Home ರಾಜ್ಯಬಡವರ ಪಾಲಿನ ಆರೋಗ್ಯ ಸಂಜೀವಿನಿ ಯಶಸ್ವಿನಿ ಯೋಜನೆ ಮರು ಚಾಲನೆ..!!

ಬಡವರ ಪಾಲಿನ ಆರೋಗ್ಯ ಸಂಜೀವಿನಿ ಯಶಸ್ವಿನಿ ಯೋಜನೆ ಮರು ಚಾಲನೆ..!!

by EDITOR NEWS WARRIORS
1 comment

ಬೆಂಗಳೂರು: ಬಡವರ ಪಾಲಿಗೆ ಆರೋಗ್ಯ ಸಂಜೀವಿನಿ ಎಂದೇ ಹಿಂದೆ ಜನಪ್ರಿಯವಾಗಿದ್ದ ಯಶಸ್ವಿನಿ ಯೋಜನೆ ಮರುಜಾರಿಗೆ ಬುಧವಾರ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಕನ್ನಡ ರಾಜ್ಯೋತ್ಸವ ದಿನದಿಂದ ಸಾರ್ವಜನಿಕರಿಗೆ ಯೋಜನೆಯ ಸಾರ್ವಜನಿಕರಿಗೆ ಅಧಿಕೃತವಾಗಿ ದೊರೆಯಲಿದೆ.

ಯಶಸ್ವಿನಿ ಯೋಜನೆಗಾಗಿ ಬಜೆಟ್ ನಲ್ಲಿ ರೂ.300 ಕೋಟಿ ಮೀಸಲಿಟ್ಟಿದ್ದರು. ಆದರೆ ಕೆಲವು ಕಾರಣಗಳಿಂದ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.

ಹಿಂದೆ ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ 2003ರಲ್ಲಿ ಜಾರಿಯಾಗಿದ್ದ ಯಶಸ್ವಿನಿ ಯೋಜನೆ ನಾಗರಿಕರಿಗೆ ಅದರಲ್ಲೂ ಬಡವರ ಪಾಲಿಗೆ ಸಂಜೀವಿನಿ ಆಗಿತ್ತು.ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶ್​ಕುಮಾರ್ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಈ ಮಹತ್ವಕಾಂಕ್ಷೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಯೋಜನೆಯನ್ನು ಹಲವು ಬದಲಾವಣೆ ಮಾಡಲಾಗಿದ್ದು, ಹೆಚ್ಚು ಸೌಲಭ್ಯವನ್ನು ಇದರ ವ್ಯಾಪ್ತಿಗೆ ತಂದಿದ್ದು. ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಸುಮಾರು 1650 ಕಾಯಿಲೆಗೆ ಚಿಕಿತ್ಸೆ:

ಈ ಮೊದಲಿದ್ದ ಯಶಸ್ವಿನಿ ಕಾರ್ಡ್​ನಲ್ಲಿ ಕೆಲವೇ ರೋಗಗಳಿಗೆ ಚಿಕಿತ್ಸೆ ಸೀಮಿತವಾಗಿತ್ತು. ಪ್ರಸ್ತುತ 1,650 ಕಾಯಿಲೆಗಳನ್ನು ಯೋಜನೆ ವ್ಯಾಪ್ತಿಗೆ ಒಳಗೆ ತರಲಾಗಿದೆ.

ಕುಟುಂಬದ ಸದಸ್ಯರ ಸೇರ್ಪಡೆ:

ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಈಗ ಕುಟುಂಬವನ್ನು ತರಲಾಗಿದೆ. ಈ ಮೊದಲು ಸದಸ್ಯರಷ್ಟೇ ಈ ಸೌಲಭ್ಯ ಪಡೆಯಲು ಅರ್ಹರಿದ್ದರು. ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಈ ವ್ಯಾಪ್ತಿಗೆ ತರಲಾಗಿದೆ. ಕುಟುಂಬದ ನಾಲ್ಕು ಜನರಿಗೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಸದಸ್ಯರಿಗೆ 500 ರೂ ಹಾಗೂ ನಗರ ಪ್ರದೇಶದವರಿಗೆ 1,000 ರೂ ಶುಲ್ಕ ನಿಗದಿ ಮಾಡಲಾಗಿದ್ದು. ಹೆಚ್ಚುವರಿ ಕುಟುಂಬ ಸದಸ್ಯರಿದ್ದಲ್ಲಿ ಶೇ.20ರಷ್ಟು ಹೆಚ್ಚಳ ಅಂದರೆ, ಗ್ರಾಮೀಣರಿಗೆ ತಲಾ 100 ರೂ, ನಗರದವರಿಗೆ 200 ರೂ. ಪಾವತಿಸ ಬೇಕಿದೆ. ಎಸ್​ಸಿ ಮತ್ತು ಎಸ್​ಟಿ ವರ್ಗದ ಶುಲ್ಕಕ್ಕೆ ರಿಯಾಯಿತಿ ನೀಡಿದ್ದು, ಅದನ್ನು ಸರ್ಕಾರವೇ ಬರಿಸಲಿದ್ದು.

ಕಾರ್ಡ್ ಪಡೆದ 15 ದಿನಗಳಲ್ಲಿ ಅರ್ಹರು:

ಯಶಸ್ವಿನಿ ಕಾರ್ಡ್ ಪಡೆದ ಬಳಿಕ 15 ದಿನಗಳ ನಂತರ ಈ ಯೋಜನೆಯ ಸೌಲಭ್ಯವನ್ನು ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಲು ಫಲಾನುಭವಿಗಳು ಅರ್ಹರಾಗುತ್ತಾರೆ. ಸರ್ಕಾರಿ ನೌಕರರಾಗಿದ್ದರೆ, ಖಾಸಗಿ ಕಂಪನಿಯಲ್ಲಿ ವೇತನ ಪಡೆಯುತ್ತಿದ್ದರೆ, ಯಾವುದೇ ವಿಮಾ ಯೋಜನೆಯಲ್ಲಿದ್ದರೆ ಅವರು ಈ ಯೋಜನೆಗೆ ಅರ್ಹರಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಯಶಸ್ವಿನಿ ಯೋಜನೆಯಲ್ಲಿ ಈ ಹಿಂದೆ ಇದ್ದ ಗರಿಷ್ಠ 2 ಲಕ್ಷ ರೂ. ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಆದರೆ, ಒಂದು ಕುಟುಂಬದಲ್ಲಿ
ನಾಲ್ಕು ಜನರು ಸೇರಿದಂತೆ 5 ಲಕ್ಷಕ್ಕೆ ಮೀರದಂತೆ ಮಾತ್ರ ಆಸ್ಪತ್ರೆ ಸೌಲಭ್ಯ ಪಡೆದುಕೊಳ್ಳಬಹುದು ಎನ್ನುವ ನಿರ್ಬಂಧ ವಿಧಿಸಲಾಗಿದೆ. ಕುಟುಂಬದಲ್ಲಿ ಒಬ್ಬರೇ 5 ಲಕ್ಷ ರೂ.ತನಕ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಒಂದು ವರ್ಷದೊಳಗೆ ಒಮ್ಮೆ ಈ ಸೌಲಭ್ಯ ಪಡೆಯಬಹುದು. ಒಟ್ಟಾರೆಯಾಗಿ ಬಡವರ ಪಾಲಿಗೆ ಸಂಜೀವಿಯಾಗಿದ್ದ ಯಶಸ್ವಿನಿ ಯೋಜನೆ ಮರುಚಾಲನೆ ಆಗಿರುವುದು ಜನರಲ್ಲಿ ಆಶಾ ಭಾವನೆ ಹುಟ್ಟಿಸಿದೆ…

ರಘುರಾಜ್ ಹೆಚ್.ಕೆ…9449553305….

Related Articles

1 comment

mitolyn reviews January 26, 2026 - 2:55 pm

**mitolyn reviews**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...