Home ರಾಜ್ಯಭಟ್ಕಳದಲ್ಲಿ “ಟಿಪ್ಪು ಸುಲ್ತಾನ” ಹೆಸರಿನಲ್ಲಿ ಸ್ವಾಗತ ಗೋಪುರ..!! ಶಾಂತಿ ಕದಡುವ ಪ್ರಯತ್ನನಾ..?! ಅಷ್ಟಕ್ಕೂ ಟಿಪ್ಪು ಸುಲ್ತಾನ್ ಸ್ವಾಗತ ಗೋಪುರ ನಿರ್ಮಾಣ ಮಾಡಲು ಕಾರಣವೇನು..?! ಪೊಲೀಸರಿಂದ ತಪ್ಪಿತಾ ದೊಡ್ಡ ಅನಾಹುತ..?!

ಭಟ್ಕಳದಲ್ಲಿ “ಟಿಪ್ಪು ಸುಲ್ತಾನ” ಹೆಸರಿನಲ್ಲಿ ಸ್ವಾಗತ ಗೋಪುರ..!! ಶಾಂತಿ ಕದಡುವ ಪ್ರಯತ್ನನಾ..?! ಅಷ್ಟಕ್ಕೂ ಟಿಪ್ಪು ಸುಲ್ತಾನ್ ಸ್ವಾಗತ ಗೋಪುರ ನಿರ್ಮಾಣ ಮಾಡಲು ಕಾರಣವೇನು..?! ಪೊಲೀಸರಿಂದ ತಪ್ಪಿತಾ ದೊಡ್ಡ ಅನಾಹುತ..?!

by EDITOR NEWS WARRIORS
0 comments


ಭಟ್ಕಳ : ಸುಲ್ತಾನ ಸ್ಟ್ರೀಟ್‌ನ ಮೂಖಾಂತರ ಆಸರಕೇರಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಸ್ವಾಗತ ಗೇಟ್‌ ( ಸ್ವಾಗತ ಗೋಪುರ) ವನ್ನು ನಿರ್ಮಾಣ ಮಾಡಲು ತಯಾರಿ ನಡೆಸಿ ಈ ಬಗ್ಗೆ ನಿನ್ನೆ ಆ ಪ್ರದೇಶದಲ್ಲಿ ಟಿಪ್ಪು ಸುಲ್ತಾನ ಫೋಟೋ ಇರುವ ಒಂದು ಕಟೌಟ್‌ನ್ನು ಹಾಕಲಾಗಿತ್ತು.

ಪೊಲೀಸ್ ಇಲಾಖೆಯಿಂದ ತಪ್ಪಿತು ದೊಡ್ಡ ಅನಾಹುತ..?!

ಆದರೆ ಇಂದು ಬೆಳಿಗ್ಗೆ ಅದೇ ಪ್ರದೇಶದಲ್ಲಿ ಹೊಂಡ ತೆಗೆಯುತ್ತಿರುವದನ್ನು ಗಮನಿದ ವ್ಯಕ್ತಿಯೊರ್ವರು ಈ ಬಗ್ಗೆ ಪೋಲಿಸ್‌ ಇಲಾಖೆಗೆ ಮಾಹಿತಿ ನೀಡಿದರು ಪೊಲೀಸರು ಕೆಲಸವನ್ನು ಅಲ್ಲಿಗೆ ನಿಲ್ಲಿಸಿದ್ದಾರೆ. ಪೊಲಿಸರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿ ಆಗಬೇಕಾಗಿದ್ದ ಅನಾಹುತಗಳನ್ನು ಪೊಲೀಸ್ ಇಲಾಖೆ ತಡೆದಿರುವುದು ಸ್ವಾಗತಾರ್ಹ…

ಆನ್ಯಕೋಮಿನ ಯುವಕರಿಂದ ಶಾಂತಿ ಕದಡುವ ಪ್ರಯತ್ನ :


ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆಹೋಗುವ ದಾರಿಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ತನ್ನ ಸ್ವಂತ ಖರ್ಚಿನಿಂದ ಒಂದು ಸ್ವಾಗತ ಗೋಪುರ ನಿರ್ಮಿಸಲು ತಯಾರಿ ನಡೆಸಿದ್ದು, ಈ ಸ್ವಾಗತ ಕಮಾನಿನ ಕಾರ್ಯಗಳು ಆರಂಭಗೋಡಿರುವ ಬಗ್ಗೆ ಸಹಿಸಲಾರದ ಅನ್ಯ ಕೋಮಿನ ಕೆಲವು ಜನರು, ಪಿಪಲ್‌ ಆಫ್‌ ಭಟ್ಕಳ ಎಂಬ ಹೆಸರಿನಲ್ಲಿನ ಟಿಪ್ಪು ಸುಲ್ತಾನ ಫೋಟೋ ಇರುವ ಬ್ಯಾನರ್ ಹಾಕಿದ್ದು, ಭಟ್ಕಳದಲ್ಲಿ ಕೋಮು ಸೌಹಾರ್ಧತೆಯನ್ನು ಕದಡಲು ಟಿಪ್ಪು ಸುಲ್ತಾನ ಹೆಸರಿನಲ್ಲಿ ಗೇಟ್‌ ನಿರ್ಮಿಸುವ ವಿವಾದದ ನಿರ್ಮಿಸಿ ಜನರಲ್ಲಿ ಭಯವನ್ನು ಉಂಟುಮಾಡಲು ಪ್ರಯತ್ನಪಟ್ಟಿರುವುದನ್ನು ಪೊಲೀಸ್ ಇಲಾಖೆ ತಡೆದಿದೆ…

ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿಗಳು, ತಹಸೀಲ್ದಾರರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸ್ಥಳೀಯರ ಆಗ್ರಹ :

ಅಸರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಸ್ವಾಗತ ಗೋಪುರ ನಿರ್ಮಾಣ ಕಾರ್ಯಗಳಿಗೋಸ್ಕರ ಇರಿಸಲಾದ ಸಾಧನ ಮತ್ತು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಳ್ಳುಲು ಸ್ಥಳಕ್ಕೆ ಬಂದಾಗ ದೇವಸ್ಥಾನ ಅಧ್ಯಕ್ಷರಾದ ಕೃಷ್ಣ ನಾಯ್ಕ ಆಸರಕೇರಿ, ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ ಅವರು ಕೆಲವು ಹೊತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಭಟ್ಕಳದಲ್ಲಿರುವ ಹಲವು ಅಕ್ರಮ ಕಟ್ಟಡಗಳನ್ನು ಮೊದಲು ತೆರವು ಗೊಳಿಸುವಂತೆ ತಿಳಿಸಿದರು.

ಪೊಲೀಸ್ ಬಿಗಿಬದ್ರತೆಯಲ್ಲಿ ಭಟ್ಕಳ :

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಮದ್ಯೆ ಪ್ರವೇಶಿಸಿ ತಾತ್ಕಾಲಿಕವಾಗಿ ಸಮಸ್ಯೆ ತಿಳಿಗೊಳಿಸಿ ಪುರಸಬೆ ವಾಹನದಲ್ಲಿ ಹಾಕಲಾದ ವಸ್ತುಗಳನ್ನು ಹಿಂತಿರುಗಿಸಿ. ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗಳ ಬಳಿ ಡು ನೋಟ್‌ ವರ್ಕಪ್ರೊಗ್ರೆಸ್‌ ಮುದ್ರಿತ ರಿಬ್ಬನ್‌ಗಳನ್ನು ಎರಡು ಕಂಬಗಳ ಬಳಿ ಅಳವಡಿಸಿದರು. ನಂತರ ಸುಲ್ತಾನ ಸ್ಟ್ರೀಟ್‌ ಬಳಿ ಆಗಮಿಸಿ ಅಲ್ಲಿ ಹಾಕಾಗಿದ್ದ ಬೋರ್ಡನ್ನು ಪುರಸಭೆಯ ಕೆಲಸಗಾರರ ಸಹಾಯದಿಂದ ತೆರವು ಗೋಳಿಸಿ ಅಲ್ಲಿಯು ಸಹ ರಿಬ್ಬನ್‌ ಅನ್ನು ಅಳವಡಿಸಿ ಪೋಲಿಸ್‌ ವಾಹನ ನಿಯೋಜಸಿ ಬಿಗಿ ಭದ್ರತೆ ಒದಗಿಸಿದ್ದಾರೆ. ಜಿಲ್ಲೆಯ ಹಲವು ಭಾಗಗಳಿಂದ ಪೋಲಿಸರು ಮತ್ತು ಪೊಲೀಸ್ ಅಧಿಕಾರಿಗಳು ಭಟ್ಕಳಕ್ಕೆ ಭದ್ರತೆಗೆ ಆಗಮಿಸಿದ್ದು ಎರಡು ಪ್ರದೇಶಗಳಲ್ಲಿ ಪೋಲಿಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಮಾಹಿತಿ ಕೃಪೆ : ಭಟ್ಕಳದ ಸ್ನೇಹಿತರು …

ರಘುರಾಜ್ ಹೆಚ್‌. ಕೆ…9449553305…

ರಘಕಪೆರಾರಜ್ ಹೆಚ್‌. ಕೆ…9449553305…

Related Articles

Leave a Comment

Latest news
Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..!