Home ರಾಜ್ಯತೀರ್ಥಹಳ್ಳಿ:: ಅಪಘಾತ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ.!

ತೀರ್ಥಹಳ್ಳಿ:: ಅಪಘಾತ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ.!

by EDITOR NEWS WARRIORS
0 comments

ತೀರ್ಥಹಳ್ಳಿ :– ದಿನಾಂಕ 31– 05 –2020ರಂದು 7ಗಂಟೆ ಸಮಯದಲ್ಲಿ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮನೆ ರಾಷ್ಟ್ರೀಯ ಹೆದ್ದಾರಿ ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಅನಿಲ್ ಬಿನ್ ಸುಬ್ಬಣ್ಣ ಗೌಡ ರವರು ತಮ್ಮಬಾಡಿಗೆ ಮಾಡುವ ಜೀತೋ ಗೂಡ್ಸ್ ವಾಹನ KA-18-B-8787 ದಲ್ಲಿ ಬಾಡಿಗೆಗಾಗಿ ತೀರ್ಥಹಳ್ಳಿಯಿಂದ ಸಾಮಾನುಗಳನ್ನು ಹೇರಿಕೊಂಡು ಶೃಂಗೇರಿಗೆ ಹೋಗುತ್ತಿರುವ ಮಾರ್ಗದಲ್ಲಿ ಸಮೀವುಲ್ಲಾ ಬಿನ್ ಇಬ್ರಾಹಿಂ ಸಾಬ್ ಎಂಬುವವರು ತಮ್ಮ KA -14- B -8282ಲಾರಿಯನ್ನು ಕಲ್ಮನೆ ಯಿಂದ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗಲು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಲ್ಮನೆ ರವೀಂದ್ರ ಬಿನ್ ಬಾಳಪ್ಪ ಗೌಡ ರವರ ಕಿರಾಣಿ ಅಂಗಡಿಯ ಎದುರು ಅನಿಲ್ ರವರ ಜಿತೊ ವಾಹನಕ್ಕೆ ಅಪಘಾತ ಮಾಡಿದ್ದಾರೆ .

.ಅನಿಲ್ ರವರ ಎದೆ ,ಹೊಟ್ಟೆ ,ಕಾಲು ಮತ್ತು ಮೈ, ಕೈಗಳಿಗೆ ತೀವ್ರತರವಾದ ಗಾಯಗಳಾಗಿದ್ದು ರಕ್ತಸ್ರಾವ ವಾಗಿತ್ತು .ಅನಿಲ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತ ರಾಗಿರುತ್ತಾರೆ .ಈ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಫ್ ಐಆರ್ ಅನ್ನು ನ್ಯಾಯಾಲಯಕ್ಕೆ ದಾಖಲು ಮಾಡಲಾಗಿತ್ತು .

ಪ್ರಕರಣವನ್ನು ತನಿಖಾಧಿಕಾರಿಯಾಗಿ ತೀರ್ಥಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರು ತನಿಖೆಯನ್ನು ನಡೆಸಿ ತೀರ್ಥಹಳ್ಳಿ ನ್ಯಾಯಲಯಕ್ಕೆ ಆರೋಪಿ ಸಮೀವುಲ್ಲಾ ಬಿನ್ ಇಬ್ರಾಹಿಂ ಸಾಬ್ ವಿರುದ್ಧ ಐಪಿಸಿ ಕಲಂಗಳಾದ 279.337.304(A) ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು (ಚಾರ್ಜ್ ಶೀಟ್ )ತೀರ್ಥಹಳ್ಳಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು .

ತೀರ್ಥಹಳ್ಳಿ ಹಿರಿಯ ವ್ಯವಹಾರಗಳ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ವಿರುದ್ಧ ಸಾಕ್ಷಿ ವಿಚಾರಣೆ ನಡೆದು ನ್ಯಾಯಾಲಯದಲ್ಲಿ ವಾದ ವಿವಾದದ ಆಲಿಸಿದ ಗೌರವಾನ್ವಿತ ಮಾನ್ಯ ನ್ಯಾಯಾಧೀಶರಾದ ಶ್ರೀ ಎಸ್. ಎಸ್ .ಭರತ್ ರವರ ಆರೋಪಿ ಸಮಿವುಲ್ಲ ತಪ್ಪಿತಸ್ಥರೆಂದು ತೀರ್ಪು ನೀಡಿ ಆರೋಪಿಗೆ ಐಪಿಸಿ ಕಲಂ 279 ಗೆ ಸಂಬಂಧಿಸಿದಂತೆ 6ತಿಂಗಳು ಜೈಲು ಶಿಕ್ಷೆ ಮತ್ತು 1ಸಾವಿರ ದಂಡ ,ದಂಡ ಪಾವತಿಸಲು ತಪ್ಪಿದರೆ 3ತಿಂಗಳು ಶಿಕ್ಷೆ ಹಾಗೂ ಐಪಿಸಿ 337 ಬಗ್ಗೆ 6ತಿಂಗಳು ಜೈಲು ಶಿಕ್ಷೆ ಹಾಗೂ 500ರೂಪಾಯಿಗಳ ದಂಡ,ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳು ಶಿಕ್ಷೆ ,ಐಪಿಸಿ 304(ಎ )ರ ಬಗ್ಗೆ ಆರೋಪಿಗಳು 2ವರ್ಷ ಸಾದಾ ಶಿಕ್ಷೆ ಹತ್ತು ಸಾವಿರ ರೂಪಾಯಿಗಳ ದಂಡ .ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಸಾದಾ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ .

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಅಭಿಯೋಜಕ ರಾದ ಶ್ರೀ ಬಿನು ಅವರು ಸಾಕ್ಷಿಗಳ ವಿಚಾರಣೆ ಮಾಡಿ ಸಮಂಜಸವಾಗಿ ವಾದಿಸಿದ್ದರು ಆರೋಪಿಗೆ ಶಿಕ್ಷೆ ಕೊಡಿಸಲು ನ್ಯಾಯಾಲಯದಲ್ಲಿ ವಾದ ಮಾಡಿದರು .

ವರದಿ: ಲಿಯೋ ಅರೋಜ…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...