
ದಾವಣಗೆರೆ : ಗ್ರಾಮಾಂತರ ಉಪ ವಿಭಾಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಆರು ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು.
ಗುನ್ನೆ ನಂಬರ್ 176 / 2022 ಕಲಂ 420 ರೆ/ವಿ 34 IPC ಪ್ರಕರಣದಲ್ಲಿ ಶ್ರೀಮತಿ ಕನ್ನಿಕಾ ಸಿಕ್ರಿವಾಲ್, ಸಹಾಯಕ ಪೊಲೀಸ್ ಅಧೀಕ್ಷಕರು ದಾವಣಗೆರೆ ಗ್ರಾಮಾಂತರ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್, ಸಿಬ್ಬಂದಿಗಳಾದ ಎಂ,ಎಸ್,ಐ, ಯಾಸಿನ್ ಉಲ್ಲಾ, ರಾಜಪ್ಪ ಎನ್ ಸಿ, ಸೈಯದ್ ಗಫಾರ್, ನಾಗರಾಜಯ್ಯ ಹನುಮಂತಪ್ಪ ಕೌಡಿ, ವಸಂತ್ ರೆಡ್ಡಿ ಹಾಗೂ ನೂರುಲ್ಲಾ ಇವರಗಳನ್ನು ಒಳಗೊಂಡ ತಂಡ ಪ್ರಕರಣದ ಆರೋಪಿತರಾದ ಸಾತ್ವಾಡಿ ಪ್ರಕಾಶ್ ತಂದೆ ನಾಗಪ್ಪ ಎಸ್ (30) ವರ್ಷ ಕೊರಚರ ಜನಾಂಗ, ಜಿರಾಯ್ತಿ ಕೆಲಸ, ವಾಸ ಮಾಚನಹಳ್ಳಿ ಕೊರಚರಟ್ಟಿ ಗ್ರಾಮ, ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ. ಮತ್ತು ಹನುಮಂತಪ್ಪ@ ಕೊರಚರ ಹನುಮಂತಪ್ಪ ತಂದೆ ಕೊರಚರ ಬಡಕಪ್ಪ (52) ವರ್ಷ ಕೊರಚರ ಜನಾಂಗ ಕೂಲಿ ಕೆಲಸ ವಾಸ ಕನ್ನನಾಯಕನಹಳ್ಳಿ ಅಗ್ರಹಾರ ಗ್ರಾಮ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ. ಅವರುಗಳನ್ನು ಮೇಲ್ಕಂಡ ಪ್ರಕರಣದಲ್ಲಿ ಪೊಲೀಸರು ದಸ್ತಗಿರಿ ಮಾಡಿ 6 ಲಕ್ಷ ರೂಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿಬಿ ರಿಶ್ವಂತ್, ಹಾಗೂ ಹೆಚ್ಚು ವರಿ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಂಗಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈಗಲೂ ನಕಲಿ ಬಂಗಾರದ ವ್ಯವಹಾರಗಳು ನಡೆಯುತ್ತಿವೆ ಹುಷಾರ್ ಪೊಲೀಸರ ಎಚ್ಚರಿಕೆ :
ಈಗಲೂ ನಕಲಿ ಬಂಗಾರಗಳನ್ನು ನೀಡುತ್ತೇವೆ ಎಂದು ಹೇಳಿ ಹಣವನ್ನು ದೋಚುವ ತಂಡಗಳು ಯಶಸ್ವಿಯಾಗಿ ತಮ್ಮ ಕಾರ್ಯಚರಣೆಗಳನ್ನು ನಡೆಸುತ್ತಿವೆ ಇದನ್ನು ನಂಬಿಕೊಂಡು ಯಾರು ಹೋಗಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆಯನ್ನು ನೀಡಿದೆ…
ರಘುರಾಜ್ ಹೆಚ್.ಕೆ…9449553305…
ರಘುರಾರಜ್ ಹೆಚ್.ಕೆ..9449553305…


1 comment
Looking for the best haircut in town? MenSpire delivers tailored precision cuts, expert grooming, and a luxe vibe. Book now for a refined, confidence-boosting transformation.