Home ರಾಜ್ಯಗೃಹ ಸಚಿವರ ತವರು ಕ್ಷೇತ್ರದಲ್ಲಿ “”ಸ್ಫೋಟಕ ಬಳಸಿ “”ಕಲ್ಲು ಗಣಿಗಾರಿಕೆ..!! ಮೇಲಿನ ಕುರುವಳ್ಳಿ ಬಂಡೆಯ ಸ್ಫೋಟಕದ ಸದ್ದು ಅಧಿಕಾರಿಗಳಿಗೆ ಕೇಳಿಸುತ್ತಿಲ್ಲವೇ..?! ಕಾರ್ಮಿಕರ ಹೆಸರಿನಲ್ಲಿ ಕುರುವಳ್ಳಿ ಬಂಡೆಯಲ್ಲಿ ಲೂಟಿ..!! ಗುಪ್ತಚರ ಇಲಾಖೆಗೆ ಇಲ್ಲವೇ ಮಾಹಿತಿ..?! ಚಿರನಿದ್ರೆಗೆ ಜಾರಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ..!!!! ಉನ್ನತ ಅಧಿಕಾರಿಗಳ ಗಮನಕ್ಕೆ..!!!

ಗೃಹ ಸಚಿವರ ತವರು ಕ್ಷೇತ್ರದಲ್ಲಿ “”ಸ್ಫೋಟಕ ಬಳಸಿ “”ಕಲ್ಲು ಗಣಿಗಾರಿಕೆ..!! ಮೇಲಿನ ಕುರುವಳ್ಳಿ ಬಂಡೆಯ ಸ್ಫೋಟಕದ ಸದ್ದು ಅಧಿಕಾರಿಗಳಿಗೆ ಕೇಳಿಸುತ್ತಿಲ್ಲವೇ..?! ಕಾರ್ಮಿಕರ ಹೆಸರಿನಲ್ಲಿ ಕುರುವಳ್ಳಿ ಬಂಡೆಯಲ್ಲಿ ಲೂಟಿ..!! ಗುಪ್ತಚರ ಇಲಾಖೆಗೆ ಇಲ್ಲವೇ ಮಾಹಿತಿ..?! ಚಿರನಿದ್ರೆಗೆ ಜಾರಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ..!!!! ಉನ್ನತ ಅಧಿಕಾರಿಗಳ ಗಮನಕ್ಕೆ..!!!

by EDITOR NEWS WARRIORS
0 comments

ತೀರ್ಥಹಳ್ಳಿ : ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಮೇಲಿನ ಕುರುವಳ್ಳಿಯಲ್ಲಿ ಇರುವ ಬಂಡೆಯ ಸರ್ವೇ ನಂಬರ್ 75, 38, ಮತ್ತು ಬುಕ್ಕಲಾಪುರದ ಆಶ್ರಯ ಬಡಾವಣೆಯ ಸರ್ವೆ ನಂಬರ್ 64 ರಲ್ಲಿ ದಿನನಿತ್ಯ ಸ್ಪೋಟಕಗಳನ್ನು ಸಿಡಿಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸದ್ದು ಯಾಕೋ ಗುಪ್ತಚರ ಇಲಾಖೆಗೆ ಕೇಳಿಸುತ್ತಿಲ್ಲ. ಮಲೆನಾಡಿನ ಮಳೆಗೆ ಭಯಾನಕ ನಿದ್ರೆಯಲ್ಲಿ ಇದೆ ಎಂದು ಕಾಣುತ್ತದೆ.ದಕ್ಷ ಜಿಲ್ಲಾ ರಕ್ಷಣಾಧಿಕಾರಿಗಳು ವಿಶೇಷ ತಂಡ ರಚನೆ ಮಾಡಿ ತನಿಖೆ ಮಾಡಿಸಲಿ ….

ಜಿಲೆಟಿನ್ ಸ್ಪೋಟಕ ವಸ್ತು ಡೈನಮೈಟ್ ಸಿಡಿಸುವುದು ಬಹುದೊಡ್ಡ ಅಪರಾಧ ಕ್ರಿಮಿನಲ್ ಕೃತ್ಯ..!!

ಜಿಲೆಟಿನ್ ಸ್ಪೋಟಕ ವಸ್ತು ಡೈನಮೈಟ್ ಸಿಡಿಸುವುದು ಬಹುದೊಡ್ಡ ಅಪರಾಧ ಕ್ರಿಮಿನಲ್ ಕೃತ್ಯ ಸಹ 2ವರ್ಷಗಳ ಹಿಂದೆ ಶಿವಮೊಗ್ಗದ ಬಂಡೆಗೆ ಸಿಡಿಸಲು ದಾಸ್ತಾನು ಸ್ಫೋಟಕ ಸಿಡಿದು ಶಿವಮೊಗ್ಗ ಜಿಲ್ಲೆ ರಾತ್ರಿ ಕಂಪನವಾಗಿತ್ತು .ಅಮಾಯಕ ಜೀವಗಳು ಅನಾಥವಾಗಿ ಬಿದ್ದಿದ್ದವು .ಇದೊಂದು ಉದಾಹರಣೆ ಮಾತ್ರ .

ಸುಮಾರು 8 ವರ್ಷಗಳ ಹಿಂದೆ ವಡಿವೇಲು ಎಂಬ ಕಾರ್ಮಿಕನ ಸಾವು:

ಏಳೆಂಟು ವರ್ಷಗಳ ಹಿಂದೆ ವಡಿವೇಲು ಎಂಬ ಕಾರ್ಮಿಕನೊಬ್ಬ ತೀರ್ಥಹಳ್ಳಿ ಬಂಡೆಯಲಿ ಬಿದ್ದು ತಲೆ ಪುಡಿಪುಡಿಯಾಗಿತ್ತು ಆತನ ಸಾವನ್ನು ಕಾಲು ಜಾರಿ ಬಿದ್ದ ಎಂದು ಮಹಜರು ಮಾಡಿ ಕೈತೊಳೆದುಕೊಂಡಿದ್ದರು .ಇಂದಿಗೂ ತೀರ್ಥಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರುವಳ್ಳಿ ಮತ್ತು ಮೇಲಿನಕುರುವಳ್ಳಿ ಬುಕ್ಲಾಪುರ ಗ್ರಾಮದಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ನಿರಂತರವಾಗಿ ಸ್ಫೋಟಕ ಸಿಡಿಸಿ ಕಲ್ಲು ತೆಗೆಯುತ್ತಾರೆ .ಇಲ್ಲಿಯ ಮಾಫಿಯಾದ ಗುರು ಪಾಂಡವರ ಕಾಲದ ಧರ್ಮರಾಯ ಹೆಸರಿನ ಒಬ್ಬ ಮತ್ತು ಆತನೊಂದಿಗೆ ಸ್ಫೋಟಕಗಳನ್ನು ಸಿಡಿಸಲು ಬಂಡೆಗೆ ಕೂಳಿ ಒಡೆಯುವ ಸಂತೋಷ್ ಎಂಬ ಮಹಾಶಯ ಪ್ರತಿ ಬಂಡೆ ಯವರಿಂದ ಪೋಲಿಸ್ ಅಧಿಕಾರಿಗಳೆಂದು ತಲಾ 3ರಿಂದ 4ರೂಪಾಯಿಗಳು ತಿಂಗಳಿಗೆ ವಸೂಲಿ ಮಾಡುತ್ತಾರೆ .ಇದು ಅಂದಾಜು ಎಂಬತ್ತು ಸಾವಿರದಿಂದ 1ಲಕ್ಷ₹ಆಗುತ್ತದಂತೆ .

ತೀರ್ಥಹಳ್ಳಿ ಪೊಲೀಸ್ ಇಲಾಖೆ ಹಣಕ್ಕೆ ಕೈ ಚಾಚುತ್ತಿಲ್ಲ ಹಾಗಾದರೆ ಹಣವನ್ನು ಸಂಗ್ರಹಿಸುತ್ತಿರುವವರು ಹಣ ನೀಡುತ್ತಿರುವುದಾದರೂ ಯಾರಿಗೆ..?!

ತೀರ್ಥಹಳ್ಳಿಯಲ್ಲಿ ಕಳೆದ 4ತಿಂಗಳಿಂದ ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಮೂಲದ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವತ್ಥ್ ಗೌಡ ರವರು ಈವರೆಗೆ ಈ ಬಂಡೆ ಮಾಲೀಕರ ಸ್ಫೋಟಕದ ಹಣಕ್ಕೆ ಕೈ ಚಾಚಿಲ್ಲ .ಕಳೆದ 3ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿವೈಎಸ್ ಪಿ ಯವರು ಸಹ ಈ ಹಣಕ್ಕಾಗಿ ಎಂದಿಗೂ ಕೈ ಚಾಚಿಲ್ಲ ಎಂದು ಬಂಡೆ ಅವರೇ ಹೇಳುತ್ತಾರೆ .ಆದರೆ ಪ್ರತಿ ತಿಂಗಳು ಧರ್ಮರಾಯ ವಸೂಲಿ ಮಾಡುವ ಹಣವನ್ನು ಸಂತೋಷವಾಗಿ ಯಾರಿಗೆ ನೀಡುತ್ತಿದ್ದಾನೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆಯ ಬೀಟ್ ಪೋಲೀಸಿಗೂ ಮತ್ತು ಗುಪ್ತಚರ ಪೊಲೀಸರಿಗೆ ಮಾಹಿತಿ ಇಲ್ಲವೇ..?! ಇಲ್ಲಿ ಪೊಲೀಸರ ಹೆಸರು ದುರ್ಬಳಕೆ ಯಾಗುತ್ತಿದೆ ಹತ್ತಾರು ಬಾರಿ ತೀರ್ಥಹಳ್ಳಿಯ ಪೊಲೀಸ್ ಅಧಿಕಾರಿಗಳು ಬಂಡೆ ಮಾಲೀಕರನ್ನು ಕರೆಸಿ ಬಂಡೆಯಲ್ಲಿ ಸ್ಫೋಟವನ್ನು ಬಳಸಿ ಬಂಡೆ ಸಿಡಿಸಿದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಪೊಲೀಸ್ ಇಲಾಖೆ ಮಾತಿಗೆ ಕಿಮ್ಮತ್ತಿಲ್ಲ..

ಗೃಹ ಸಚಿವರ ತವರು ಕ್ಷೇತ್ರದಲ್ಲಿ ನಡೆಯುತ್ತಿರುವ ಆಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಬ್ರೇಕ್ ಹಾಕಲಿ..!!

ಗೃಹ ಸಚಿವರ ತವರು ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಕ್ರಮವನ್ನು ತಡೆಗಟ್ಟಲು ಜಿಲ್ಲಾ ರಕ್ಷಣಾ ಧಿಕಾರಿಗಳ ಅಧಿಕಾರಿಗಳಾದ ಬಿ ಎಂ ಲಕ್ಷ್ಮೀ ಪ್ರಸಾದ್ ರವರು ತಮ್ಮ ಗುಪ್ತ ತಂಡವನ್ನು ಮತ್ತು ಸ್ಫೋಟಕ ತಜ್ಞರನ್ನು ತೀರ್ಥಹಳ್ಳಿಗೆ ಕಳಿಸಿ ತನಿಖೆ ನಡೆಸಲಿ .ಜತೆಯಲ್ಲಿ ತೀರ್ಥಹಳ್ಳಿಗೆ ಸ್ಫೋಟಗಳು ಎಲ್ಲಿಂದ ಬರುತ್ತದೆ ಎಂಬುದನ್ನು ತನಿಖೆಯಾಗಲಿ .ವಿನಾಕಾರಣ ಬಡವ ಬಂಡೆ ಕಾರ್ಮಿಕರಿಂದ ಪೊಲೀಸ್ ಅಧಿಕಾರಿಗಳ ಹೆಸರೇಳಿ ಮಾಡುತ್ತಿರುವ ಎತ್ತುವಳಿಗೆ ಬ್ರೇಕ್ ಬೀಳಲಿ ತನಿಖೆ ಮಾಡಿ ಪೊಲೀಸ್ ಅಧಿಕಾರಿಗಳ ಮತ್ತು ಇಲಾಖೆ ಹೆಸರನ್ನು ಹೇಳಿ ಪ್ರತಿ ತಿಂಗಳು ವಸೂಲಿ ಮಾಡುತ್ತಿರುವುದನ್ನು ತನಿಖೆ ನಡೆಸಿ ದಕ್ಷ ಪ್ರಾಮಾಣಿಕ ರಕ್ಷಣಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಆಗುವ ದೊಡ್ಡ ಅನಾಹುತವನ್ನು ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಮನವಿ …

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!