Home ರಾಜ್ಯ೧೩ ಜುಲೈ ರಂದು ಸನಾತನ ಸಂಸ್ಥೆಯ ವತಿಯಿಂದ ‘ಗುರುಪೂರ್ಣಿಮಾ ಮಹೋತ್ಸವದ ಆಯೋಜನೆ..!!

೧೩ ಜುಲೈ ರಂದು ಸನಾತನ ಸಂಸ್ಥೆಯ ವತಿಯಿಂದ ‘ಗುರುಪೂರ್ಣಿಮಾ ಮಹೋತ್ಸವದ ಆಯೋಜನೆ..!!

by EDITOR NEWS WARRIORS
0 comments

ಬೆಂಗಳೂರು : ಹಿಂದೂ ಧರ್ಮದ ಅದ್ವಿತೀಯ ಶ್ರೇಷ್ಠ ಪರಂಪರೆ ಎಂದರೆ ‘ಗುರು-ಶಿಷ್ಯ ಪರಂಪರೆ’ ! ರಾಷ್ಟ್ರ ಮತ್ತು ಧರ್ಮವು ಸಂಕಷ್ಟದಲ್ಲಿರುವಾಗ ಸುವ್ಯವಸ್ಥೆಯನ್ನು ನಿರ್ಮಿಸುವ ಮಹಾನ್ ಕಾರ್ಯವನ್ನು ಗುರು-ಶಿಷ್ಯರು ಮಾಡಿದ ಗೌರವಶಾಲಿ ಇತಿಹಾಸವು ಭಾರತಕ್ಕೆ ಲಭಿಸಿದೆ. ಆಯಾ ಸಮಯದಲ್ಲಿ ಅಧರ್ಮವು ಅತಿರೇಕವಾದಾಗ ಭಗವಾನ ಶ್ರೀಕೃಷ್ಣನು ಅರ್ಜುನನಿಂದ, ಆರ್ಯ ಚಾಣಕ್ಯನು ಸಾಮ್ರಾಟ ಚಂದ್ರಗುಪ್ತನಿಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಸಂತ ತುಕಾರಾಮ ಮಹಾರಾಜರು ಹಾಗೂ ಸಮರ್ಥ ರಾಮದಾಸಸ್ವಾಮಿಯವರ ಕೃಪೆಯಿಂದ ಆದರ್ಶವಾದ ಧರ್ಮಾಧಿಷ್ಠಿತ ರಾಜ್ಯವನ್ನು ಸ್ಥಾಪಿಸಿದರು. ಇಂದಿಗೂ ರಾಷ್ಟ್ರ ಮತ್ತು ಧರ್ಮ ಇವುಗಳ ದುಃಸ್ಥಿತಿಯುಂಟಾಗಿದೆ. ಇದಕ್ಕೆ ‘ಹಿಂದೂ ರಾಷ್ಟ್ರ’ ಸ್ಥಾಪನೆಯೊಂದೇ ಪರಿಹಾರವಾಗಿದೆ. ಹಿಂದೂ ರಾಷ್ಟ್ರ ಅಂದರೆ ಧರ್ಮನಿಷ್ಠ ಸಮಾಜವನ್ನು ರೂಪಿಸಲು ಪ್ರಯತ್ನಿಸುವುದು ಕಾಲಾನುಸಾರ ಸರ್ವೋತ್ತಮ ಗುರುಸೇವೆಯೇ ಆಗಿದೆ. ಈ ಸಂದೇಶವನ್ನು ನೀಡಲು, ‘ಸನಾತನ ಸಂಸ್ಥೆ’ಯ ವತಿಯಿಂದ ೧೩ ಜುಲೈ ೨೦೨೨ ರ ಬುಧವಾರ ಸಂಜೆ ೫.೩೦ ಕ್ಕೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಅದರ ವಿವರ ಈ ಕೆಳಗಿನಂತಿದೆ..


೧. ಶ್ರೀ ಪದ್ಮಾವತಿ ಕಲ್ಯಾಣ ಮಂಟಪ, ಕಾರ್ಡ್ ರಸ್ತೆ, ರಾಜಾಜಿನಗರ.
೨. ಶ್ರೀ ಭವಾನಿ ಕಲ್ಯಾಣಮಂಟಪ, ಗಾಂಧಿಬಜಾರ್, ಬಸವನಗುಡಿ.
೩. ಆರ್. ವಿ. ಕಲ್ಯಾಣಮಂಟಪ, ಮಾರುತಿನಗರ, ಯಲಹಂಕ.
ಎಲ್ಲ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಕುಟುಂಬ ಸಮೇತರಾಗಿ ಉಪಸ್ಥಿತರಿದ್ದು ಈ ಅಮೂಲ್ಯ ಅವಕಾಶದ ಲಾಭ ಪಡೆದುಕೊಳ್ಳಬೇಕೆಂದು ಈ ಮೂಲಕ ಸನಾತನ ಸಂಸ್ಥೆಯು ಕರೆ ನೀಡುತ್ತಿದೆ.
ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ (ಗುರುಪೂಜೆ); ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ’ ಈ ವಿಷಯಗಳ ಕುರಿತು ವಕ್ತಾರರಿಂದ ವಿಶೇಷ ಮಾರ್ಗದರ್ಶನ ನಡೆಯಲಿದೆ. ಈ ಗುರುಪೂರ್ಣಿಮೆಯಲ್ಲಿ ‘ರಾಷ್ಟ್ರ ಧರ್ಮ ಸಂಘಟನೆಯ ಅಧ್ಯಕ್ಷರಾದ ಶ್ರೀ. ಸಂತೋಷ ಕೆಂಚಾಂಬ, ಹಿಂದೂ ಹೋರಾಟಗಾರರಾದ ಶ್ರೀ. ಪ್ರಶಾಂತ ಸಂಬರ್ಗಿ, ವಿಶ್ವ ಸನಾತನ ಪರಿಷತ್‌ನ ಅಧಕ್ಷರಾದ ಶ್ರೀ. ಎಸ್. ಭಾಸ್ಕರನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾರ್ಗದರ್ಶನ ಮಾಡಲಿದ್ದಾರೆ. ಈ ಮಹೋತ್ಸವದಲ್ಲಿ ‘ಸ್ವಸಂರಕ್ಷಣ ಪ್ರಾತ್ಯಕ್ಷಿಕೆ’ಯು ವಿಶೇಷ ಆಕರ್ಷಣೆ ಇರಲಿದೆ. ಅಲ್ಲದೆ, ಈ ಮಹೋತ್ಸವದಲ್ಲಿ ಧರ್ಮ, ಅಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ, ಸ್ವರಕ್ಷಣೆ, ಹಿಂದೂ ರಾಷ್ಟ್ರ ಮುಂತಾದ ವಿವಿಧ ವಿಷಯಗಳ ಗ್ರಂಥಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಲಾಗುವುದು.


ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : ೯೩೪೨೫೯೯೨೯೯…

ರಘುರಾಜ್ ಹೆಚ್.ಕೆ…9449553305…..

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...