127
ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಸಾಗರ ಕ್ಷೇತ್ರದ ಶಾಸಕರಾದ ಬೇಲೂರು ಗೋಪಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದು ಪತ್ರಿಕೆ ಜೊತೆ ಮಾತನಾಡುತ್ತಾ ಹಾಲಪ್ಪ ಐದು ಕೋಟಿ ಅಲ್ಲ 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿಕೊಳ್ಳಲಿ ಎಂದು ಬಹಿರಂಗ ಸವಾಲ್ ಹಾಕಿದ್ದಾರೆ.
ಏನಿದು ಘಟನೆ:
ಮಾಜಿ ಸಚಿವ ಹರತಾಳು ಹಾಲಪ್ಪ ಶಾಸಕ ಬೇಲೂರು ಗೋಪಾಲಕೃಷ್ಣ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬೇಲೂರು ಗೋಪಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಗಂದೂರು ದೇವಸ್ಥಾನದ ವಿಚಾರವಾಗಿ ಈ ಮಾತಿನ ಸಮರ ಪ್ರಾರಂಭವಾಗಿದ್ದು ಅದು ಈಗ ನ್ಯಾಯಾಲಯದ ಮೆಟ್ಟಿಲೇರಿದೆ.
ಅಂದು ಶಾಸಕರಾಗಿದ್ದ ಹರತಾಳ ಹಾಲಪ್ಪ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿಯ ರಾಮಪ್ಪನವರ ನಡುವೆ ವೈ ಮನಸ್ಸು ಇದ್ದ ಕಾರಣ ಅಂದಿನ ಬಿಜೆಪಿ ಸರ್ಕಾರ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಾಗ ವಿರೋಧ ವ್ಯಕ್ತಪಡಿಸಲಿಲ್ಲ ಮೌನ ಸಮ್ಮತಿಯನ್ನು ಸೂಚಿಸಿದ್ದು ಒಂದು ವೇಳೆ ನಾನು ಆ ಸಮಯದಲ್ಲಿ ಶಾಸಕನಾಗಿದ್ದರೆ ಅದನ್ನು ಪ್ರಬಲವಾಗಿ ವಿರೋಧ ಮಾಡುತ್ತಿದೆ ಆದರೆ ಹಾಲಪ್ಪ ಬೇಕಂತಲೇ ಸುಮ್ಮನಿದ್ದು ಮುಜರಾಯಿ ಇಲಾಖೆಗೆ ಸೇರಲಿ ಎಂದು ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ನಾನು ಬಹಿರಂಗವಾಗಿ ಅವರ ವಿರುದ್ಧ ಮಾತನಾಡಿದ್ದೇನೆ ನನ್ನ ಮೇಲೆ 5 ಕೋಟಿ ಅಲ್ಲ 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲಿ ಎದುರಿಸಲು ಸಿದ್ಧ .
ಬೇಲೂರು ಗೋಪಾಲಕೃಷ್ಣ, ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ.
ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ನಮ್ಮ ಕುಟುಂಬದ ಹಿಂದಿನ ತಲೆಮಾರಿನಿಂದಲೂ ನಾವು ಅದರ ಭಕ್ತರು ನಾನು ಆಡಳಿತ ಮಂಡಳಿಯ ಪರವಾಗಿ ಅಥವಾ ಅಲ್ಲಿ ಪೂಜೆ ಮಾಡುವ ಭಟ್ಟರ ಪರವಾಗಿಯೂ ನಿಂತಿಲ್ಲ ನಾನು ದೇವಸ್ಥಾನದ ದೇವರ ಪರವಾಗಿ ನಿಂತಿದ್ದೇನೆ ಅಷ್ಟೇ ವಿನಾಕಾರಣ ಯಾವುದೇ ಸಾಕ್ಷಾಧಾರಗಳಿಲ್ಲದೆ ಇಂದಿನ ಶಾಸಕ ಬೇಳೂರು ಗೋಪಾಲ ಕೃಷ್ಣ ನನ್ನ ವಿರುದ್ಧ ಬಹಿರಂಗವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಆದ್ದರಿಂದ ನಾನು ಅವರ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಸರಿಯಾದ ಸಾಕ್ಷಾಧಾರಗಳು ಇದ್ದರೆ ಕೋರ್ಟಿನಲ್ಲಿ ಸಲ್ಲಿಸಲಿ ಅದು ಬಿಟ್ಟು ಹೀಗೆ ಬಹಿರಂಗವಾಗಿ ಹೇಳುವುದು ಎಷ್ಟು ಸರಿ.