
ಡಿಯರ್ ಕಾಜೋಲ್
ತುಂಬಾ ದಿನವಾಯಿತು ನಾನು ನಿನಗೆ ಪತ್ರ ಬರೆದು ಅಲ್ವಾ ಆದರೆ ನೀನು ಈ ರೀತಿ ಬದಲು ಆಗುತ್ತಿ ಅಂತ ಯಾವತ್ತೂ ನಾನು ಅಂದುಕೊಂಡಿರಲಿಲ್ಲ,ಯಾಕೆ ನನಗೆ ಈ ರೀತಿ ನೋವು ಕೊಟ್ಟೆ ತಿಳಿಯುತ್ತಿಲ್ಲ ಕುಂತರು ನಿಂತರು ನಿನ್ನದೇ ಯೋಚನೆಯಾಗಿದೆ.
ಮನಸಾದರೂ ಹೇಗೆ ಬಂತು ನನ್ನ ಮರೆಯಬೇಕು ಅಂತ ನಿನಗೆ, ನಿನಗೆ ಸತ್ಯವನ್ನು ಹೇಳಿದೆ ತಪ್ಪಾಯ್ತಾ, ನನ್ನ ಪ್ರೀತಿಗೆ ಬೆಲೆನೆ ಇಲ್ವಾ, ನನ್ನದು ಒಂದು ಮನಸು ಇದೆ ಅಂತ ನಿನಗೆ ಅನಿಸಲಿಲ್ಲ,
ಗೆಳತಿ ನಾ ನಿನ್ನ ಜೊತೆ ಕಳೆದ ಆ ದಿನಗಳನ್ನು ನೆನಪಿಸಿಕೊಂಡರೆ ಇನ್ನು ಕಣ್ಮುಂದೆ ಬಂದು ಹೋಗುತ್ತದೆ.ಒಂದೇ ಎರಡೇ ಹೇಳಲು ನಿನ್ನ ಬಗ್ಗೆ
ನಾವು ತಿರುಗುವ ದಾರಿಗಳ ಬಗ್ಗೆ ಹೇಳಬೇಕಾ, ಹೋಗ್ಲಿ ನಾವಿಬ್ಬರು ಹೋಗಿದ ದೇವಸ್ಥಾನಗಳ ಬಗ್ಗೆ ಹೇಳಬೇಕಾ ,ಹೋಗ್ಲಿ ಹಗಲಿರುಳು ಎಸ್ಎಂಎಸ್ ಗಳು ಮಾಡಿದ್ದನ್ನು ಹೇಳಬೇಕಾ ,ಅಥವಾ ಹಗಲಿರುಳು ಫೋನ್ ನಲ್ಲಿ ಮಾತನಾಡಿದ್ದು ಹೇಳಬೇಕಾ ,ನನ್ನ ಕಷ್ಟದಲ್ಲಿ ನನಗೆ ಧೈರ್ಯ ತುಂಬಿದ ಆ ದಿನಗಳ ಬಗ್ಗೆ ಹೇಳಬೇಕಾ ಯಾವುದು ಹೇಳಲಿ ಯಾವುದೂ ಬಿಡಲಿ ನನಗೆ ತೋಚುತ್ತಿಲ್ಲ,,,,
ನೀನು ಯಾವಾಗ ನನ್ನ ಜೀವನದಲ್ಲಿ ಬಂದೆ ಅಂದೇ ನಾನು ನಿನಗೆ ಸೋತೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾವಿಬ್ಬರು ಗಂಡ-ಹೆಂಡತಿಯರ ಹಾಗೆ ಇದ್ವವಿ ಅಲ್ವಾ!,ನಿನಗೆ ಗೊತ್ತು ತಾನೆ ಅದು ಎಲ್ಲಾ ಆ ದಿನಗಳಲ್ಲಿ ನಾವಿಬ್ಬರೂ ಹೇಗೆ ಇರ್ತಿದ್ವಿ ಅನ್ನೋದು,ನೀ ಮರೆತಿರಬಹುದು ಆದರೆ ನಾನು ಯಾವತ್ತು ಯಾವುದನ್ನು ಮರೆತಿಲ್ಲ ಮರೆಯುವುದಿಲ್ಲ , ಇವಾಗಲು ಕೇಳು ನೀನು ಏನ್ ಏನ್ ಮಾತನಾಡಿದೆ ಅಂತ ಎಲ್ಲವನ್ನೂ ಬಿಡಿಸಿ ಹೇಳುವೆ ಆದರೆ ನೀ ಮಾಡಿದ್ದು ಸರಿನಾ, ಒಮ್ಮೆ ನಿಮ್ಮ ಮನೆಯಲ್ಲಿರುವ ಕನ್ನಡಿಯ ಮುಂದೆ ನಿಂತು ಕೇಳು ನಿನ್ನ ಕೆನ್ನೆಗಳು ಉತ್ತರ ನೀಡುತ್ತದೆ.
ನಿನ್ನಿಲ್ಲದೆ ನನಗೂ ಈ ಭೂಮಿ ಮೇಲೆ ಬದುಕಲು ಆಗುತ್ತಿಲ್ಲ, ನನಗೆ ಯಾಕೆ ಹೀಗೆ ಆಗುತ್ತದೆ ಒಂದೊಂದು ಸಲ ನನಗೆ ಪ್ರಶ್ನೆ ಯಾಗಿ ಕಾಡುತ್ತಿದೆ.
ಪರಿಸರ ನಾವಿಬ್ಬರೂ ಪ್ರೀತಿಸಲು ಶುರು ಮಾಡಿದಾಗ ಮರಳ ಮೇಲೆ ನಿನ್ನ ಬೆರಳು ಹಿಡಿದು ವಲವಿನ ಅಕ್ಷರ ಬರೆಯುತ್ತಲಿದೆ, ನಮ್ಮ ಪ್ರೀತಿಯ ಕಂಡು ಪ್ರಕೃತಿ ಪರಿಸರ ನಾಚಿಕೆಯಿಂದ ಹಸಿರಾಯಿತು ನನ್ನ ಹೃದಯವು ಪ್ರೀತಿಯ ಸರೋವರವೆ ಆದರೂ ನೀನು ಪ್ರೀತಿಯಲ್ಲಿ ನನ್ನನ್ನು ಮೀರಿದ ಸಾಗರ,
ಆ ದಿನಗಳಲ್ಲಿ ನಾನು ನಿನಗೆ ಒಂದು ದಿನ ಕಾಣಲಿಲ್ಲ ಅಂದರೆ ಅಥವಾ ಒಂದು ದಿನ ನಿನಗೆ ಫೋನ್ ಮಾಡಲಿಲ್ಲ ಅಂದರೆ ಅದೆಷ್ಟು ರಂಪ ಮಾಡುತ್ತಿದ್ದೆ. ನನಗಾಗಿ ನೀನು ಕಾಯಬೇಕಾಗಿ ಬಂದ ಕ್ಷಣಗಳಲ್ಲಿ ಕಣ್ಣೀರು ಸುರಿಸಿ ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ ಹಾಗೆ ಹೀಗೆ ಅಂತ ನನ್ನ ಮೇಲೆ ಕೂಗಾಡುತ್ತಿದ್ದೆ.
ನಾವಿಬ್ಬರೂ ಎಷ್ಟೇ ಜಗಳವಾಡಿದರು ಕೂಡ ಕೇವಲ
10 ನಿಮಿಷ ಮಾತ್ರ ಕೋಪ ಬರುತ್ತಿತ್ತು ಆಮೇಲೆ ನಾವು ಮತ್ತೆ ಪ್ರೀತಿಗೆ ಬದಲಾಗುತ್ತಿತ್ತು, ಸುಮಾರು ಸಾರಿ ಈ ರೀತಿ ಆಗಿದೆ ನಿನಗೆ ನೆನಪಿದೆನಾ ! ,
ನನ್ನ ಪರಿಸ್ಥಿತಿ ನೀನು ಅರ್ಥಮಾಡಿಕೊಳ್ಳಲಿಲ್ಲ ಗೆಳತಿ ಕೊನೆಗೂ, ಯಾಕೆ ಈ ನಿರ್ಧಾರ ನೀ ಮಾಡಿದೆ ಒಮ್ಮೆ ತಾಳ್ಮೆಯಿಂದ ಕುಳಿತು ನಿನ್ನ ಮನಸ್ಸನ್ನು ನೀನೆ ಕೇಳು
ಈಗಲೂ ಏನು ಕಾಲ ಮಿಂಚಿಲ್ಲ ನಿನ್ನ ಬರುವ ದಾರಿಯನ್ನೇ ನಾನು ಜಾತಕ ಪಕ್ಷಿಯಂತೆ ಕಾಯ್ತಾ ಇದ್ದೇನೆ.
ಬಾ ಗೆಳತಿ ಒಂದಾಗೋಣ ನಾವಿಬ್ಬರು ಮೊದಲಿನ ಹಾಗೆ ನಗುನಗುತ ಜೀವನ ನಡೆಸೋಣ.
ನಾನು ನಿನಗೆ ತೊದರೆ ಮಾಡುತ್ತೇನೆ ಅಂತ
ಫೋನ್ ನಂಬರ್ ಕೂಡ ಚೇಂಜ್ ಮಾಡಿಕೊಂಡು ಕುಂತಿರುವೆ ಅಲ್ವಾ ನೀನು, ನಿನಗೆ ಮನಸ್ಸು ಅನ್ನೋದೇ ಇಲ್ವಾ ಅದು ಹೇಗೆ ನನ್ನ ಬಿಟ್ಟು ನನ್ನ ನೆನಪು ಮಾಡಿಕೊಳ್ಳದೆ ದಿನಗಳನ್ನು ನೀ ಕಳೆಯುತ್ತಿದ್ದೀಯಾ ಅನ್ನೋದೇ ನನಗೆ ಚಿಂತೆಯಾಗಿದೆ.ಒಂದು ನಿಮಿಷ ಬಿಟ್ಟು ಇರದೆ ಇರುವಳು ಈಗ ಹೇಗಿದ್ದೀಯಾ ಅನ್ನೋದೇ ಪ್ರಶ್ನೆಯಾಗಿದೆ.
ಯಾವತ್ತಿಗೂ ಕೂಡ ನೀನು ನನ್ನವಳೆ ಅಂತ ನಾನು ನಿನಗಾಗಿ ದಾರಿ ಕಾಯ್ತಾ ಕನಸುಗಳನ್ನು ಕಾಣುತ್ತಾ ನಿನ್ನ ನಗು ಮುಖ ನೋಡುವ ದಿನ ಯಾವಾಗ ಸಿಗುತ್ತೆ, ಸಿಕ್ಕಾಗ ನನ್ನ ಮುಖದಲ್ಲಿ ಮುಗುಳುನಗೆ ಹೇಗಿರತ್ತೆ ಅಂತ ಕಾಯುತ್ತಾ ಕುಳಿತಿರುವೆ . ಈ ಜೀವ ನಿನಗಾಗಿ ಗೆಳತಿ
ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಂಡು ಹೋಗುವುದೇ ಜೀವನ, ನಿಜ ನಾನು ತಪ್ಪು ಮಾಡಿನಿ ಕ್ಷಮಿಸು ಅಂತ ನಿನ್ನ ಕೇಳಿದೆ ಆದ್ರೆ ನಿನಗೆ ಕ್ಷಮಿಸುವ ದೊಡ್ಡತನ ಯಾಕೆ ಇಲ್ಲ ನೀನು ತಪ್ಪು ಮಾಡಿ ನಾನು ನಿನಗೆ ಏನು ಅಂದಿಲ್ಲ ಅನ್ನೋದಿಲ್ಲ ಯಾಕೆಂದರೆ ನಾನು ನಿನಗೆ ಮನಸಾರೆ ಹೆಂಡತಿ ಅಂತ ಒಪ್ಪಿಕೊಂಡಿದ್ದೇನೆ.
ಪ್ರೀತಿಗೆ ವಯಸ್ಸು, ಅಂತಸ್ತು, ಬಣ್ಣ ,ಮುಖ್ಯವಲ್ಲ ನಿನ್ನಂತ ಗುಣವಂತ ಹೃದಯವಂತ ನನಗೆ ಸಿಕ್ಕಿದ್ದು ನನ್ನ ಪುಣ್ಯ ಅಂತ ನೀನು ಸುಮಾರು ಸಾರಿ ನನಗೆ ಹೇಳಿದ್ದೆ ನೆನಪಿದೆನಾ !,
ಹೋಗಲಿ ಬಿಡು ಹೇಳಿದ್ರೆ ಹೇಳಬೇಕು ಅಂತ ಅನ್ಸುತ್ತೆ ಮನಸ್ಸಿನಲ್ಲಿ ತುಂಬಾ ಬೆಂಕಿಯ ಜ್ವಾಲೆ ಇಟ್ಟುಕೊಂಡು ಒಂದು ಪತ್ರ ನಿನಗೆ ಬರೆಯುತ್ತಿದ್ದೇನೆ ಸಾಕು ಇನ್ನು ಬದಲಾಗು ನೀನು ಪ್ಲೀಸ್ ಪ್ಲೀಸ್ ನೀನಿರದೆ ನನ್ನ ಬದುಕು ಶೂನ್ಯ ನಿನ್ನ ನೋಡಬೇಕು ನಿನ್ನ ಜೊತೆ ಮಾತನಾಡಬೇಕು ಅಂತ ಈ ನನ್ನ ಪುಟ್ಟ ಹೃದಯ ನಿನಗಾಗಿ ಕಾಯುತ್ತಿದೆ.ಬಾ ಗೆಳತಿ ಒಮ್ಮೆ ನನ್ನ ಈ ಮುಖ ನೋಡು,ನೀನಿರದೆ ಈ ಜೀವ ಹೇಗೆ ಇದೆ ಅಂತ ಒಮ್ಮೆ ನೋಡು, ನಿನಗಾಗಿ ಕಾಯುತ್ತಿರುವೆ..!!!!!
ನಿನ್ನ ಬರುವಿಕೆಗಾಗಿ ಕಾಯುತ್ತಿರುವ …..
ಮಲ್ಲಿಕಾರ್ಜುನ್ ಬುರ್ಲಿ…9845722950

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…