
ಸಾರ್ವಜನಿಕರಿಗೆ ಕಿರಿಕಿರಿಯಾಗುವಂತಹ ಕೆಲಸವನ್ನು ಮಾಡಬೇಡಿ : ಸಂಸದ ಬಿವೈ ರಾಘವೇಂದ್ರ:
ಶಿವಮೊಗ್ಗ : ಚಂದ್ರಶೇಖರ್ ಆಜಾದ್ ಪಾರ್ಕ್ ( ಫ್ರೀಡಂ ಪಾರ್ಕ್ ) ನ ಅಭಿವೃದ್ಧಿಗಾಗಿ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರು ಅನುದಾನವನ್ನು ನೀಡಿದ್ದರು, ಈಗ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನೇಕ ಕಾಮಗಾರಿಯನ್ನು ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದದ್ದನ್ನು ಗಮನಿಸಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಇಂದು ಪಾರ್ಕ್_ಗೆ ಭೇಟಿ ನೀಡಿದರು.
” ಸಾರ್ವಜನಿಕರಿಗೆ ಅನುಕೂಲವಾಗಲು ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ, ಆದರೆ ಸ್ವಚ್ಛತೆ, ವಾಕಿಂಕ್ ಟ್ರ್ಯಾಕ್,
ಕುಡಿಯುವ ನೀರು, ಶೌಚಾಲಯಕ್ಕೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗುವುದು, ಜೊತೆಗೆ 4 ಹಂತದಲ್ಲಿ ಪಾರ್ಕ್ ಕೆಲಸವನ್ನು ಸ್ಮಾರ್ಟ್ ಸಿಟಿ ವತಿಯಿಂದ ಮಾಡುತ್ತಿದ್ದು, ಇಲ್ಲಿ ಆಗುತ್ತಿರುವ ಕಾಮಗಾರಿಗಳು ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಅವರು,
ಎಸ್. ದತ್ತಾತ್ರಿ, ಉಪ ಮೇಯರ್ ಶಂಕರ್ ಗನ್ನಿ, ಮಹಾನಗರ ಪಾಲಿಕೆಯ ಸದಸ್ಯ ವಿಶ್ವಾಸ್,ರಾಜೇಶ್ ಕಾಮತ್
ಬಳ್ಳೆಕೆರೆ ಸಂತೋಷ್,ದಿವಾಕರ್ ಶೆಟ್ಟಿ, ಮಾಲತೇಶ್,
ಸ್ಮಾರ್ಟ್ ಸಿಟಿ ಎಂ. ಡಿ ಚಿದಾನಂದ ವಠಾರೆ, ಕುಮಾರ ಸ್ವಾಮಿ
ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ…9449553305….


1 comment
**mitolyn official**
Mitolyn is a carefully developed, plant-based formula created to help support metabolic efficiency and encourage healthy, lasting weight management.