷರಾದ ಲಯನ್ ಮೌನೇಶ್ವರ್ ಎನ್ಎಚ್ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಈ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೂ ಕಾರ್ಯಕ್ರಮಕ್ಕೆ ನೆರವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಜಿ.ಎಸ್.ಯತೀಶ್,ಅಸಿಸ್ಟೆಂಟ್ ಪ್ರೊಫೆಸರ್ ವಿದ್ಯಾಧರ್ ವೇದ ವರ್ಮ, ಎನ್ಎಸ್ಎಸ್ ಆಫೀಸರ್ ಎಚ್ಎನ್, ಪವನ್ ಕುಮಾರ್, ಆರ್, ಎಲ್ , ಲಾ ಕಾಲೇಜಿನ ವಿದ್ಯಾರ್ಥಿ ಹಾಗೂ ನ್ಯೂಸ್ ವಾರಿಯರ್ಸ್ ಪತ್ರಿಕೆಯ ಸಂಪಾದಕರಾದ ರಘುರಾಜ್ ಹೆಚ್. ಕೆ
ಏಚ್. ವಿ.ಸತೀಶ್ ಕುಮಾರ್ ಜಾಯಿಂಟ್ ಕೋ ಆರ್ಡಿನೇಟರ್. ಡಾ/ಪ್ರಭು ಬಸವನಗೌಡ
ಸರ್ವೀಸ್ ಕಮಿಟೀ ಚೇರ್ಮನ್ ಹಾಗೂ ಲಯನ್ಸ್ ಕ್ಲಬ್ ದಾವಣಗೆರೆ ಆಸರೆ ಅಧ್ಯಕ್ಷರಾದ
ಲಯನ್ ಮೌನೇಶ್ವರ್ ಎನ್, ಹೆಚ್ ಹಾಗೂ
ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ. ಬಿ.ನಾಗೆಂದ್ರಚಾರ್ ಆರೋಗ್ಯ ಸಿಬ್ಬಂದಿಗಳು, ಲಾ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ.. ರಘುರಾಜ್ ಹೆಚ್. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…