Home ಶಿವಮೊಗ್ಗShivamogga: ಖಾಕಿ ಕಟ್ಟೆಚ್ಚರ ಟಿಪ್ಪುವಿಗೆ ಭವ್ಯ ಅಲಂಕಾರ..! ಈದ್ ಮಿಲಾದ್ ಸಡಗರ..!

Shivamogga: ಖಾಕಿ ಕಟ್ಟೆಚ್ಚರ ಟಿಪ್ಪುವಿಗೆ ಭವ್ಯ ಅಲಂಕಾರ..! ಈದ್ ಮಿಲಾದ್ ಸಡಗರ..!

by EDITOR NEWS WARRIORS
0 comments

ಶಿವಮೊಗ್ಗ : ಇಂದು ಈ ಮಿಲಾದ್ ಆಚರಣೆ ವಿಜ್ರಂಭಣೆಯಿಂದ ನಡೆಯಲು ಮುಸ್ಲಿಂ ಬಾಂಧವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. 

ನಗರದ ಪ್ರಮುಖ ಬಡಾವಣೆಗಳಾದ ಟಿಪ್ಪು ನಗರ, ಆರ್ ಎಂ ಎಲ್ ನಗರ, ಬಾಪೂಜಿ ನಗರ, ಮದಾರಿಪಾಳ್ಯ, ಸೂಳೆಬೈಲು, ಅಮೀರ್ ಅಹ್ಮದ್ ಕಾಲೋನಿ ರಾಗಿಗುಡ್ಡ, ಮುಂತಾದ ಪ್ರದೇಶಗಳು ಸಂಪೂರ್ಣ ಹಸಿರುಮಯವಾಗಿದ್ದು ಮೆರವಣಿಗೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸಂಪೂರ್ಣ ದೀಪಾಲಂಕಾರದಿಂದ ಕೂಡಿದ ಟಿಪ್ಪುವಿನ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ ಟಿಪ್ಪು ನಡೆದು ಬರುತ್ತಿರುವ ದೃಶ್ಯ ನೋಡಲು ಜನ ಮುಗಿಲು ಬೀಳುತ್ತಿದ್ದಾರೆ.

ನಗರದ ಹಲವು ಕಡೆ ಟಿಪ್ಪುವಿನ ಕಟೌಟ್‌ಗಳು ದೀಪಾಲಂಕಾರದಿಂದ ರಾಜರಾಜಸುತ್ತಿದೆ ಅಮೀರ್ ಅಹ್ಮದ್ ವೃತ್ತದಲ್ಲಿ ಮೆಕ್ಕಾ ಮದೀನದ ಪ್ರತಿಮೆಗಳು ಸ್ಥಾಪಿಸಲಾದ ಸೂಳೆ ಬೈಲಿನಲ್ಲಿ, ಬಾಪೂಜಿನಗರದ ಎಲ್ ಇಡಿ ಪರದೆಯಲ್ಲಿ ಟಿಪ್ಪುವಿನ ಚಿತ್ರವು ಎಲ್ಲರ ಗಮನ ಸೆಳೆಯುತ್ತಿದೆ.

ಹೀಗೆ ಅಮೀರ್ ಅಹ್ಮದ್ ಕಾಲೋನಿ, ರಾಗಿಗುಡ್ಡ ಬಾಲರಾಜ್ ಅರಸ್ ರಸ್ತೆ, ಮೀನಾಕ್ಷಿಭವನ ರಸ್ತೆ ಬಾಪೂಜಿನಗರ, ಸಂಪೂರ್ಣ ದೀಪಾಲಂಕಾರದಿಂದ ಅಲಂಕಾರಗೊಂಡಿದ್ದು. ಈದ್ ಮಿಲಾದ್ ಆಚರಣೆಗೆ ಮುಸ್ಲಿಂ ಬಾಂಧವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಖಾಕಿ ಕಟ್ಟೆಚ್ಚರ ರೂಟ್ ಮಾರ್ಚ್..!

ನಾಳೆ ಈದ್ ಮೆರವಣಿಗೆ ಹಿನ್ನಲೆಯಲ್ಲಿ ಖಾಕಿ ಕಟ್ಟೆಚ್ಚರ ವಯಸಿದ್ದು ಎಸ್ಪಿ ಮಿಥುನ್ ಕುಮಾರ್ ತಂಡಕ್ಕೆ ಇದೊಂದು ಸವಾಲಿನ ಸಂಗತಿ ಪತ್ತೆ ಮತ್ತು ಆರ್. IF ತುಕಡಿ, ಸಶಸ್ತ್ರಪಡೆಗಳು ಮತ್ತು ಗೃಹರಕ್ಷಕದಳದ ರೂಟ್ ಮಾರ್ಚ್ ಸಹ ನಡೆಯಿತು. ಈದ್ ಮಿಲಾದ್ ಮೆರವಣಿಗೆಯ ಹಿನ್ನಲೆಯಲ್ಲಿ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 17 ಪೊಲೀಸ್ ಉಪಾಧೀಕ್ಷಕರು, 52 ಪೊಲೀಸ್ ನಿರೀಕ್ಷಕರು, 38 ಪೊಲೀಸ್ ಉಪ ನಿರೀಕ್ಷಕರು, 77 ಸಹಾಯಕ ಪೊಲೀಸ್ ನಿರೀಕ್ಷಕರು, 2000 ಪೊಲೀಸ್ ಹೆಡ್ ಕಾನ್ ಟೆಬಲ್ ಮತ್ತು ಪೊಲೀಸ್ ಕಾನ್ ಟೆಬಲ್ ಗಳು, 1000 ಗೃಹರಕ್ಷಕ ದಳ ಸಿಬ್ಬಂದಿಗಳು, 01 RAF ತುಕಡಿ, 01 SAF ತುಕಡಿ 08 DAR ತುಕಡಿ, 01 QRT ತುಕಡಿ ಮತ್ತು 10 KSRP ತುಕಡಿಗಳನ್ನು ನಿಯೋಜಿಸಲಾಗಿದೆ. 

ಕಿಡಿಗೇಡಿಗಳಿಗೆ ಈ ಮೂಲಕ ಖಡಕ್ ವಾರ್ನಿಂಗ್ ನೀಡಲಾಗುತ್ತದೆ.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...