Home ರಾಜ್ಯಅನುದಾನಿತ ನೌಕರರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಆಗ್ರಹ..!!!

ಅನುದಾನಿತ ನೌಕರರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಆಗ್ರಹ..!!!

by EDITOR NEWS WARRIORS
1 comment


ಶಿವಮೊಗ್ಗ: ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದ ಸದಸ್ಯರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಎಚ್.ಆರ್.ಎಂ.ಎಸ್.ನಲ್ಲಿ ಅಳವಡಿಸಿಕೊಡುವಂತೆ ಆಗ್ರಹಿಸಿ ಅನುದಾನಿತ ನೌಕರರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ ಎಸ್.ಅವರ ನೇತೃತ್ವದ ನಿಯೋಗ ಪ.ಪೂ.ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಮೊದಲು ಸಹಕಾರ ಸಂಘದಿಂದ ತೆಗೆದುಕೊಂಡ ಸಾಲಗಳ ಕಂತನ್ನು ಎಚ್.ಆರ್.ಎಂ.ಎಸ್.ಮೂಲಕ ಪ್ರತಿ ತಿಂಗಳು ಕಟಾಯಿಸುವ ಸೌಲಭ್ಯ ಇತ್ತು.

ಖಜಾನೆ-2 ವ್ಯವಸ್ಥೆ ಬಂದಾಗಿನಿಂದ ಸಾಲಗಳ ಕಂತನ್ನು ಕಟಾಯಿಸುವ ಸೌಲಭ್ಯ ಇಲ್ಲವಾಗಿದೆ. ಆ ಕಾರಣಕ್ಕೆ ಸಹಕಾರ ಸಂಘದಲ್ಲಿ ಸುಸ್ತಿದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.


ಈಗಾಗಲೇ ಹಲವಾರು ಸಹಕಾರ ಸಂಘಗಳ, ಸಹಕಾರ ಬ್ಯಾಂಕುಗಳ, ತಾಲೂಕು ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರ ಸಂಘ, ನಿ., ಹಾಗೂ ಸರಕಾರಿ ನೌಕರರ ಸೌಹಾರ್ದ ಪತ್ತಿನ ಸಹಕಾರ ಸಂಘದ ಸದಸ್ಯರ ಸಾಲದ ಕಂತಿನ ಕಡಿತಗಳು ಎಚ್.ಆರ್.ಎಂ.ಎಸ್.ನಲ್ಲಿ ಅಳವಡಿಕೆಯಾಗಿ ಖಜಾನೆ-2ರಲ್ಲಿ ಕಡಿತವಾಗುವಂತೆ ಎಚ್.ಆರ್.ಎಂ.ಎಸ್.ನಲ್ಲಿ ಕಡಿತಗೊಳಿಸಲು ಅವಕಾಶವಿರುತ್ತದೆ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ಈ ನಿಯೋಗ ತಂದಿತು.


ಈ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಿ ಅನುದಾನಿತರ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷರಾದ ಬಿ.ಎಂ.ರಘು, ಮಾಜಿ ಅಧ್ಯಕ್ಷರಾದ ಡಿ.ಕೆ.ದಿವಾಕರ, ಡಾ.ಬಾಲಕೃಷ್ಣ ಹೆಗಡೆ, ಪ್ರಶಾಂತ ಎಸ್.ಎಚ್., ನಿರ್ದೇಶಕರಾದ ಪರಶುರಾಮಪ್ಪ, ಸುರೇಶ, ಜ್ಯೋತಿ, ಸದಸ್ಯರಾದ ಶಿವ್ಯಾ ನಾಯಕ, ಬಸವರಾಜ ಮೊದಲಾದವರು ನಿಯೋಗದಲ್ಲಿದ್ದರು.
..

ರಘುರಾಜ್ ಹೆಚ್.ಕೆ..9449553305…

Related Articles

1 comment

GeorgeZew July 20, 2025 - 6:24 am

Looking for the best haircut in town? MenSpire delivers tailored precision cuts, expert grooming, and a luxe vibe. Book now for a refined, confidence-boosting transformation.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...