Home ರಾಜ್ಯನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಲೋಕಸಭೆ ಸದಸ್ಯರಾದ ಬಿ,ವೈ ರಾಘವೇಂದ್ರ ಅವರ ಬೇಟಿ..!!ಮಹತ್ವದ ಚರ್ಚೆ..!!!! ಚರ್ಚೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಯಾವುದು…?! ಎಂ,ಪಿ ರಾಘವೇಂದ್ರ ಅವರು ನೀಡಿದ ಭರವಸೆ ಏನು…?!

ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಲೋಕಸಭೆ ಸದಸ್ಯರಾದ ಬಿ,ವೈ ರಾಘವೇಂದ್ರ ಅವರ ಬೇಟಿ..!!ಮಹತ್ವದ ಚರ್ಚೆ..!!!! ಚರ್ಚೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಯಾವುದು…?! ಎಂ,ಪಿ ರಾಘವೇಂದ್ರ ಅವರು ನೀಡಿದ ಭರವಸೆ ಏನು…?!

by EDITOR NEWS WARRIORS
1 comment

ಶಿವಮೊಗ್ಗ : ನಿನ್ನೆ ದಿನ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಲೋಕಸಭೆ ಸದಸ್ಯರಾದ ಬಿ ವೈ ರಾಘವೇಂದ್ರ ಅವರನ್ನು ನಾಗರಿಕ ಹಿತರಕ್ಷಣಾ ಸಮಿತಿ ಶಿವಮೊಗ್ಗ ಘಟಕ ಇವರು ಭೇಟಿ ಮಾಡಿ. ಹಲವು ವಿಷಯಗಳನ್ನು ಚರ್ಚಿಸಿದರು..

ಚರ್ಚೆಯಲ್ಲಿ ಪ್ರಸ್ತಾಪಿಸಲಾದ ಪ್ರಮುಖ ವಿಷಯಗಳು :::

*)ಅವೈಜ್ಞಾನಿಕವಾದ ಟ್ಯಾಕ್ಸ್ (ತೆರಿಗೆ) ಪದ್ಧತಿಯನ್ನು ಪುನರ್ ಪರಿಶೀಲನೆ ಮಾಡಬೇಕು ಇದರಿಂದ ಇಡೀ ರಾಜ್ಯಕ್ಕೆ ಒಳಿತಾಗುತ್ತದೆ ಈ ಅಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಕೇಂದ್ರ ಸಚಿವರ ಗಮನಕ್ಕೆ ತರಬೇಕು ಎಂದು ಒತ್ತಾಯ ಮಾಡಿದರು.

*) ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ, ಕಳಪೆ ಗುಣಮಟ್ಟದ ಸ್ಮಾರ್ಟ್ ಸಿಟಿ ಕಾಮಗಾರಿ ಪದ್ಧತಿಯ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸಲಾಗುತ್ತಿದೆ ‌‌. ಆದರೂ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಸ್ಮಾರ್ಟ್ ಸಿಟಿ ಎಂಡಿ ವಠಾರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರ ಮಾತನ್ನು ಉಳಿದ ಅಧಿಕಾರಿಗಳು ಕೇಳುತ್ತಿಲ್ಲ ಅವರ ನಿಯಂತ್ರಣದಲ್ಲಿ ಸ್ಮಾರ್ಟ್ ಸಿಟಿ ಇಲ್ಲ. ಎಲ್ಲಿ ನೋಡಿದರೂ ಅವೈಜ್ಞಾನಿಕ ಕಳಪೆ ಗುಣಮಟ್ಟದ ಕಾಮಗಾರಿಗಳೆ ಕಾಣಿಸುತ್ತಿವೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಇದರ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಲೋಕಸಭಾ ಸದಸ್ಯರಾದ ತಾವುಗಳು ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಶಿವಮೊಗ್ಗ ನಗರದ ನಾಗರಿಕರ ನೆಮ್ಮದಿಗೆ ಕಾರಣರಾಗಬೇಕು ಎಂದು ಒತ್ತಾಯಿಸಿದರು.

*) ಇದೆ ಸಮಯದಲ್ಲಿ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ರೈಲ್ವೆ ಭೋಗಿಗಳು ಗುಣಮಟ್ಟದಿಂದ ಹಾಗೆ ಇನ್ನು ಕೆಲವಷ್ಟು ರೈಲುಗಳ ಅವಶ್ಯಕತೆ ಶಿವಮೊಗ್ಗಕ್ಕೆ ಇದೆ ಹಾಗೆ ಆಟೋ ದವರು ಬೇಕಾಬಿಟ್ಟಿ ರೇಟುಗಳನ್ನು ಕೇಳುತ್ತಿದ್ದಾರೆ. ಪ್ರಿಪೇಡ್ ಆಟೋ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಲೋಕಸಭಾ ಸದಸ್ಯರು ನೀಡಿದ ಉತ್ತರ :

ನಾಗರಿಕ ಹಿತರಕ್ಷಣಾ ಸಮಿತಿ ಪ್ರಸ್ತಾಪಿಸಲಾದ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರು…

*)ಟ್ಯಾಕ್ಸ್ ತೆರಿಗೆ ಪದ್ಧತಿಯ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸುತ್ತೇನೆ. ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ಮನವಿ ಸಲ್ಲಿಸುತ್ತೇನೆ. ಜನರಿಗೆ ಹೊರೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದರು.

*) ಸ್ಮಾರ್ಟ್ ಸಿಟಿ ಕಳಪೆ, ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಎಂ,ಪಿ ರಾಘವೇಂದ್ರ ಅವರು ಈಗಾಗಲೇ ಅಧಿಕಾರಿಗಳನ್ನು ಸ್ಥಳೀಯ ಶಾಸಕರಾದ ಈಶ್ವರಪ್ಪನವರು ಹಾಗೂ ನಾವುಗಳು ಕರೆದು ಅವರಿಗೆ ಮಾರ್ಗದರ್ಶನ ನೀಡಿದ್ದೇವೆ ಆದರೂ ಕೂಡ ಇದು ಹೀಗೆ ಮುಂದುವರೆದುಕೊಂಡು ಹೋಗುತ್ತಿದೆ ಎಂದಾದರೆ ತಮ್ಮಗಳ ಜೊತೆಯಲ್ಲಿ ಸೆಪ್ಟೆಂಬರ್ 3 ರಂದು ಸ್ಥಳಕ್ಕೆ ಖುದ್ದು ಭೇಟಿ ನೀಡುವುದಾಗಿ ಭರವಸೆ ನೀಡಿದರು. ಹಾಗೆ ಸಂಬಂಧಪಟ್ಟ ಎಂ, ಡಿ , ಚಿದಾನಂದ ವಠಾರೇ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಕೂಡ ಭರವಸೆ ನೀಡಿದರು.

*) ಕಳಪೆ ಗುಣಮಟ್ಟದ ಭೋಗಿಗಳ ಬಗ್ಗೆ ಪ್ರಸ್ತಾಪಿಸಲಾದಾಗ, ಅವುಗಳ ಬಗ್ಗೆಯೂ ಹಾಗೂ ಹೆಚ್ಚಿನ ರೈಲಿನ ಅವಶ್ಯಕತೆ ಇದ್ದಲ್ಲಿ ಅವುಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು. ಪ್ರಿಪೇಡ್ ಆಟೋಗಳ ಬಗ್ಗೆ ಈಗಾಗಲೇ ಹಣ ಬಿಡುಗಡೆ ಆಗಿದೆ ಆದರೂ ಕೂಡ ಅದು ಅನುಷ್ಠಾನವಾಗಿಲ್ಲ ಅದನ್ನು ಕೂಡ ಜಾರಿ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು…

ರಘುರಾಜ್ ಹೆಚ್.ಕೆ…9449553305…

Related Articles

1 comment

GeorgeZew July 21, 2025 - 8:53 am

best barbershop- https://www.menspire.sg

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...