
ಹರಿಹರ:-ಹರಿಹರ ತಾಲ್ಲೂಕು ಮಲೇಬೆನ್ನೂರು ಪುರಸಭಾ ವ್ಯಾಪ್ತಿಯ ಹಳೇ ವೃತ್ತಕ್ಕೆ (ಧ್ವಜಸ್ತಂಭದ ಹತ್ತಿರ )ಸಂವಿಧಾನ ಶಿಲ್ಪಿ ಡಾ॥ಬಿ.ಆರ್ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ ಬಿ.ಕೃಷ್ಣಪ್ಪ ಸ್ಥಾಪಿತ. ಸಂಘಟನೆಯವರು ಇಂದು ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ತಾಲ್ಲೂಕು ಸಂಚಾಲಕರು,ಎ ಕೆ ಪ್ರಕಾಶ್ ಜಿಲ್ಲಾ ಸಂಘಟನಾ ಸಂಚಾಲಕರು,ವೈ ರಂಗನಾಥ್ ಮಲೇಬೆನ್ನೂರು ಹೋಬಳಿ ಸಂಘಟನಾ ಸಂಚಾಲಕರು.ಸುರೇಶ್, ಬಸವರಾಜ್, ಶಶಿ, ರಂಗನಾಥ T, ಮಣಿ ,ಕುಬೇರ ,ಬಸವರಾಜ್ ಎನ್ ,ಲೋಕೇಶ್,ಮಂಜುನಾಥ್ ಬಿ ,ರಾಜಪ್ಪ, ಕರಿಬಸಪ್ಪ, ನಾಗರಾಜ ಎಚ್ ,ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು .
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…