Home ಶಿವಮೊಗ್ಗಹಾಪ್ ಕಾಮ್ಸ್ ಚುನಾವಣೆ : ದನಿ ವಿಜಯ ಕುಮಾರ್ ಸತತ 3ನೇ ಬಾರಿಗೆ ಪತ್ರಕರ್ತ ನಾಗೇಶ್ ನಾಯ್ಕ ಸೇರಿದಂತೆ 15 ಜನ ನಿರ್ದೇಶಕರು ಅವಿರೋಧ ಆಯ್ಕೆ..!

ಹಾಪ್ ಕಾಮ್ಸ್ ಚುನಾವಣೆ : ದನಿ ವಿಜಯ ಕುಮಾರ್ ಸತತ 3ನೇ ಬಾರಿಗೆ ಪತ್ರಕರ್ತ ನಾಗೇಶ್ ನಾಯ್ಕ ಸೇರಿದಂತೆ 15 ಜನ ನಿರ್ದೇಶಕರು ಅವಿರೋಧ ಆಯ್ಕೆ..!

by EDITOR NEWS WARRIORS
0 comments
ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್‌ಕಾಮ್ಸ್) ನಿರ್ದೇಶಕರಾಗಿ ವೆಂಟಕಪುರದ ಎಂ.ಪಿ.ದಿನೇಶ್ ಪಟೇಲ್ ಹಾಗೂ ಜಿ.ನಾಗೇಶ್‌ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ ೧೫ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಜಿಲ್ಲೆಯಲ್ಲಿ ಒಟ್ಟು ೧೫ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ ಶಿವಮೊಗ್ಗ ತಾಲೂಕಿನಿಂದ ೬ಜನರು ಆಯ್ಕೆಯಾಗಿದ್ದು, ಪರಿಶಿಷ್ಟ ವರ್ಗದಿಂದ ಸಹಕಾರಿ ಹಾಗೂ ಪತ್ರಕರ್ತರಾದ  ನಾಗೇಶ್‌ನಾಯ್ಕ್, ಸಾಮಾನ್ಯ ವರ್ಗದಿಂದ ಎಂ.ಪಿ.ದಿನೇಶ್‌ಪಟೇಲ್, ಎಸ್ಟಿ ಕ್ಷೇತ್ರದಿಂದ ಪರಶುರಾಮ್, ಸಾಮಾನ್ಯ ಕ್ಷೇತ್ರದಿಂದ ವಿಜಯಕುಮಾರ್ (ದನಿ) ಬಿಸಿಎಂಎ ನಿಂದ ಡಾ.ಶರತ್ ಮರಿಯಪ್ಪ, ಬಿಸಿಎಂಬಿ ನಿಂದ ಚಂದ್ರೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು ೧೫ಜನರು ಮುಂದಿನ ೫ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೫ ಕ್ಷೇತ್ರಕ್ಕೆ ೨೦ಜನರು ನಾಮಪತ್ರ ಸಲ್ಲಿಸಿದ್ದು,
ಐವರು ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಗೊಂಡಂತಾಗಿದೆ.
ಸತತ ಮೂರನೇ ಬಾರಿಗೆ ಹಾಪ್ ಕಾಮ್ಸ್ ‌ ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ನನ್ನ ಮೇಲೆ ನಂಬಿಕೆ ಇಟ್ಟು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ .

-ದನಿ ವಿಜಯ್ ಕುಮಾರ್ ನಿರ್ದೇಶಕರು ಹಾಪ್ ಕಾಮ್ಸ್.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...