Home ರಾಜ್ಯPFI ಸಂಘಟನೆ ಬಗ್ಗೆ NIA ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬೈಯಲಾಯಿತಾ ಸ್ಪೋಟಕ ಮಾಹಿತಿ..?! ಬಂಧಿತರು ಬಿಚ್ಚಿಟ್ಟ ಭಯಾನಕ ಸತ್ಯವೇನು..!! ಮುಸ್ಲಿಂ ಯುವಕರನ್ನು ಆಕರ್ಷಿಸಲು ಇವರು ಮಾಡುತ್ತಿದ್ದ ತಂತ್ರವೇನು..? ಇಲ್ಲಿಯವರೆಗೂ ದೇಶಾದ್ಯಂತ ಬಂಧನವಾಗಿರುವ ಆರೋಪಿಗಳೆಷ್ಟು..?! ಫುಲ್ ಡಿಟೇಲ್ಸ್..!!!!

PFI ಸಂಘಟನೆ ಬಗ್ಗೆ NIA ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬೈಯಲಾಯಿತಾ ಸ್ಪೋಟಕ ಮಾಹಿತಿ..?! ಬಂಧಿತರು ಬಿಚ್ಚಿಟ್ಟ ಭಯಾನಕ ಸತ್ಯವೇನು..!! ಮುಸ್ಲಿಂ ಯುವಕರನ್ನು ಆಕರ್ಷಿಸಲು ಇವರು ಮಾಡುತ್ತಿದ್ದ ತಂತ್ರವೇನು..? ಇಲ್ಲಿಯವರೆಗೂ ದೇಶಾದ್ಯಂತ ಬಂಧನವಾಗಿರುವ ಆರೋಪಿಗಳೆಷ್ಟು..?! ಫುಲ್ ಡಿಟೇಲ್ಸ್..!!!!

by EDITOR NEWS WARRIORS
1 comment


NIA ದೇಶಾದ್ಯಂತ ಹಲವು ಪಿ ಎಫ್ ಐ ಸದಸ್ಯರನ್ನು ಮುಖಂಡರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಅವರ ವಿಚಾರಣಿ ವೇಳೆ ಸ್ಫೋಟಕ ಮಾಹಿತಿ ಹೊರಬಂದಿದ್ದು.PFI ನಾಯಕರು ಮತ್ತು ಕಾರ್ಯಕರ್ತರು ಕೇರಳ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಭಾರತ ಮತ್ತು ವಿದೇಶಗಳಿಂದ ಪಿತೂರಿ ನಡೆಸುತ್ತಿದ್ದಾರೆ ಮತ್ತು ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ಸಂಸ್ಥೆ ಮಾಹಿತಿ ಹೂರಹಾಕಿದ್ದು.

ಮೂಲಭೂತವಾದವನ್ನು ಪ್ರೋತ್ಸಾಹಿಸಲು ಹಾಗೂ ಮುಸ್ಲಿಂ ಯುವಕರನ್ನು ಐಸಿಸ್‌ನಂತಹ ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದೆ:

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು, ಮೂಲಭೂತವಾದವನ್ನು ಪ್ರೋತ್ಸಾಹಿಸಲು ಹಾಗೂ ಮುಸ್ಲಿಂ ಯುವಕರನ್ನು ಐಸಿಸ್‌ನಂತಹ ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಭಯೋತ್ಪಾದಕ ಕೃತ್ಯವೆಸಗಲು ಪೂರ್ವಸಿದ್ಧತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದಾಖಲೆ ಸಮೇತ ಎನ್‌ಐಎ ಲಿಖಿತವಾಗಿ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ:

ಆರೋಪಿಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಭಯಭೀತಿ ಮೂಡಿಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಭಯೋತ್ಪಾದಕ ಕೃತ್ಯವೆಸಗಲು ಪೂರ್ವಸಿದ್ಧತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್‌ಐಎ ಲಿಖಿತವಾಗಿ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಗೃಹ ಸಚಿವಾಲಯದ (MHA) ನಿರ್ದೇಶನದಂತೆ ಈ ವರ್ಷದ ಏಪ್ರಿಲ್ 13 ರಂದು ಮೊದಲ ಮಾಹಿತಿ ವರದಿಯನ್ನು ನೋಂದಾಯಿಸಲಾಗಿದೆ.

ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 120 ಮತ್ತು 153 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 17, 18, 18 ಬಿ, 20, 22 ಬಿ, 38 ಮತ್ತು 39 ರ ಅಡಿಯಲ್ಲಿ ಪಿಎಫ್‌ಐ ನಾಯಕರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿ ಕೊಂಡಿದೆ.

ಎನ್‌ಐಎ ಆರೋಪಿಗಳ ರಿಮಾಂಡ್ ಪ್ರತಿಯಲ್ಲಿ “ಪಿತೂರಿಯ ಅನುಸಾರವಾಗಿ, ಪಿಎಫ್‌ಐ ನಾಯಕರು, ಪದಾಧಿಕಾರಿಗಳು ಮುಸ್ಲಿಂ ಯುವಕರನ್ನು ಐಸಿಸ್‌ನಂತಹ ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆಗೊಳಿಸುವಲ್ಲಿ ಹೇಗೆ ತೊಡಗಿಸಿಕೊಂಡಿದ್ದರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸುವುದು, ಇತರ ಧರ್ಮಗಳನ್ನು ಪ್ರತಿಪಾದಿಸುವ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕೊಲೆ, ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಿ ಸ್ಫೋಟ ಮೊದಲಾದ ಕೃತ್ಯಗಳನ್ನು PFI ನಡೆಸಿದೆ ಎಂದು ಎನ್‌ಐಎ ಹೇಳಿದೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಪಿಎಫ್‌ಐ ಕಾರ್ಯಕರ್ತರಲ್ಲಿ ಒಬ್ಬರಾದ ಯಾಸಿರ್ ಅರಾಫತ್ ಅಲಿಯಾಸ್ ಯಾಸಿರ್ ಹಸನ್ ಮತ್ತು ಇತರರು ತಮ್ಮ ಸದಸ್ಯರಿಗೆ ಮತ್ತು ಇತರರಿಗೆ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಸಮಾಜದಲ್ಲಿ ದ್ವೇಷದ ಬೀಜ ಬಿತ್ತಲು ಪಿತೂರಿ :


ಆರೋಪಿತರು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅದಕ್ಕಾಗಿ ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೆ ಎಂದು ಎನ್‌ಐಎ ಹೇಳಿದೆ.

ದೇಶಾದ್ಯಂತ 95 ಕಡೆ ಶೋಧ 45 ಆರೋಪಿಗಳ ಬಂಧನ :

ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸ್ ಪಡೆಗಳು ಭಾರತದಾದ್ಯಂತ ನಡೆಸಿದ ಶೋಧಗಳಲ್ಲಿ ಗುರುವಾರ 106 ಪಿಎಫ್‌ಐ ನಾಯಕರು, ಕಾರ್ಯಕರ್ತರು ಮತ್ತು ಇತರರನ್ನು ಬಂಧಿಸಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರದ 15 ರಾಜ್ಯಗಳ 93 ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿದೆ.

PFI ನಾಯಕರು ಮತ್ತು ಕಾರ್ಯಕರ್ತರು ಭಯೋತ್ಪಾದನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಮುಂದುವರಿದ ಒಳಹರಿವು ಮತ್ತು ಪುರಾವೆಗಳ ನಂತರ NIA ದಾಖಲಿಸಿದ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ PFI ಉನ್ನತ ನಾಯಕರು ಮತ್ತು ಸದಸ್ಯರ ಮನೆ ಮತ್ತು ಕಚೇರಿಗಳಲ್ಲಿ ಈ ಶೋಧಗಳನ್ನು ನಡೆಸಲಾಯಿತು.

ಆರಂಭದಲ್ಲಿ, ಎನ್‌ಐಎ ಜುಲೈ 4 ರಂದು ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ 25 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಆಧರಿಸಿ ಪ್ರಕರಣ ದಾಖಲಿಸಿದೆ, ಆರೋಪಿಗಳು ಹಿಂಸಾತ್ಮಕ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ ಎಂದು ತೆಲಂಗಾಣ ಪೊಲೀಸರು ಕಂಡುಕೊಂಡ ನಂತರ ಪ್ರಕರಣ ದಾಖಲಾಗಿದೆ.

ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಪಿಎಫ್‌ಐ ಮತ್ತು ಅದರ ನಾಯಕರು ಮತ್ತು ಸದಸ್ಯರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಐಎ ಹೇಳಿದೆ.

ಈ ಪ್ರಕರಣಗಳಲ್ಲಿ ಎನ್‌ಐಎ ಒಟ್ಟು 45 ಮಂದಿಯನ್ನು ಬಂಧಿಸಿದೆ. ಕೇರಳದಿಂದ 19 ಆರೋಪಿಗಳನ್ನು ಬಂಧಿಸಿದ್ದರೆ, ತಮಿಳುನಾಡಿನಿಂದ 11, ಕರ್ನಾಟಕದಿಂದ 7, ಆಂಧ್ರಪ್ರದೇಶದಿಂದ ನಾಲ್ವರು,
ರಾಜಸ್ಥಾನದಿಂದ ಇಬ್ಬರು ಮತ್ತು ಉತ್ತರ ಪ್ರದೇಶ ಮತ್ತು ತೆಲಂಗಾಣದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ.

ಎನ್‌ಐಎ ಇತ್ತೀಚೆಗೆ ದಾಖಲಾದ ಐದು ಸೇರಿದಂತೆ ಇಲ್ಲಿಯವರೆಗೆ ಒಟ್ಟು 19 ಪಿಎಫ್‌ಐ ಸಂಬಂಧಿತ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

ಒಟ್ಟಿನಲ್ಲಿ ಎನ್ಐಎ ರಾಷ್ಟ್ರೀಯ ತನಿಖಾ ಸಂಸ್ಥೆ ಪಿ ಎಫ್ ಐ ಸಂಘಟನೆ ವಿರುದ್ಧ ಮುಗಿಬಿದ್ದಿದ್ದು ದೇಶ್ಯಾದ್ಯಂತ ಇರುವ ಇವರ ಬೃಹತ್ ಜಾಲವನ್ನು ಇಂಚಿಂಚಾಗಿ ಭೇದಿಸುತ್ತಿದ್ದು ತನಿಖೆ ಆರಂಭಿಸಿದೆ. ಇನ್ನು ಹಲವು ಮುಖಂಡರು ಸದಸ್ಯರುಗಳನ್ನು ಬಂಧಿಸುವ ಸಾಧ್ಯತೆ ಇದೆ…

ಒಟ್ಟಿನಲ್ಲಿ ದೇಶದಲ್ಲಿ ಬಾಳಿ ಬದುಕಿ ದೇಶದ ವಿರುದ್ಧವೇ ಸಂಚು ರೂಪಿಸುವ ಸಂಘಟನೆಗಳನ್ನು ದೇಶಾದ್ಯಂತ ನಿಷೇಧ ಮಾಡಬೇಕು ಇಲ್ಲವಾದಲ್ಲಿ ಸಾಮರಸ್ಯದಿಂದ ಬಾಳುತ್ತಿರುವ ಜನರ ನಡುವೆ ಕೋಮು ದಳ್ಳೂರಿಗೆ ಕಾರಣವಾಗಿ ಜನರ ನಡುವೆ ಸಾಮರಸ್ಯ ಹಾಳಾಗುವುದರಲ್ಲಿ ಸಂಶಯವಿಲ್ಲ… ಸಮಾಜದಲ್ಲಿ ವಿಷ ಬೀಜ ಬಿತ್ತುವ ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಜನರನ್ನು ಬಂಧಿಸಿ ಶಿಕ್ಷೆ ನೀಡುವ ಕೆಲಸವನ್ನು ಸರ್ಕಾರಗಳು ಪ್ರಾಮಾಣಿಕವಾಗಿ ಮಾಡಬೇಕಾಗಿದೆ…. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಅಪರಾಧಿಗಳು ತಪ್ಪಿಸಿಕೊಳ್ಳಬಾರದು…

ರಘುರಾಜ್ ಹೆಚ್.ಕೆ…9449553305….

Related Articles

1 comment

GeorgeZew July 21, 2025 - 2:08 pm

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...