Home ರಾಜ್ಯಸ್ಕೂಲ್ ಡೇಸ್” ಚಿತ್ರೀಕರಣ ಪ್ರಾರಂಭ

ಸ್ಕೂಲ್ ಡೇಸ್” ಚಿತ್ರೀಕರಣ ಪ್ರಾರಂಭ

by EDITOR NEWS WARRIORS
0 comments

  • ಹಿರೇಬಾಗೇವಾಡಿ : ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ , ಕುಂದಾ ನಗರಿ ಡಿಂಪಲ್ ಕ್ವೀನ್ ಪ್ರೀಯಾ , ನಮ್ರತಾ ನಾಯಕಿ ನಟಿಯಾಗಿ ಅನೀಲ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ‘ಸ್ಕೂಲ್ ಡೇಸ್’ ಚಿತ್ರೀಕರಣಕ್ಕೆ ಇಲ್ಲಿನ ಕರ್ನಾಟಕ ಹೈಸ್ಕೂಲ್‌ನಲ್ಲಿ ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹಾಗೂ ಬಡೇಕೊಳ್ಳಮಠದ ನಾಗೇಂದ್ರಸ್ವಾಮೀಜಿ ಕ್ಯಾಮರಾ ಗುಂಡಿಯನ್ನು ಒತ್ತಿ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು.

  • ಜಿವಿವಿ ಸಂಘದ ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಆರ್ ಇಎಂಎಸ್ ಶಾಲೆಯ ಅಧ್ಯಕ್ಷ ಸುರೇಶ ಇಟಗಿ,ಸಂಯೋಜಕ ಆನಂದ ಕಳಸದ, ಪತ್ರಕರ್ತ ಸೋಮಶೇಖರ ಸೊಗಲದ ,ದಯಾನಂದ ಮುಪ್ಪೆನವರಮಠ ಮೊದಲಾದವರು ಆಗಮಿಸಿದ್ದರು. ಸುಮಾರು ಮೂವತ್ತು ದಿನಗಳ ಕಾಲ ಬೆಳಗಾವಿ, ಹಿರೇಬಾಗೇವಾಡಿ, ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವದಾಗಿ ಚಿತ್ರ ತಂಡ ಹೇಳಿದ್ದು , ಸ್ಕೂಲ್ ಡೇಸ್ ಚಿತ್ರದಲ್ಲಿ ಅನೀಲ ಹುದಲಿ, ನಾಯಕಿಯರಾಗಿ ಪ್ರೀಯಾ, ನಮ್ರತಾ , ಮಲ್ಲಿಕಾರ್ಜುನ, ಸಂದೀಪ, ದಾನೇಶ ಖಳನಾಯಕನಾಗಿ ವಿರಾಜ್, ಪ್ರಾಂಶುಪಾಲರಾಗಿ ಪತ್ರಕರ್ತ ಸೋಮಶೇಖರ ಸೊಗಲದ ಅಭಿನಯಿಸುತ್ತಿದ್ದಾರೆ. ಪಕ್ಕಾ ಹಾಸ್ಯ ಮತ್ತು ಮನೋರಂಜನೆಯ ಚಿತ್ರ ಇದಾಗಿದ್ದು ಎಲ್ಲರ ಮನವನ್ನು ಸೆಳೆಯುತ್ತದೆ. ಎಲ್ಲ ಅಂದು ಕೊಂಡಂತೆ ಆದರೆ ಈ ವರ್ಷದ ಕೊನೆಯೊಳಗೆ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ತರುವ ಯೋಚನೆ ಇದೆ ಎಂದು ನಿರ್ಮಾಪಕ ಉಮೇಶ್ ಹಿರೇಮಠ ಹೇಳುತ್ತಾರೆ.

  • ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ನಮ್ಮಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡಬೇಕು. ಇದರಲ್ಲಿ ಸಹಜ ರೀತಿಯಲ್ಲಿ ತುಂಬಾ ಉತ್ತಮವಾಗಿ ಅಭಿನಯಿಸುತ್ತಿದ್ದಾರೆ. ನಿಜಕ್ಕೂ ಖುಷಿಯಾಗುತ್ತಿದೆ ಎಂದು ನಿರ್ದೇಶಕ ಸಂಜಯ್ ಹೇಳುತ್ತಾರೆ.
    ತಾಂತ್ರಿಕ ವರ್ಗದಲ್ಲಿ ಕೃಷ್ಣ ಎ.ಆರ್.ಛಾಯಾಗ್ರಹಣ ಮತ್ತು ಸಂಕಲನ, ಮೇಕಪ್ ನಾಗೇಶ್, ಸಂಗೀತ ಬಿಜೆ ಸೂರ್ಯ, ರಾಮಕೃಷ್ಣ ಸಿ ಎಚ್, ಕೋರಿಯೋಗ್ರಫಿ ಖ್ಯಾತ ನೃತ್ಯ ನಿರ್ದೇಶಕರಾದ ಮದನ್ ಹರಿಣಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ, ಸಹಕಾರ ನಿರ್ದೇಶನ ರಂಜಿತ ತಿಗಡಿ, ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ಯುವ ಉತ್ಸಾಹಿ ನಿರ್ದೇಶಕ ಸಂಜಯ್ ಹಲಸಗಿ ಅವರದಿದ್ದು ನಿರ್ಮಾಪಕರು ಉಮೇಶ ಹಿರೇಮಠ ಆಗಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...