Home ರಾಜ್ಯBIG IMPACT:: ಸಾಲೂರು ಗ್ರಾಮಸ್ಥರ ಹೋರಾಟಕ್ಕೆ ನ್ಯೂಸ್ ವಾರಿಯರ್ಸ್ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು..!! 2022-2023 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ 2 ಮನೆಗಳು C ವರ್ಗದಿಂದ B2 ವರ್ಗಕ್ಕೆ ಮಾರ್ಪಾಡು..!! ಆದರೆ ತಾವೇ ಮನೆ ಬೀಳಿಸಿಕೊಂಡು ಪರಿಹಾರ ಪಡೆದುಕೊಂಡವರ ಕಥೆ ಏನು..?!! ಸ್ಥಳ ಪರಿಶೀಲನೆ ಮಾಡದೆ A B C ಎಂದು ಪರಿಗಣನೆ ಮಾಡಿ ಪರಿಹಾರ ನೀಡಿರುವ ಇಂಜಿನಿಯರ್ ಗಳ ತಲೆದಂಡವಾಗಬೇಕು..!! ಪುನಃ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಬೇಕು..!!!

BIG IMPACT:: ಸಾಲೂರು ಗ್ರಾಮಸ್ಥರ ಹೋರಾಟಕ್ಕೆ ನ್ಯೂಸ್ ವಾರಿಯರ್ಸ್ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು..!! 2022-2023 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ 2 ಮನೆಗಳು C ವರ್ಗದಿಂದ B2 ವರ್ಗಕ್ಕೆ ಮಾರ್ಪಾಡು..!! ಆದರೆ ತಾವೇ ಮನೆ ಬೀಳಿಸಿಕೊಂಡು ಪರಿಹಾರ ಪಡೆದುಕೊಂಡವರ ಕಥೆ ಏನು..?!! ಸ್ಥಳ ಪರಿಶೀಲನೆ ಮಾಡದೆ A B C ಎಂದು ಪರಿಗಣನೆ ಮಾಡಿ ಪರಿಹಾರ ನೀಡಿರುವ ಇಂಜಿನಿಯರ್ ಗಳ ತಲೆದಂಡವಾಗಬೇಕು..!! ಪುನಃ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಬೇಕು..!!!

by EDITOR NEWS WARRIORS
0 comments

ಶಿವಮೊಗ್ಗ : ಅಧಿಕ ಮಳೆಯಿಂದ ಅತಿವೃಷ್ಟಿಯ ಕಾರಣದಿಂದ ಬಿದ್ದು ಹೋದ ಮನೆಗಳಿಗೆ ಅವುಗಳು ಬಿದ್ದು ಹೋದ ರೀತಿಯ ಆಧಾರದ ಮೇಲೆ ಪೂರ್ತಿ ಬಿದ್ದು ಹೋದರೆ 5 ಲಕ್ಷ ರೂಗಳು, ಅರ್ಧ ಬಿದ್ದರೆ 3 ಲಕ್ಷ ರೂಗಳು, ಸ್ವಲ್ಪ ಪ್ರಮಾಣದ ಹಾನಿಯಾದರೆ 50 ಸಾವಿರ ರೂಪಾಯಿಗಳು ಎಂದು ಕ್ರಮವಾಗಿ ABC ಎಂದು ಮಾರ್ಪಾಡು ಮಾಡಿ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ…

ಸರ್ಕಾರದ ಈ ವ್ಯವಸ್ಥೆ ಬಡವರಿಗೆ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ವರದಾನವಾಗಿದೆ.. ಬಿದ್ದು ಹೋದ ಮನೆ ಬದಲಾಗಿ ಮತ್ತೊಂದು ಮನೆಯನ್ನು ಕಟ್ಟಿಸಿಕೊಳ್ಳಲು ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ.ಆದರೆ ಕೆಲವು ಅಧಿಕಾರಿ ವರ್ಗದವರಿಗೆ ಬಲಾಡ್ಯರಿಗೆ ಆರ್ಥಿಕವಾಗಿ ಸದೃಢ ಇರುವವರು ಕೂಡ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ವರದಿಯನ್ನು ನ್ಯೂಸ್ ವಾರಿಯರ್ಸ್ ನಿನ್ನೆ ಪ್ರಕಟಿಸಿದ್ದು… ಸಾಲೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರನ್ನು ಕೂಡ ನೀಡಿದ್ದರು… ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಇದನ್ನು ಪರಿಶೀಲನೆ ನಡೆಸುವಂತೆ ತಹಸಿಲ್ದಾರ್ ಗೆ ಆದೇಶ ಮಾಡಿದ್ದಾರೆ… ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಹಶೀಲ್ದಾರ್ C GRADE ಹೊಂದಿದ್ದ ಎರಡು ಮನೆಗಳನ್ನು B2 ಗೆ ವರ್ಗಾಯಿಸಿ ಮಾರ್ಪಾಡು ಮಾಡಿ ಕಳಿಸಿದ್ದಾರೆ… ಇದು ಸ್ವಾಗತಾರ್ಹ ಬೆಳವಣಿಗೆ… ಆದರೆ….

ಈಗಾಗಲೇ ಮನೆಯನ್ನು ಹೊಂದಿರುವವರು ಆರ್ಥಿಕವಾಗಿ ಸದೃಢವಾಗಿರುವವರು ತಾವೇ ಮನೆಯನ್ನು ಬಿಳಿಸಿಕೊಂಡು ಇಂಜಿನಿಯರ್ ಗಳನ್ನು ಬುಕ್ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ಗಂಭೀರ ಆರೋಪ ಈಗ ಇಂಜಿನಿಯರ್ ಗಳ ಮೇಲೆ ಬಿದ್ದಿದೆ…

ಇಂಜಿನಿಯರ್ ಕೂಡ ಯಾವುದೇ ಸ್ಥಳ ಪರಿಶೀಲನೆ ನಡೆಸದೆ ಎಬಿಸಿ ಎನ್ನುವ ಕೆಟಗರಿಯಲ್ಲಿ ಪರಿಹಾರ ಹಣ ನೀಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತದೆ…

ಕೂಡಲೇ ಅಂತ ಇಂಜಿನಿಯರ್ ಗಳನ್ನು ಅಮಾನತ್ತಿನಲ್ಲಿ ಇಡಬೇಕು ಪುನಃ ಸ್ಥಳ ಪರಿಶೀಲನೆ ನಡೆಸಬೇಕು ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗಬೇಕು ಪರಿಹಾರ ಧನ ಬರಬೇಕು ಎನ್ನುವುದು ಗ್ರಾಮಸ್ಥರ ಮನವಿ ಹಾಗೂ ಆಗ್ರಹ…

ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾಡುತ್ತೇವೆ ಎಂದು ಊರಿನ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ….

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...