Home ರಾಜ್ಯಬಂಟ ಸಮಾಜದ ಕೊಡುಗೈ ದಾನಿ ಕೆ ಪ್ರಕಾಶ್ ಶೆಟ್ಟಿ ಇವರಿಂದ ಶಿವಮೊಗ್ಗ ಬಂಟ ಸಮುದಾಯ ಭವನ ಕಟ್ಟಡಕ್ಕೆ 50 ಲಕ್ಷ ದೇಣಿಗೆ..!!

ಬಂಟ ಸಮಾಜದ ಕೊಡುಗೈ ದಾನಿ ಕೆ ಪ್ರಕಾಶ್ ಶೆಟ್ಟಿ ಇವರಿಂದ ಶಿವಮೊಗ್ಗ ಬಂಟ ಸಮುದಾಯ ಭವನ ಕಟ್ಟಡಕ್ಕೆ 50 ಲಕ್ಷ ದೇಣಿಗೆ..!!

by EDITOR NEWS WARRIORS
0 comments

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಬಂಟ ಸಮಾಜದ ಸಮುದಾಯ ಭವನ ಕಟ್ಟಡಕ್ಕೆ ಕರ್ನಾಟಕ ಬಂಟ ಸಮಾಜದ ಕೊಡುಗೈ ದಾನಿ, ಹೃದಯ ಶ್ರೀಮಂತ ಹಾಗೂ ಬಡವರ ಬಂಧು ಎಂದೇ ಪ್ರಖ್ಯಾತರಾದ ಬೆಂಗಳೂರು ಎಂ ಆರ್ ಜಿ ಗ್ರೂಪ್ ನ ಛೇರ್ಮನ್ ಶ್ರೀ ಪ್ರಕಾಶ್ ಶೆಟ್ಟಿ ಇವರು 50 ಲಕ್ಷ ರೂ.ಗಳ ದೇಣಿಗೆ ನೀಡಿರುತ್ತಾರೆ.


ಸಮಾಜದ ಎಲ್ಲ ವರ್ಗದ ಜನರಿಗೆ ಪ್ರಮುಖವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಡವರು, ನಿರ್ಗತಿಕರು, ಪ್ರತಿಭಾವಂತರು ಹಾಗೂ ಕೊರೋನಾ ಸಂದರ್ಭದಲ್ಲಿ ಜೀವನ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿದ್ದ ಸಾವಿರಾರು ಜನರಿಗೆ ಕೊಟ್ಯಂತರ ರೂ.ಗಳ ಹಣ ಸಹಾಯ, ಆಹಾರ ಸಾಮಗ್ರಿಗಳು, ಔಷಧಿಗಳು, ನಿರ್ಗತಿಕರಿಗೆ ವಸತಿ, ಶಿಕ್ಷಣ ಹೀಗೆ ಹಲವು ಹತ್ತು ರೀತಿಯಲ್ಲಿ ಸಹಾಯ ಹಸ್ತ ಚಾಚಿದ ಮಹಾದಾನಿ ಪ್ರಕಾಶ್ ಶೆಟ್ಟಿಯವರು.
ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಕಾರ್ಯಕಾರಿ ಸಮಿತಿ, ಕಟ್ಟಡ ಸಮಿತಿ, ಹಿಂದಿನ ಅಧ್ಯಕ್ಷರುಗಳು ಮತ್ತು ಸಮಸ್ತ ಸಮಾಜ ಬಾಂಧವರ ಪರವಾಗಿ ಕೆ. ಪ್ರಕಾಶ್ ಶೆಟ್ಟಿ ಇವರಿಗೆ ಹೃದಯಪೂರ್ವಕ ಅಭಿನಂದನೆಗಳು ಮತ್ತು ಸಾಷ್ಠಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇವೆ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷರಾದ ಶ್ರೀ ಎಸ್. ಕೃಷ್ಣ ಶೆಟ್ಟಿ ಹಾಗೂ ಸಂಘದ ನಿರ್ದೇಶಕರು ಮತ್ತು ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ದಿವಾಕರ್ ಶೆಟ್ಟಿ ಇವರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
..

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...