
ಕಡೆಕಲ್ ನಸ್ರು..

ನಾನ ಆಲಿಯಾಸ್ ಸಮಿಉಲ್ಲಾ…
ಶಿವಮೊಗ್ಗ : ನಗರದಲ್ಲಿ ಓಸಿ ,ಗಾಂಜಾ, ಅಕ್ರಮ ಗ್ಯಾಸ್ ಬಿಲ್ಲಿಂಗ್, ಆಕ್ರಮ ಮಧ್ಯ ಮಾರಾಟ, ದಂಧೆಗಳು ವ್ಯಾಪಕವಾಗಿ ನಡೆಯುತ್ತಿದ್ದು. ಒಂದಷ್ಟು ದಿನ ಹತೋಟಿಗೆ ಬಂದಿತ್ತು. ಆದರೆ ಈಗ ಮತ್ತೆ ಅವು ಚಿಗುರಿಕೊಂಡಿದ್ದು. ಹಣಕ್ಕೋಸ್ಕರ ಜನ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.
ಇಂಥದ್ದೇ ಪ್ರಕರಣ ಮತ್ತೂರಿ ನಲ್ಲಿ ನಡೆದಿದೆ :
ಶಿವಮೊಗ್ಗದ ಮತ್ತೂರಿನ ಕಡೆಕಲ್ಲಿನಲ್ಲಿ ಕುಖ್ಯಾತ ಪಾತಕಿ ಪ್ರಕರಣ ಒಂದರಲ್ಲಿ ಅಜೀವ ಶಿಕ್ಷೆಗೆ ಒಳಗಾಗಿದ್ದು ಜಾಮೀನು ಮೇಲೆ ಹೊರಗೆ ಇರುವ ಕಡೆಕಲ್ ನಸ್ರು ಹಾಗೂ ಗಡಿಪಾರ್ ಆಗಿರುವ ಕಡೆಕಲ್ ಅಬೀದ್ ಹಲವಾರು ವರ್ಷಗಳ ರೌಡಿಶೀಟರ್ ಗಳು ಅಬೀದ್ ನಾ ಕಾಟ ತಾಳಲಾರದೆ ಶಿವಮೊಗ್ಗ ಪೊಲೀಸರು ಆತನನ್ನು ಗಡಿಪಾರು ಮಾಡಿದ್ದಾರೆ. ಆದರೆ ಆತನ ದೋಸ್ತ್ ಕಡೆಕಲ್ ನಸ್ರು ಮಾತ್ರ ತನ್ನ ಬುದ್ಧಿ ಬಿಟ್ಟಿಲ್ಲ ತನ್ನ ಓಸಿ ದಂಧೆ, ಅಕ್ರಮ ಗ್ಯಾಸ್ ಫೀಲಿಂಗ್, ಗಾಂಜಾ ಮಾರಾಟ , ಅಕ್ರಮ ಮಧ್ಯ ಮಾರಾಟವನ್ನು ತನ್ನ ಸಹಚರರನ್ನು ಬಿಟ್ಟು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಇವರಿಗೆ ಮಾಡಲು ಬೇರೆ ಉದ್ಯೋಗವಿಲ್ಲ ಇದನ್ನೇ ಕಾಯಂ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ.
ಕಡೆಕಲ್ ನಸ್ರುಗೆ ನಾನಾ ಆಲಿಯಾಸ್ ಸಮಿಉಲ್ಲಾ ಜೊತೆ ಸಾಥ್ :
ಕಡೆಕಲ್ ನಸ್ರುವಿನ ಈ ಎಲ್ಲಾ ಅಕ್ರಮ ದಂಧೆಗಳಿಗೆ ಬೆನ್ನೆಲುಬಾಗಿ ನಿಂತಿರುವವನು ನಾನ ಆಲಿಯಾಸ್ ಸಮಿಉಲ್ಲಾ ಇಬ್ಬರು ಸೇರಿಕೊಂಡು ಈ ಎಲ್ಲಾ ದಂಧೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ..
ಇತ್ತೀಚಿಗೆ ನಡೆದ ಹರಿಕೃಷ್ಣ ಗಲಾಟೆಯಿಂದ ಬಂದಾಗಿದ್ದವು ಕೆಲವು ದಂಧೆಗಳು :
ಇತ್ತೀಚಿಗೆ ಹರಿಕೃಷ್ಣ ಪ್ರಕರಣ ನಡೆದ ನಂತರ ಶಿವಮೊಗ್ಗ ಪೊಲೀಸರು ಕಡೆಕಲ್ ಮತ್ತೂರು ಭಾಗಕ್ಕೆ ಎಂಟ್ರಿಕೊಟ್ಟು ಇಲ್ಲಿ ಅಕ್ರಮಗಳು ನಡೆಯುತ್ತಿದ್ದ ಸ್ಥಳಗಳಿಗೆಲ್ಲ ಭೇಟಿ ನೀಡಿ ಅಕ್ರಮಗಳನ್ನು ಮಾಡುತ್ತಿದ್ದ ಹಾಗೂ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಎಲ್ಲರಿಗೂ ಇನ್ನು ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದರು..
ಪೊಲೀಸರ ಬೇಟಿಯ ನಂತರ ಸ್ವಲ್ಪ ಪ್ರಮಾಣದಲ್ಲಿ ಹತೋಟಿಕೆ ಬಂದ ಆಕ್ರಮ ದಂಧೆಗಳು :
ಪೊಲೀಸರ ಬೇಟಿಯ ನಂತರ ಕೆಲವೊಂದು ಅಕ್ರಮ ದಂಧೆಗಳು ಸ್ವಲ್ಪ ಪ್ರಮಾಣದಲ್ಲಿ ಹತೋಟಿಗೆ ಬಂದಿದ್ದವು ಇದರಿಂದ ನಿರುದ್ಯೋಗಿಯಂತಾದ ಕಡೆಕಲ್ ನಸ್ರು ಮತ್ತು ನಾನ ಆಲಿಯಾಸ್ ಸಮಿಉಲ್ಲಾ ಸೇರಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಫೀಕ್ ಎಂಬುವರ ಬಳಿ 5,00,000 ತೆಗೆದುಕೊಂಡು ಯಾವುದೇ ಅಗ್ರಿಮೆಂಟ್ ಗಳನ್ನು ಮಾಡಿಸದೆ ಅದನ್ನು ಬೇರೆಯವರಿಗೆ ಬಡ್ಡಿ ರೂಪದಲ್ಲಿ ನೀಡಿ ಸಂಪಾದನೆ ಮಾಡುತ್ತಿದ್ದರು. ರಫೀಕ್ ಇದನ್ನು ಕೇಳಲು ಹತ್ರ ತೆಗೆದುಕೋ ಇವರು ಹತ್ರ ತೆಗೆದುಕೋ ಎಂದು ಹೇಳುತ್ತಿದ್ದರು. ಎನ್ನುವುದು ರಫೀಕ್ ದೂರು ಅಕ್ರಮ ದಂಧೆಗಳಿಗೆ ಬ್ರೇಕ್ ಬಿದ್ದ ನಂತರ ಈ ರೀತಿಯ ವ್ಯವಹಾರಗಳಿಗೆ ಕೈ ಹಾಕುತ್ತಿದ್ದಾರ ನಸ್ರು ಗ್ಯಾಂಗ್…?!ಇದಕ್ಕೆಲ್ಲ ಸಾಥ್ ನೀಡುತ್ತಿದ್ದಾನ ನಾನ ಆಲಿಯಾಸ್ ಸಮಿಉಲ್ಲಾ..?! ಷರತ್ತು ಬದ್ಧ ಜಾಮೀನ ಮೇಲೆ ಹೊರಗಿರುವ ನಸ್ರು ಜಮೀನ್ ವಜಾ ಆಗುತ್ತಾ..?! ದಕ್ಷ ಡಿವೈ ಎಸ್ ಪಿ ಬಾಲರಾಜ್ ಅವರು ಆಮೀದ ತರ ನಸ್ರು ಆಗಲು ಬಿಡುವುದಿಲ್ಲ ಎನ್ನುವ ನಂಬಿಕೆ ಮತ್ತೂರಿನ ಜನರದ್ದು… ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ ಇದೆಲ್ಲದಕ್ಕೂ ಬ್ರೇಕ್ ಹಾಕಬೇಕು ಎನ್ನುವುದು ಅಲ್ಲಿನ ಸ್ಥಳೀಯರ ಒತ್ತಾಯ…


1 comment
**mitolyn**
Mitolyn is a carefully developed, plant-based formula created to help support metabolic efficiency and encourage healthy, lasting weight management.