Home ರಾಜ್ಯರಾಜ್ಯದ ಹಿರಿಯ ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ, ಲೇಖಕ, ಮಲೆನಾಡಿನ ಹೆಮ್ಮೆಯ ಡಾ// ಎಚ್, ಆರ್ ಕೃಷ್ಣಮೂರ್ತಿ ಇನ್ನಿಲ್ಲ..!!

ರಾಜ್ಯದ ಹಿರಿಯ ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ, ಲೇಖಕ, ಮಲೆನಾಡಿನ ಹೆಮ್ಮೆಯ ಡಾ// ಎಚ್, ಆರ್ ಕೃಷ್ಣಮೂರ್ತಿ ಇನ್ನಿಲ್ಲ..!!

by EDITOR NEWS WARRIORS
0 comments

ಶಿವಮೊಗ್ಗ : ಮೂಲತಃ ತೀರ್ಥಹಳ್ಳಿ ತಾಲೂಕಿನ ಹೊಸಬೀಡು ಗ್ರಾಮದ ಎಚ್ಆರ್ ಕೃಷ್ಣಮೂರ್ತಿಯವರು ಮಲೆನಾಡಿನ ಸಾಹಿತ್ಯಕ ಹೋರಾಟಗಳಲ್ಲಿ ಬೆಳೆದವರು ಇವರು ತಮ್ಮ ಸುದೀರ್ಘ ಬೋಧನದ ಅವಧಿಯಲ್ಲಿ ಅರ್ಥಶಾಸ್ತ್ರ, ಸಾಮಾನ್ಯ ಜ್ಞಾನದ ಬಗ್ಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರರಾಗಿದ್ದ ಇವರು ತಮ್ಮ ಪತ್ನಿ ಕಲ್ಪನಾ ಮೂರ್ತಿ, ಪುತ್ರಿ ಪ್ರಿಯಾಂಕ, ಪುತ್ರ ಅಭಿಷೇಕ್, ಹಾಗೂ ಅಪಾರ ಸ್ನೇಹಿತರನ್ನು, ಹಿತೈಷಿಗಳನ್ನು, ಬಂಧುಗಳನ್ನು , ಬಿಟ್ಟು ನಿನ್ನೆ ಅಂದರೆ ಶನಿವಾರ ರಾತ್ರಿ ನಿಧನರಾಗಿದ್ದಾರೆ ಎನ್ನುವುದು ದುಃಖದ ಸಂಗತಿ.

ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಸುದೀರ್ಘ 36 ವರ್ಷಗಳ ಸೇವೆ :

ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ದೀರ್ಘ ಮೂವತ್ತಾರು ವರ್ಷಗಳ ಸೇವೆ ಸಲ್ಲಿಸಿದ ಇವರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಾದ ಜಯನಗರ, ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ :

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದ RANK ವಿದ್ಯಾರ್ಥಿಯಾಗಿದ್ದರು. ವಿಶ್ವವಿದ್ಯಾನಿಲಯದ ಅನುದಾನದ ಆಯೋಗ (UGC) ನವದೆಹಲಿಯ ಪರಮರ್ಷನ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು. ಹಲವಾರು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತಿದ್ದರು.

ಅರೆಕಾಲಿಕ ಲೇಖಕರಾಗಿ ವರದಿಗಾರರಾಗಿ ಸೇವೆ :

ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಾದ, ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಗಳಿಗೆ ನಿರಂತರವಾಗಿ ವರದಿ ಮಾಡುವುದು ಲೇಖನವನ್ನು ನೀಡುವುದು ಇವರ ಹವ್ಯಾಸಗಳಲ್ಲಿ ಒಂದಾಗಿತ್ತು. ಈ ಮೂಲಕ ಅರೆಕಾಲಿಕ ವರದಿಗಾರರಾಗಿ, ಲೇಖಕರಾಗಿ,ಪ್ರಸಿದ್ಧಿ ಪಡೆದಿದ್ದರು.

ಇಂತಹ ಮೇರು ವ್ಯಕ್ತಿತ್ವದ ಮಲೆನಾಡಿನಲ್ಲಿ ಹುಟ್ಟಿ ತಮ್ಮ ಸುದೀರ್ಘ ಸೇವೆಯನ್ನು ನಾಡಿನಾದ್ಯಂತ ನೀಡಿದ ಡಾ// ಎಚ್, ಆರ್ ಕೃಷ್ಣಮೂರ್ತಿ ಅವರಿಗೆ ನ್ಯೂಸ್ ವಾರಿಯರ್ಸ್ ಪತ್ರಿಕಾ ಬಳಗದ ವತಿಯಿಂದ ಭಾವಪೂರ್ವ ಶ್ರದ್ದಾಂಜಲಿಗಳು…

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...