
ಡಾ. ಜೀಶಂಪ ಸಾಹಿತ್ಯ ವೇದಿಕೆ ಮಂಡ್ಯ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಮಂಡ್ಯ. ಶಂಭುಲಿಂಗೇಶ್ವರ ಸೇವಾ ಟ್ರಸ್ಟ್ ಮಂಡ್ಯ. ಕನ್ನಂಬಾಡಿ ಮತ್ತು ಕಾವೇರಿ ಪ್ರಭ ದಿನಪತ್ರಿಕೆ ಮಂಡ್ಯ. ಇವರ ಆಶ್ರಯದಲ್ಲಿ ದಿನಾಂಕ 21-08-2022 ರಂದು ಭಾರತದ 75 ನೇ ಸ್ವಾತಂತ್ರ್ತೋತ್ಸವದ ಅಂಗವಾಗಿ 29ನೇ ರಾಜ್ಯ ಮಟ್ಟದ ಅಮೃತ ಕವಿ ಕಾವ್ಯ ಮೇಳ ಅಮೃತ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗ ನಗರದ ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ಡಾ.ಎನ್ ಆರ್.ಮಂಜುಳಾ ಅವರಿಗೆ ದಿನಾಂಕ: 21. 08 .2022 ರಂದು ಕೆ.ವಿ ಶಂಕರಗೌಡ ಸ್ಮಾರಕ ಭವನ ಕರ್ನಾಟಕ ಸಂಘ,ಮಂಡ್ಯದಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಮೇಳ 75 ನೇ ಸ್ವಾತಂತ್ರ್ಯ ಅಮೃತ ಪ್ರಶಸ್ತಿ ಸ್ವೀಕರಿಸಿದ ಅವಿಸ್ಮರಣೀಯ ಸಂದರ್ಭ.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಖ್ಯಾತ ಜಾನಪದ ಗಾಯಕರು ಆದ ಡಾ.ಅಪ್ಪಗೆರೆ ತಿಮ್ಮರಾಜು ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಿಧಾನ ಪರಿಷತ್ ಸದಸ್ಯರು ಮಂಡ್ಯ ಮಧು ಜಿ ಮಾದೇಗೌಡರವರು ಉಪಸ್ಥಿತರಿದ್ದರು. ಕವಿ ಕಾವ್ಯ ಮೇಳಾಧ್ಯಕ್ಷರಾದ ಡಾ.ರತ್ನಾ ಗಿ ಬಿದಿ, ಅಮೃತ ಅಭಿನಂದನೆ, ಪ್ರಶಸ್ತಿ ಪ್ರದಾನ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಬಿ.ಜಯಪ್ರಕಾಶ್ .ಅಮೃತ ಪ್ರಶಸ್ತಿ ಪ್ರದಾನ ಮಾಡಿದರು.
ಅಮೃತ ಸ್ವಾತಂತ್ರೋತ್ಸವ ಕುರಿತು ಡಾ.ಹೆಚ್ ಎಸ್.ಮುದ್ದೇಗೌಡ ಹಾಗೂ ಶ್ರೀ ಮನ್ ಮುಲ್ ರಾಮಚಂದ್ರ, ಶ್ರೀಕೃಷ್ಣ ಸ್ವರ್ಣಸಂದ್ರ ಮತ್ತು ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸರ್ವರನ್ನು ಡಾ.ಜೀಶಂಪ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಶ್ರೀ ಲೋಕೇಶ್ ಚಂದಗಾಲುರವರು ಸ್ವಾಗತಿಸಿದರು.
ಶ್ರೀ ಕೃಷ್ಣ ಸ್ವರ್ಣಸಂದ್ರ ಅವರು ಪ್ರಾಸ್ತಾವಿಕ ನುಡಿ ನುಡಿದರು.ಕಾರ್ಯಕ್ರಮವನ್ನು ಶಿಕ್ಷಕಿ ಮತ್ತು ಸಾಹಿತಿ ಶ್ರೀಮತಿ ಎಂ.ಯು.ಶ್ವೇತ ನಿರೂಪಿಸಿದರು.
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು...
ರಘುರಾಜ್ ಹೆಚ್.ಕೆ…9449553305….


2 comments
Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.
**mitolyn**
Mitolyn is a carefully developed, plant-based formula created to help support metabolic efficiency and encourage healthy, lasting weight management.