ರಕ್ತದಾನ ಶ್ರೇಷ್ಠದಾನ ತಾಯಿಮನೆ ಸುದರ್ಶನ್ ಅವರಿಂದ 50ನೇ ಬಾರಿ ರಕ್ತದಾನ..!

by EDITOR NEWS WARRIORS
0 comments

ತಾಯಿಮನೆ ಸುದರ್ಶನ್ ಅವರಿಂದ ಐವತ್ತನೇ ಬಾರಿ ರಕ್ತದಾನ..!

 

 ತಾಯಿಮನೆ ಸಂಸ್ಥೆ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಕ್ಯಾನ್ಸರ್ ಪೇಶಂಟ್ ಮಗುವಿಗೆ ಸಹಾಯಾರ್ಥವಾಗಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಮೆಟ್ರೋ ಆಸ್ಪತ್ರೆಯ ವೈದ್ಯರಾದ ಡಾ. ಪೃಥ್ವಿ ಅವರು ಉದ್ಘಾಟಿಸಿ, ಒಂದು ಸಮಾಜ ಆರೋಗ್ಯವಾಗಿ ಸದೃಢವಾಗಿ ಇರಬೇಕಾದರೆ,ಎಲ್ಲರ ಆರೋಗ್ಯವು ಅತಿ ಮುಖ್ಯ. ಈ ನಿಟ್ಟಿನಲ್ಲಿ ರಕ್ತದಾನದಂತಹ ಪುಣ್ಯದ ಕೆಲಸ ನಮ್ಮನ್ನು ಶ್ರೇಷ್ಠತೆಗೆ ಕೊಂಡೊಯ್ಯುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು. ರಕ್ತದಾನದ ಬಗ್ಗೆ ಮೂಢನಂಬಿಕೆ ಬೇಡ, ರಕ್ತದಾನ ಮಾಡುವುದರಿಂದ ಸದಾ ಆರೋಗ್ಯವಂತರಾಗಿರುತ್ತಾರೆ. ರಕ್ತದಾನ ನಮ್ಮ ಆಯುಷ್ಯ ವನ್ನು ವೃದ್ಧಿ ಮಾಡುತ್ತದೆ ಹಾಗೆ ದೇಹದಲ್ಲಿ ರಕ್ತ ಸರಾಗವಾಗಿ ಸಂಚರಿಸುತ್ತದೆ ಆದ್ದರಿಂದ ರಕ್ತದಾನಿ ಸದಾ ಲವಲವಿಕೆ ಹಾಗೂ ಚಟುವಟಿಕೆಯಿಂದ ಕೂಡಿರುತ್ತಾನೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ಯುವಕರು ರಕ್ತದಾನ ಮಾಡುವುದರ ಮುಖಾಂತರ ರಕ್ತದಾನದ ಕೊರತೆಯನ್ನು ನೀಗಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ವೈದ್ಯರಾದ ಡಾಕ್ಟರ್ ಮಹೇಶ್ ಅವರು ಮಾತನಾಡುತ್ತಾ ರಕ್ತವನ್ನು ಕೇವಲ ದಾನಿಗಳಿಂದ ಮಾತ್ರ ಪಡೆಯಲು ಸಾಧ್ಯ. ವಿಜ್ಞಾನ ಎಷ್ಟೇ ಮುಂದುವರೆದರು ಕೃತಕವಾಗಿ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ರಕ್ತದಾನ ಮಾಡುವುದರ ಮುಖಾಂತರ ರೋಗಿಗಳ ಪ್ರಾಣವನ್ನು ಉಳಿಸುವಲ್ಲಿ ನಾವೆಲ್ಲರೂ ಪ್ರಮುಖ ಪಾತ್ರ ವಹಿಸೋಣ ಎಂದು ನುಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಕುಮಾರ್ ಅವರು ಮಾತನಾಡುತ್ತ, ರಕ್ತದಾನದಿಂದ ಏಕಾಗ್ರತೆ ಆರೋಗ್ಯ

 ಹಾಗೂ ನಮ್ಮ ದೇಹದಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಕೂಡಲೇ ತಿಳಿಯುತ್ತದೆ. ರಕ್ತದಾನದಿಂದ ನಮಗೆ ಹೆಚ್ಚು ಲಾಭವಾಗುತ್ತದೆ ಹಾಗೆ ಮನುಕುಲದ ಸೇವೆಗಳನ್ನು ಮಾಡುವುದರ ಮುಖಾಂತರ ತಾಯಿಮನೆ ಸಂಸ್ಥೆ ರಾಜ್ಯದಲ್ಲೇ ಮಾದರಿಯಾಗಿದೆ. ಎಂದು ನುಡಿದರು. ಅಧ್ಯಕ್ಷರು, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ದ ಕೆ ಚೇತನ್ ಅವರು, ಪ್ರತಿಯೊಬ್ಬ ಯುವಕರು ರಕ್ತದಾನ ಮಾಡಬೇಕೆಂದು ತಿಳಿಸಿದರು. ರಕ್ತದಾನ ಶ್ರೇಷ್ಠವಾದ ಕಾರ್ಯ ಎಂದು ತಿಳಿಸಿದರು.119 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರು ಮಾತನಾಡುತ್ತಾ ರಕ್ತದಾನದಿಂದ ಆಗುವ ಎಂಟು ಪ್ರಮುಖ ಮಹತ್ವ ಲಾಭಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಯಿಮನೆ ಸುದರ್ಶನ್ ಅವರು 50ನೇ ಬಾರಿ ರಕ್ತದಾನ ಮಾಡುವುದರ ಮುಖಾಂತರ ಹಲವಾರು ಯುವಕರಿಗೆ ಸ್ಪೂರ್ತಿಯಾದರು. ಈ ಸಂದರ್ಭದಲ್ಲಿ ಇತರ ಸಂಘ ಸಂಸ್ಥೆಯವರ ಸಹಾಯದೊಂದಿಗೆ 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶುಭಂ ಹೋಟೆಲ್ ಮಾಲೀಕರಾದ ಚಂದ್ರಹಾಸ ಶೆಟ್ಟಿ. ಉದಯ್. ಕಡಂಬ. ಆರ್ ಮನೋಹರ್, ಮೋಹನ್ ಕಲ್ಪತರು, ಸಂಜಯ್, ಸ್ಮಿತಾ ಮೋಹನ್, ಜೆಸಿ ಗಣೇಶ್ ಪೈ, ಜೆಸಿ ಗಣೇಶ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...