
ಹರಿಹರ>ಸಪ್ಟೆಂಬರ್> 17>ನಗರಸಭೆ ಕಾರ್ಯಾಲಯ ಹರಿಹರ. ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಹರಹರ.ಇವರ ಸಹಯೋಗದಲ್ಲಿ ಇಂದು ಬೃಹತ್ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .
ನಗರದ 29ನೇ ವಾರ್ಡಿನ ಲಸಿಕೆ ಹಾಕಿಸಿಕೊಳ್ಳಲು ಬರುವ ಎಲ್ಲಾ ನಾಗರಿಕರಿಗೆ ಕಾಂಗ್ರೆಸ್ಸಿನ ನಗರಸಭಾ ಸದಸ್ಯ ವಸಂತ್ ಅವರು ಉಚಿತ ಆಟೋ ಸೇವೆ ನೀಡುವುದರೊಂದಿಗೆ ತಮ್ಮ ವಾರ್ಡಿನ ನಾಗರಿಕರ ಸೇವೆಯನ್ನು ಮಾಡುವ ಮೂಲಕ ಉಚಿತ ಲಸಿಕೆ ಅಭಿಯಾನ ಕಾರ್ಯಕ್ಕೆ ಕೈಜೋಡಿಸಿದರು.
ವಾರ್ಡಿನ ಪ್ರತಿ ನಾಗರಿಕರಿಗೂ ಲಸಿಕೆ ಹಾಕಿಕೊಳ್ಳಲು ಬಂದು ಮರಳಿ ಮನೆಗೆ ಹೋಗುವವರೆಗೂ ಉಚಿತ ಆಟೊ ಸೇವೆಯನ್ನು ಒದಗಿಸುವ ಜೊತೆಗೆ ಖುದ್ದು ತಾವೇ ಮುಂದೆ ನಿಂತು ವಾರ್ಡಿನ ಪ್ರತಿ ನಾಗರಿಕರಿಗೆ ಲಸಿಕೆ ಹಾಕಿಸುವತ್ತ ಕಾಳಜಿ ವಹಿಸಿದರು. ಆ ಮೂಲಕ ನಗರ ಜನತೆಯ ಪ್ರಶಂಸೆಗೆ ಪಾತ್ರರಾದರು.

ಇತ್ತೀಚಿನ ದಿನದಲ್ಲಿ ನಗರಸಭಾ ಸದಸ್ಯ ವಸಂತ ಅವರು ಸಕ್ರಿಯವಾಗಿ ತಮ್ಮ ವಾರ್ಡಿನ ಜನರೊಂದಿಗೆ ಬೆರೆಯುವ ಮೂಲಕ ಅವರ ಕುಂದುಕೊರತೆಗಳಿಗೆ ಸ್ಪಂದಿಸಿ ನಗರಸಭೆಯಿಂದ ಆಗಬೇಕಾದಂತ ಅಗತ್ಯ ಸೌಲಭ್ಯಗಳನ್ನು ಕೊಡಿಸುವತ್ತ ಗಮನ ಹರಿಸಿದ್ದಾರೆ .
ಚುನಾವಣೆಯಲ್ಲಿ ಗೆಲ್ಲಿಸಿದ ಮತದಾರರ ಸೇವೆಯನ್ನು ಮಾಡುವ ಮೂಲಕ ಮತದಾರರ ಮನವನ್ನ ದಿನೇದಿನೇ ಗೆಲ್ಲುತ್ತಿದ್ದಾರೆ .
ಹೀಗೆ ಇವರ ಸೇವೆ ಮುಂದುವರಿಯಲಿ ಎಂಬುದು ನಮ್ಮ ಪತ್ರಿಕೆಯ ಆಶಯವೂ ಆಗಿದೆ .
ವರದಿ.. ಶ್ರೀನಿವಾಸ್ ಆರ್…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…