ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ಮಾಜಿ ರೌಡಿ ವೆಂಕಟೇಶ್ ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೌಡಿ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರರು ಹತ್ಯೆಗೈದಿದ್ದರು.
ಇಡೀ ತಂಡವನ್ನು ಬಂಧಿಸಿದ ಸರ್ಜಾಪುರಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು .
ಇದೀಗ ಜೈಲಿನಲ್ಲಿರುವ ಗುಬ್ಬಚ್ಚಿ ಸೀನ ತನ್ನ ಸಹಚರರ ಜೊತೆಗೆ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡು ಅದನ್ನು ತನ್ನ ಸ್ನೇಹಿತನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾನೆ.
ವೆಂಕಟೇಶ್ ಪತ್ನಿಯಿಂದ ದೂರು :
ಜೈಲಿನಲ್ಲಿ ಸೀನ ಹಾಗೂ ಆತನ ಬೆಂಬಲಿಗರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು ಆರೋಪಿಸಿ ಎಡಿಜಿಪಿ ದಯಾನಂದ್ ಅವರಿಗೆ ಮೃತ ವೆಂಕಟೇಶ್ ಪತ್ನಿ ದೂರು ನೀಡಿದ್ದು ಈ ದೂರು ಆಧರಿಸಿ ಎಡಿಜಿಪಿ ಅವರು, ಡಿಐಜಿ ನೇತೃತ್ವದಲ್ಲಿ ವಿಚಾರಣೆಗೆ ಸೂಚಿಸಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಬಗ್ಗೆ ಸುದ್ದಿಗಳು ವೈರಲ್ ಆಗಿ ಅಧಿಕಾರಿಗಳು ಅಮಾನತ್ತಿಗೆ ಒಳಗಾಗಿದ್ದರು ಅದೇ ರೀತಿ ದರ್ಶನ್ ಬೇಲ್ ರದ್ದತಿಗೂ ಕೂಡ ಈ ಪ್ರಕರಣ ಕಾರಣವಾಗಿತ್ತು.
ಹಳೆಯ ವಿಡಿಯೋ ಈಗ ವೈರಲ್ :
ಜೈಲಿನ ಅಧಿಕಾರಿಗಳ ಮಾಹಿತಿಯಂತೆ ಈ ವಿಡಿಯೋ ಹಳೆಯದ್ದಾಗಿದ್ದು ವೆಂಕಟೇಶ್ ಪತ್ನಿ ದೂರು ನೀಡಿ ಹತ್ತು ದಿನ ಕಳೆದಿದೆ ಇದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎನ್ನುತ್ತಾರೆ.
ಒಟ್ಟಿನಲ್ಲಿ ಜೈಲಿನ ಸಿಬ್ಬಂದಿಗಳ ಸಹಕಾರವಿಲ್ಲದೆ ಇದು ನಡೆಯಲು ಅಸಾಧ್ಯ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಸಿಬ್ಬಂದಿಗಳನ್ನು ಅಮಾನತ್ತಿಗೆ ಒಳಪಡಿಸಬೇಕು.