Home ರಾಜ್ಯಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆ: ರೋಟೇರಿಯನ್‌ ಸಹಕಾರ ರತ್ನ ಬಿ. ನಾಗರಾಜ್‌..!!

ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆ: ರೋಟೇರಿಯನ್‌ ಸಹಕಾರ ರತ್ನ ಬಿ. ನಾಗರಾಜ್‌..!!

by EDITOR NEWS WARRIORS
0 comments
..

ರೋಟರಿ ಬೆಂಗಳೂರು ರಾಜರಾಜೇಶ್ವರಿನಗರ ಸೆಂಟೇನಿಯಲ್‌ ಕ್ಲಬ್‌ ಅಧ್ಯಕ್ಷರಾಗಿ ಸಹಕಾರ ರತ್ನ ಬಿ. ನಾಗರಾಜ್‌ ಅಧಿಕಾರ ಸ್ವೀಕಾರ…

ಬೆಂಗಳೂರು ಜುಲೈ 11: ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆಸಲ್ಲಿಸುವುದಾಗಿ ಸಹಕಾರರತ್ನ ರೋಟರಿಯನ್ ಬಿ.ನಾಗರಾಜ ತಿಳಿಸಿದರು.

ರೋಟರಿ ಬೆಂಗಳೂರು ರಾಜರಾಜೇಶ್ವರಿನಗರ ಸೆಂಟೇನಿಯಲ್ ಕ್ಲಬ್‌ ಅಧ್ಯಕ್ಷರಾಗಿ ಸಹಕಾರರತ್ನ ರೋಟರಿಯನ್ ಬಿ.ನಾಗರಾಜ ಅವರು ಪದವಿ ಸ್ವೀಕರಿಸಿ ಮಾತನಾಡಿದರು, ರೋಟರಿ ಕ್ಲಬ್‌ ಸಮಾಜದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳ ಮೂಲಕ ತನ್ನದೇ ಅದ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ವರ್ಷದ ರೋಟರಿ ಇಂಟರ್‌ನ್ಯಾಷನಲ್‌ ಥೀಮ್‌ ಆಗಿರುವ “ಇಮ್ಯಾಜಿನ್‌ ರೋಟರಿ” ಯ ಅಡಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಆಡಳಿತ ಮಂಡಳಿಯ ಸದಸ್ಯರುಗಳು ಸ್ಟಾರ್‌ ವಾಕರ್ಸ್‌ಗಳಾಗಿ ಕಾರ್ಯನಿರ್ವಹಿಸಲಿದ್ದೇವೆ. ಅಲ್ಲದೇ, ರೋಟರಿ ಕ್ಲಬ್‌ ನ ಯೋಜನೆಗಳ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಶ್ರಮಿಸಲಿದ್ದೇವೆ ಎಂದು ಹೇಳಿದರು.

ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ 3190 ನೇ ಜಿಲ್ಲೆಯ ಜಿಲ್ಲಾರಾಜ್ಯಪಾಲಕರಾದ ರೋಟರಿಯನ್ ಜಿತೇಂದ್ರ ಅನೇಜಾರವರು ಪ್ರಮಾಣವಚನ ಭೋಧಿಸಿದರು.

ಆಡಳಿತ ಮಂಡಳಿ:


ವಿ.ಜಿ ಕಾಸಲ್ – ಮಾಜಿ ಅಧ್ಯಕ್ಷರು, ರಾಘವೇಂದ್ರ ಇನಾಂದಾರ್‌ -ಉಪಾಧ್ಯಕ್ಷರಾಗಿ, ರಘುಬನ್ನೂರು-ಕಾರ್ಯದರ್ಶಿ, ಎಂ.ಜೆ ಪ್ರಶಾಂತ್ – ಪಿ.ಈ, ಎಂ.ಸುಪ್ರೀತ್ – ಜಂಟಿಕಾರ್ಯದರ್ಶಿ, ಲತಾ ಅಡಿಕೆ-ಖಜಾಂಚಿ, ಶರ್ಮಿಳಾ ಗಣೇಶ್ – ಸಾರ್ಜೆಂಟ್
ನಿರ್ದೇಶಕರುಗಳಾಗಿ ಬೀನಾ ಶ್ರೀಹರಿ, ಎಆರ್‌ಸಿ ಸಿಂದ್ಯಾ, ಟಿ.ಎಂ. ಸೂರಜ್, ಸವಿತ ಇನಾಂದಾರ್, ವಿವೇಕ್‌ಚಂದ್ರ ಸುರೇಶ್‌ಮಾದವನ್ ಮತ್ತು ಸತ್ಯನಾರಾಯಣರವರು ಆಯ್ಕೆಯಾದರು.

ಸಹಾಯಕ ರಾಜ್ಯ ಪಾಲಕರಾದ ರವಿನರಸಿಂಹನ್ ರವರು ಕ್ಲಬ್‌ನ ಸವಿ ಸಂಚಿಕೆಯನ್ನು ಬಿಡುಗಡೆಮಾಡಿದರು. ವಲಯ ರಾಜ್ಯಪಾಲಕರಾದ ಶೋಭಾ ಮುರಳಿಯವರು ಜನರ ಸೇವೆಗಾಗಿ ಹಣ ಸಂಗ್ರಹ ಮಾಡುವ ಬಗ್ಗೆ ತಿಳಿಸಿದರು. ಐದು ವರ್ಷದ ಹೆಣ್ಣುಮಗುವಾದ ಕುಮಾರಿ ದ್ಯುತಿ ಹೃದಯ ಚಿಕಿತ್ಸೆಗಾಗಿ ರೊಟೇರಿಯನ್‌ ಶರ್ಮಿಲಾ ಗಣೇಶ್‌ರವರು 35000 ರೂಗಳನ್ನು ದೇಣಿಗೆ ನೀಡಿದರು ಮತ್ತು 3190 ನೇ ರೋಟರಿ ಜಿಲ್ಲೆಯವರು 95000/- ರೂಗಳನ್ನು ದೇಣಿಗೆ ನೀಡಲಿದ್ದಾರೆ.

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!