ಶಿವಮೊಗ್ಗ: ಹಲವು ದಿನಗಳಿಂದ ಶಿವಮೊಗ್ಗ ಜನತೆಗೆ ಹಾಗೂ ಅಧಿಕಾರಿಗಳಿಗೆ ತಲೆ ನೋವಾಗಿದ್ದ ಒಂದೇ ಒಂದು ಪ್ರಮುಖ ಸಮಸ್ಯೆ ಎಂದರೆ ಅದು ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಈದ್ಗಾ ಮೈದಾನ ವಿವಾದ .
ಈದ್ಗಾ ಮೈದಾನ ಮುಸ್ಲಿಂಮರ ಪವಿತ್ರ ಹಬ್ಬ ರಂಜಾನ್ ನಂತರ ಮುಸ್ಲಿಂ ಸಮುದಾಯದ ಜಾಮಿಯಾ ಮಸೀದಿ ಹಾಗೂ ಮುಸ್ಲಿಂ ಮುಖಂಡರು ಸೇರಿ ಈದ್ಗಾ ಮೈದಾನದ ಹತ್ತಿರ ಬೇಲಿ ನಿರ್ಮಿಸಿದ್ದರು ಈ ಸ್ವತ್ತು ನಮ್ಮದು ಹಾಗಾಗಿ ನಾವು ಇದನ್ನು ಬಳಸಿಕೊಳ್ಳುತ್ತೇವೆ ಇದನ್ನು ಸಾರ್ವಜನಿಕರಿಗೆ ಅಥವಾ ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು ಕೂಡ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳು ಸ್ಥಳದಲ್ಲೇ ಧರಣಿ ಕುಳಿತು ಇದನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದವು ಆ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಎಸ್ಪಿ ಮಿಥುನ್ ಕುಮಾರ್ ಅವರು ಸೌಹಾರ್ದಯುತವಾಗಿ ಬಗೆಹರಿಸಿ ಸಂಜೆಯೊಳಗೆ ತೆರೆವುಗೊಳಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಸಂಜೆ ಬೇಲಿಯ ಬದಲಾಗಿ ಪೊಲೀಸ್ ಬ್ಯಾರಿಗೇಟ್ ಹಾಕಿದ್ದರು ಇದಾದ ಮರುದಿನ ಮತ್ತೆ ಮುಸ್ಲಿಂ ಮುಖಂಡರುಗಳು ಹಾಗೂ ಜಾಮಿಯಾ ಮಸೀದಿ ಕಮಿಟಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಪೊಲೀಸರು ಹಾಕಿರುವ ಬ್ಯಾರಿಕೇಡ್ ತೆಗೆಯಬಾರದು ಈ ಸ್ವತ್ತು ನಮ್ಮದು ಇದರ ಅಭಿವೃದ್ಧಿಗೆ ನಮಗೆ ಬಿಟ್ಟು ಕೊಡಬೇಕು ಎಂದು ಮನವಿ ಸಲ್ಲಿಸಿದರು.
ಮಾಜಿ ಡಿಸಿಎಂ ಈಶ್ವರಪ್ಪ ಎಂಟ್ರಿ :
ಈ ಪ್ರಕರಣಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಎಂಟ್ರಿಕೊಟ್ಟು ಯಾವುದೇ ಕಾರಣಕ್ಕೂ ಈ ಸ್ವತ್ತು ಅವರಿಗೆ ಬಿಡುವುದಿಲ್ಲ ಇದು ಸಾರ್ವಜನಿಕರ ಸ್ವತ್ತು ಹಾಗಾಗಿ ಇದನ್ನು ನೀವು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎನ್ನುವ ದಾಟಿಯಲ್ಲಿ ಮಾತನಾಡಿದ್ದರು ಇದು ಈದ್ಗಾ ಮೈದಾನವಲ್ಲ ಆಟದ ಮೈದಾನವೆಂದು ಕೂಡ ಹೇಳಿದ್ದರು.
ಶಿವಮೊಗ್ಗ ಶಾಸಕ ಚೆನ್ನಿ ಡೆಡ್ ಲೈನ್ :
ಶಿವಮೊಗ್ಗದ ಹಾಲಿ ಶಾಸಕ ಚನ್ನಬಸಪ್ಪ ಚೆನ್ನಿ ಜಿಲ್ಲಾಡಳತಕ್ಕೆ ಎಂಟನೇ ತಾರೀಖ್ ಒಳಗೆ ತೆರುಗೊಳಿಸದಿದ್ದರೆ ಹೋರಾಟ ನಡೆಸುವುದಾಗಿ ಡೆಡ್ ಲೈನ್ ನೀಡಿದ್ದರು.
ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ :
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಾಮಿಯಾ ಮಸೀದಿ ಕಮಿಟಿ ಅವರು ಮುಸ್ಲಿಂ ಮುಖಂಡರು , ಇತರ ರಾಜಕೀಯ ಮುಖಂಡರು, ಪಕ್ಷದ ಪ್ರಮುಖರು,ಹಿಂದೂಪರ ಸಂಘಟನೆಗಳು ಎಲ್ಲರ ಮನವಳಿಕೆಯಿಂದ ಈ ಪ್ರಕರಣ ಸುಖಾಂತ್ಯ ಕಂಡಿದೆ. ಒಟ್ಟಾರೆಯಾಗಿ ಸೌಹಾರ್ದಯುತವಾಗಿ ಪ್ರಕರಣ ಬಗೆಹರಿದಿದ್ದು ಮುಂಚಿನ ಹಾಗೆಯೇ ಇಲ್ಲಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಲಾಗುತ್ತದೆ ಜೊತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಹಾಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಬೀದಿ ದೀಪಗಳು ಅಳವಡಿಸಲಾಗುತ್ತದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜೊತೆಗೆ ಸಹಕರಿಸಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305…