Home ರಾಜ್ಯTHIRTHALLI BREAKING:: 2022 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ..?! ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ ಹಣ ದುರುಪಯೋಗ ತ್ತಿದೆಯಾ..?!! ಜಿಲ್ಲಾಧಿಕಾರಿಗಳ ಮರೆಹೋದ ಸಾಲೂರು ಗ್ರಾಮಸ್ಥರು..!!!

THIRTHALLI BREAKING:: 2022 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ..?! ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ ಹಣ ದುರುಪಯೋಗ ತ್ತಿದೆಯಾ..?!! ಜಿಲ್ಲಾಧಿಕಾರಿಗಳ ಮರೆಹೋದ ಸಾಲೂರು ಗ್ರಾಮಸ್ಥರು..!!!

by EDITOR NEWS WARRIORS
0 comments

ಶಿವಮೊಗ್ಗ : ಅಧಿಕ ಮಳೆ ಬಂದು ಅತಿವೃಷ್ಟಿ ಆದ ಪರಿಣಾಮ ಮನೆಗಳು ಬೀಳುವುದರಿಂದ ಆಗುವ ನಷ್ಟವನ್ನು ಪರಿಹಾರ ಮಾಡುವ ಉದ್ದೇಶದಿಂದ ಸರ್ಕಾರ ಅಂತಹ ನೊಂದ ಫಲಾನುಭವಿಗಳಿಗೆ ಹಣದ ರೂಪದಲ್ಲಿ ಪರಿಹಾರವನ್ನು ಘೋಷಿಸಿದೆ… ಹಾಗೂ ಮನೆ ಮಂಜೂರು ಮಾಡಿದೆ…

ಆದರೆ ಅದರ ದುರುಪಯೋಗ ಈಗ ನಡೆಯುತ್ತಿದೆ ನಿಜವಾದ ಫಲಾನುಭವಿಗಳಿಗೆ ಬಿಟ್ಟು ಆರ್ಥಿಕವಾಗಿ ಸದೃಢವಾಗಿರುವ ವಾಸಕ್ಕೆ ಮನೆ ಇರುವ ನಿವಾಸಿಗಳು ಕೂಡ ಫಲಾನುಭವಿಗಳು ಆಗಿರುವುದು ದುರಂತವಾಗಿದೆ…

ಮೊದಲಿಗೆ ತಾತ್ಕಾಲಿಕ ಶೆಡ್ ರೂಪಿಸಿ ಮಳೆ ಬಂದ ನಂತರ ಅದನ್ನು ಬೀಳಿಸಿ, ಇಲ್ಲವೇ ಚೂರು ಪಾರು ಬಿದ್ದು ಹೋದ ಮನೆಯನ್ನು ಪೂರ್ತಿ ಬಿಳಿಸಿ ಪರಿಹಾರ ತೆಗೆದುಕೊಂಡ ಸಾಕಷ್ಟು ಉದಾಹರಣೆಗಳು ಇವೆ…

ಸಮಗ್ರವಾಗಿ ಸ್ಥಳ ಪರಿಶೀಲನೆ ನಡೆಸದೆ ವಿ ಎ, ಪಿ ಡಿ ಓ ,ಎಂಜಿನಿಯರ್ ಗಳು ರಿಪೋರ್ಟ್ ಹಾಕಿ ಅರ್ಹ ಫಲಾನುಭವಿಗಳನ್ನು ಬಿಟ್ಟು ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಸಿದ್ದಾರೆ ಹಾಗೂ ಪರಿಹಾರ ಕೊಡಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ಇಂದು ಜಿಲ್ಲಾಧಿಕಾರಿಗಳಿಗೆ ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ದೂರು ನೀಡಿದ್ದಾರೆ…

ಪತ್ರಿಕೆಗೆ ಇರುವ ಮಾಹಿತಿಯ ಪ್ರಕಾರ ಇದು ಕೇವಲ ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮದ ಸಮಸ್ಯೆ ಅಷ್ಟೇ ಅಲ್ಲ ಇಡೀ ಜಿಲ್ಲೆಯ ಹಲವು ಕಡೆ ಇದೇ ತರಹ ಮೋಸ ನಡೆದಿದೆ ಎನ್ನಲಾಗಿದೆ…

ದೂರು ಇರುವ ಕಡೆ ಇದರ ಸಮಗ್ರ ತನಿಖೆ ಆಗಬೇಕು ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಯ ಹಣ ಉಳ್ಳವರ ಪಾಲಾಗುತ್ತದೆ.

ಶಿವಮೊಗ್ಗದ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಸಂಬಂಧ ಪಟ್ಟ ಇಲಾಖೆಗೆ ಮಾರ್ಗದರ್ಶನ ನೀಡಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ನಿಜವಾದ ಫಲಾನುಭವಿಗಳಿಗೆ ಹಣ ಸಂದಾಯ ವಾಗುವಂತೆ ಹಾಗೂ ‌ಮನೆ ಮಂಜೂರು ಆಗುವಂತೆ ನೋಡಿಕೊಳ್ಳಬೇಕು…

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...