Home ರಾಜ್ಯಗೃಹ ಸಚಿವರ ಸ್ವಕ್ಷೇತ್ರದಲ್ಲಿ “”ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ””..?!!!!ಭಯದ ವಾತಾವರಣದಲ್ಲಿ ತೀರ್ಥಹಳ್ಳಿ ಪಟ್ಟಣದ ಜನತೆ..!!!! ಸದ್ಯದಲ್ಲೇ ಇನ್ನೊಂದು “”ಹುಣಸೂಡ್ ಪ್ರಕರಣ”” ಆಗುವ ಸಾಧ್ಯತೆ..!!!!ಜಿಲ್ಲಾಧಿಕಾರಿಗಳೇ, ಜಿಲ್ಲಾ ರಕ್ಷಣಾಧಿಕಾರಿಗಳೇ ಅನಾಹುತ ಆಗುವ ಮುಂಚೆ ಕ್ರಮ ತೆಗೆದುಕೊಳ್ಳಿ..!!!!!

ಗೃಹ ಸಚಿವರ ಸ್ವಕ್ಷೇತ್ರದಲ್ಲಿ “”ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ””..?!!!!ಭಯದ ವಾತಾವರಣದಲ್ಲಿ ತೀರ್ಥಹಳ್ಳಿ ಪಟ್ಟಣದ ಜನತೆ..!!!! ಸದ್ಯದಲ್ಲೇ ಇನ್ನೊಂದು “”ಹುಣಸೂಡ್ ಪ್ರಕರಣ”” ಆಗುವ ಸಾಧ್ಯತೆ..!!!!ಜಿಲ್ಲಾಧಿಕಾರಿಗಳೇ, ಜಿಲ್ಲಾ ರಕ್ಷಣಾಧಿಕಾರಿಗಳೇ ಅನಾಹುತ ಆಗುವ ಮುಂಚೆ ಕ್ರಮ ತೆಗೆದುಕೊಳ್ಳಿ..!!!!!

by EDITOR NEWS WARRIORS
0 comments

ತೀರ್ಥಹಳ್ಳಿ : ಪಟ್ಟಣದ ಒಳಗೆ ಬುಕ್ಲಾಪುರ ಗ್ರಾಮದ ಸರ್ವೇ ನಂಬರ್ 64 ರಲ್ಲಿ 4 ಎಕರೆ ಪ್ರದೇಶವನ್ನು ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯ್ತಿ ತೀರ್ಥಹಳ್ಳಿಗೆ ಆಶ್ರಯ ಬಡಾವಣೆ ನಿರ್ಮಿಸಲು ಮಂಜೂರಾತಿ ಮಾಡಿರುತ್ತಾರೆ .ಅದರಲ್ಲಿ 3 ಎಕರೆಯಲ್ಲಿ ಸುಮಾರು 175ಮನೆಗಳು ನಿರ್ಮಿಸಿ ಹಂಚಿಕೆ ಮಾಡಲಾಗಿದೆ ಇದೊಂದು ಉತ್ತಮವಾದ ಆಶ್ರಯ ಬಡಾವಣೆ ಯಾಗಿದೆ .ಸುಮಾರು 4ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉತ್ತಮವಾದ ರಸ್ತೆ ಕುಡಿಯುವ ನೀರಿನ ಯೋಜನೆ ಮಾಡಿದ್ದಾರೆ.

3 ಎಕರೆ ಜಾಗದಲ್ಲಿ ನಿರಂತರ ಅಕ್ರಮ ಮರಳು ಗಣಿಗಾರಿಕೆ :

ಇಲ್ಲಿ 1ಎಕರೆಯಲ್ಲಿ ಆಶ್ರಯ ನಿವೇಶನ ಹಂಚಲು ಮಂಜೂರು ಮಾಡಿದ ಜಾಗದಲ್ಲಿ ಮತ್ತು ಅದಕ್ಕೆ ಹೊಂದಿಕೊಂಡು ಮತ್ತೊಂದು ಎಕರೆ ಒಟ್ಟು 2ಎಕ್ರೆ ಕಳೆದ ಹದಿನೈದು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ಸುಮಾರು 50 ಕೋಟಿಗೂ ಅಧಿಕ ಆಕ್ರಮ ಕಲ್ಲು ಸಾಗಾಟ :

ಸುಮಾರು ಇಲ್ಲಿ ಐವತ್ತು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಕಲ್ಲು ಸಾಗಾಟವಾಗಿದೆ . ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡದಂತೆ ಉಚ್ಚ ನ್ಯಾಯಾಲಯದ ಆದೇಶವಿದೆ ಹಿಂದೆಜಿಲ್ಲಾಧಿಕಾರಿಗಳಾದ ಪೊನ್ನುರಾಜ್ ರವರು ಭಾಷೆಯ ಬಡಾವಣೆ ಒಳಗೆ ಗಣಿಗಾರಿಕೆ ಗುತ್ತಿಗೆ ನೀಡಬಾರದು ಮತ್ತು ಅಕ್ರಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸ್ಪಷ್ಟವಾದ ಆದೇಶ ಮಾಡಿದ್ದರು.

ತೀರ್ಥಹಳ್ಳಿ ತಾಲೂಕು ಕಸಬಾ ಹೋಬಳಿ ಸರ್ವೇ ನಂಬರ್ 75ರಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡ ಮೇಲಿನ ಕುರುವಳ್ಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತೀರ್ಥಹಳ್ಳಿ —ಕೊಪ್ಪ ರಸ್ತೆಗೆ ಹೊಂದಿಕೊಂಡು ಕೇವಲ 15 ಅಡಿ ಅಂತರದ ದೂರದಲ್ಲಿ 10 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

500 ಅಡಿ ಅಂತರದಲ್ಲಿ ಪ್ರಖ್ಯಾತ ಕಮಾನು ಸೇತುವೆ ಇದೆ:

ದಿನವೊಂದಕ್ಕೆ ನಲವತ್ತು ರಿಂದ ಐವತ್ತು ಲಕ್ಷ ರೂಪಾಯಿಗಳ ಕಲ್ಲು ಕಳ್ಳತನದಲ್ಲಿ ಹೋಗುತ್ತದೆ . ಹಗಲು ಹೊತ್ತು ಸ್ಪೋಟಕ ಸಿಡಿಸುತ್ತಾರೆ ಸುತ್ತಲೂ ಮನೆಗಳಿವೆ . ತುಂಗಾ ನದಿಗೆ ಕಮಾನು ಸೇತುವೆ ಇದ್ದು ಮತ್ತೊಂದು ಹೊಸ ಸೇತುವೆ 100ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗುತ್ತದೆ ಕೇವಲ ಐನೂರು ಅಡಿ ಅಂತರದಲ್ಲಿ 2ಸೇತುವೆಗಳಿವೆ .

ವಾಸದ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ :

ನೂರಾರು ವಾಸದ ಮನೆಗಳು .ಪ್ರತಿನಿತ್ಯ ನೂರಾರು ವಾಹನಗಳು ಇಲ್ಲಿ ತಿರುಗಾಡುತ್ತವೆ .ಇಲ್ಲಿ ಹಗಲು ಹೊತ್ತೆ ಸ್ಫೋಟಕವನ್ನು ಹತ್ತಾರು ಬಾರಿ ಸಿಡಿಸುತ್ತಾರೆ .6-7ವರ್ಷದ ಹಿಂದೆ ವಡಿವೇಲು ಎಂಬವನು ಛಿದ್ರ ಛಿದ್ರವಾಗಿ ಸತ್ತುಹೋಗಿದ್ದ ಅದನ್ನು ಮೇಲ್ಗಡೆಯಿಂದ ಬಿದ್ದು ಸತ್ತ ಎಂದು ಸುಳ್ಳು ದಾಖಲೆ ಮಾಡಿ ಕೇಸ್ ಮುಚ್ಚಿಹಾಕಿದ್ದಾರೆ .

ಬೇರೆ ಬೇರೆ ಕೆಲಸಕ್ಕೆ ಬೇರೆ ಬೇರೆ ಮಾಮೂಲಿ ಫಿಕ್ಸ್ :

ಅಕ್ರಮ ಕಲ್ಲು ಸಾಗಾಟ ಕ್ಕೆ ಬೇರೆ ಮಾಮೂಲಿ, .ಲಾರಿಗಳಿಂದ ಬೇರೆ ಮಾಮೂಲಿ, ಸ್ಫೋಟಕ ಬಳಸಲು ಬೇರೆ ಮಾಮೂಲಿ, ಕುಳಿ ಹೊಡೆಯುವ ಟ್ರ್ಯಾಕ್ಟರ್ ಅವರಿಂದ ಬೇರೆ, ಪ್ರತಿದಿನ ಗಣಿ ಇಲಾಖೆಗೆ 2ಲಕ್ಷ ರೂಪಾಯಿಗಳ ಅಂದಾಜು ರಾಯಲ್ಟಿ ಮೋಸವಾಗುತ್ತಿದೆ .

ಕೋರ್ಟ್ ಆದೇಶಕ್ಕೆ ಬೆಲೆ ಇಲ್ಲವೇ…?!!

ಜಿಎಸ್ ಟಿ ಆದಾಯ ತೆರಿಗೆ ಯಾವುದೂ ಇಲ್ಲ .ಅಕ್ರಮ ಕಲ್ಲು ಗಣಿಗಾರಿಕೆ .ಇದನ್ನು ತಡೆಯಲು wp no4243/2006 ರ ಹೈಕೋರ್ಟ್ ಹಸಿರು ಪೀಠದಲ್ಲಿ ಬಗ್ಗೆ ಸ್ಪಷ್ಟವಾಗಿ ಆದೇಶವಾಗಿದೆ .

ಹತ್ತಿರದಲ್ಲೇ ಇರುವ ಎಲ್ಲಾ ಪ್ರಮುಖ ಇಲಾಖೆಗಳು ಆದರೂ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ..?!

ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು .ಪೊಲೀಸ್ ಠಾಣೆ ಮತ್ತು ತಹಸೀಲ್ದಾರ್ ಕಚೇರಿ ಎಸಿಎಫ್ ಅರಣ್ಯ ಇಲಾಖೆ ಕಚೇರಿಗೆ ಕೇವಲ 1ಕಿಲೋಮೀಟರ್ ದೂರದಲ್ಲಿದೆ .ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಬಂದು ಪ್ರತಿನಿತ್ಯ ಉಳಿದುಕೊಳ್ಳುತ್ತಾರೆ.ಗೃಹ ಸಚಿವರು ಪ್ರವಾಸಿ ಮಂದಿರದಲ್ಲಿ ಕಚೇರಿ ಮಾಡಿಕೊಂಡು ಅಲ್ಲಿ ವಿಶ್ರಾಂತಿ ಪಡೆದು .ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ರಾಜ್ಯದ ಅನೇಕ ಹಿರಿಯ ಅಧಿಕಾರಿಗಳು ಈ ಗಣಿ ಪ್ರದೇಶದ ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳುತ್ತಾರೆ .ಎಲ್ಲರಿಗೂ ಹಗಲು ಹೊತ್ತು ಸ್ಫೋಟವಾಗುವ ಶಬ್ದ ಕೇಳುತ್ತದೆ .ಶೃಂಗೇರಿ ಕಾರ್ಕಳ ಭದ್ರಾವತಿ ಜಯನಗರದಿಂದ ಬಾಕ್ಸ್ ಗಟ್ಟಲೆ ಸ್ಪೋಟಕ ಬರುತ್ತದೆ .ಪೊಲೀಸ್ ಅಧಿಕಾರಿಗಳಿಗೆ ಇದರ ಸಂಪೂರ್ಣ ಮಾಹಿತಿ ಇದೆ. ಕನಿಷ್ಠ ತಿಂಗಳಿಗೆ ಹತ್ತು ಲಕ್ಷ ರೂ ಎಲ್ಲ ಇಲಾಖೆಗೆ ಸೇರಿ ಮಾಮೂಲಿ ಹೋಗುತ್ತಿದೆ .ದುರ್ಗಾಪರಮೇಶ್ವರಿ .ರೇಣುಕಾಂಬ .ಕೆಂಚಾಂಬ ಗುತ್ತಿ ರೇಣುಕಾಂಬ .ಅಮ್ಮಾ .ಭಾಗ್ಯಲಕ್ಷ್ಮಿ ಎಂಬ ಹೆಸರಿನ ಹತ್ತಾರು ಲಾರಿಗಳು ಅಕ್ರಮವಾಗಿ ಕಲ್ಲು ಕಳ್ಳತನದಲ್ಲಿ ಸಾಗಿಸುವುದಲ್ಲದೇ .1ಲಾರಿಯಲ್ಲಿ ಮೂವತ್ತರಿಂದ ಮೂವತ್ತೈದು ಟನ್ ಕಲ್ಲು ಸಾಗಾಟವಾಗುತ್ತಿದೆ .

ತಹಸೀಲ್ದಾರ್ ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಲ್ಲರೂ ಇಲ್ಲಿ ತಿನ್ನುವವರೇ .

ಜಿಲ್ಲಾಧಿಕಾರಿಗಳೇ ಜಿಲ್ಲಾ ರಕ್ಷಣಾಧಿಕಾರಿಗಳೇ ಕೂಡಲೇ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಿ :

ಇಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ವಿಡಿಯೋ ಆಡಿಯೋ ಫೋಟೋಗಳು ಎಲ್ಲಾ ಸಂಬಂಧಪಟ್ಟ ದಾಖಲೆಗಳು ಲಭ್ಯವಿದ್ದು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಇಲಾಖೆಗೆ ಒದಗಿಸಲಾಗುವುದು…

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...