Home ಶಿವಮೊಗ್ಗಆರೋಗ್ಯಉನ್ನತ ವ್ಯಾಸಾಂಗಕ್ಕೆ ತೆರಳುತ್ತಿರುವ ವೈದ್ಯಾಧಿಕಾರಿ ಡಾ// ಹರ್ಷರವರಿಗೆ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯ ಅಭಿನಂದನೆ..!!

ಉನ್ನತ ವ್ಯಾಸಾಂಗಕ್ಕೆ ತೆರಳುತ್ತಿರುವ ವೈದ್ಯಾಧಿಕಾರಿ ಡಾ// ಹರ್ಷರವರಿಗೆ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯ ಅಭಿನಂದನೆ..!!

by EDITOR NEWS WARRIORS
0 comments

ತಿರ್ಥಹಳ್ಳಿ : ಮೇಗರವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಗಾರಿನ ವೈದ್ಯಾಧಿಕಾರಿ ಡಾ/ ಹರ್ಷ ಜನರಲ್ ಮೆಡಿಸಿನ್ ವಿಭಾಗದಲ್ಲಿ ಉನ್ನತ ವ್ಯಾಸಾಂಗಕ್ಕೆ ತೆರಳುತ್ತಿದ್ದು .ವೈದ್ಯಾಧಿಕಾರಿ ಡಾ.ಹರ್ಷರವರಿಗೆ ಪ್ರಾ.ಆ.ಕೇಂದ್ರ ಮೇಗರವಳ್ಳಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಿ,ಹಾರ್ದಿಕವಾಗಿ ಶುಭ ಹಾರೈಸಲಾಯಿತು.

ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಸಾತ್ವಿಕ ಸಜ್ಜನಿಕೆಯ ನಡೆನುಡಿ, ಹಸನ್ಮುಖಿ ವ್ಯಕ್ತಿತ್ವದ ಜೊತೆಗೆ ಹಗಲಿರುಳೆನ್ನದೆ ರೋಗಿಗಳ ಅಗತ್ಯಕ್ಕೆ ಸ್ಪಂದಿಸುತಿದ್ದ ಯುವ ಉತ್ಸಾಹಿ ವೈದ್ಯಾಧಿಕಾರಿ ಡಾ.ಹರ್ಷರವರ ಜನಪರ ಕಾಳಜಿ ಬದ್ದತೆಗಳು ನಿಜಕ್ಕೂ ಮಾದರಿ. ಇಂತಹ ಉತ್ತಮ ವೈದ್ಯಾಧಿಕಾರಿಗಳ ಉನ್ನತ ವ್ಯಾಸಾಂಗದಿಂದ ಸಮಾಜಕ್ಕೆ ಖಂಡಿತವಾಗಿಯೂ ಇನ್ನಷ್ಟು ಹೆಚ್ಚಿನ ಆರೋಗ್ಯ ಸೇವೆ ದೊರಕಲಿದೆ. ಇಂತಹ ಸಜ್ಜನ ವೈದ್ಯಾಧಿಕಾರಿಗಳ ಸಂಖ್ಯೆ ಹೆಚ್ಚಲಿ. ಇವರ ಉನ್ನತ ವ್ಯಾಸಾಂಗಕ್ಕೆ ದೊಡ್ಡ ಯಶಸ್ಸು ಲಭಿಸಲಿ, ಇವರಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ದೊರಕಲಿ ಎಂದು ಶುಭ ಹಾರೈಸಿದರು.

ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಗೀತಾ ಚಂದ್ರಮೌಳಿ, ಶುಶ್ರೂಷಣಾಧಿಕಾರಿ ನಿರ್ಮಲ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಅನುಸೂಯ ಬಿ ಆರ್. ಫಾರ್ಮಸಿ ಅಧಿಕಾರಿ ಸನ್ನಿಧಿ, ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ರಾಘವೇಂದ್ರ, ಕೈಲಾಸ್, ಲಿಷಾ, ಡಿ ದರ್ಜೆ ನೌಕರರಾದ ಪಾರ್ವತಿ,ಗಣೇಶ, ವಾಹನ ಚಾಲಕ ಸುಂದರೇಶ್ ಮತ್ತಿತರರಿದ್ದರು.

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...