Home ರಾಜ್ಯತೀರ್ಥಹಳ್ಳಿ: ಡಿವೈಎಸ್ಪಿ ಶಾಂತವೀರ್ ವರ್ಗಾವಣೆ..!ಅಂದು ಶಿಕ್ಷಕರಾಗಿ 13 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ತಾಲೂಕಿಗೆ ಇಂದು ಡಿ ವೈ ಎಸ್ ಪಿ ಯಾಗಿ ವರ್ಗಾವಣೆ..!! ಶಾಂತವೀರ್ ವರ್ಗಾವಣೆಗೆ ಕಾರಣವೇನು ಗೊತ್ತಾ..?!

ತೀರ್ಥಹಳ್ಳಿ: ಡಿವೈಎಸ್ಪಿ ಶಾಂತವೀರ್ ವರ್ಗಾವಣೆ..!ಅಂದು ಶಿಕ್ಷಕರಾಗಿ 13 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ತಾಲೂಕಿಗೆ ಇಂದು ಡಿ ವೈ ಎಸ್ ಪಿ ಯಾಗಿ ವರ್ಗಾವಣೆ..!! ಶಾಂತವೀರ್ ವರ್ಗಾವಣೆಗೆ ಕಾರಣವೇನು ಗೊತ್ತಾ..?!

by EDITOR NEWS WARRIORS
0 comments

ಬೆಂಗಳೂರು: ರಾಜ್ಯ ಗೃಹ ಇಲಾಖೆಯಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ವಿವಿಧ ಕಾರಣಗಳಿಂದಾಗಿ ಭಾರೀ ಬದಲಾವಣೆಯನ್ನು ಮಾಡುತ್ತಿದ್ದು. ಇಂದು ಕೂಡ 45 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಗೃಹಸಚಿವ ಆರಗ ಜ್ಞಾನೇಂದ್ರರವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಉಪವಿಭಾಗದಲ್ಲಿ ಡಿವೈಎಸ್​ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತವೀರ್ ಇ ವರ್ಗಾವಣೆಯಾಗಿದ್ದಾರೆ.

 ಡಿ ವೈ ಎಸ್ ಪಿ ಶಾಂತವೀರ. ಇ. ಹಿನ್ನೆಲೆ ::

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಶಾಂತವೀರ್ ಕಡು ಬಡತನದಲ್ಲಿ ಜನಿಸಿದವರು ಆರು ಮಕ್ಕಳಲ್ಲಿ ಐದನೇವರಾಗಿ ಜನಿಸಿದ ಶಾಂತವೀರ್ ಕಷ್ಟಪಟ್ಟು ಕೂಲಿ ಕೆಲಸ ಮಾಡಿಕೊಂಡು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಮುಗಿಸಿದರು, ನಂತರ ಧಾರವಾಡದಲ್ಲಿ ಉನ್ನತ ಶಿಕ್ಷಣಕ್ಕಾಗಿ ಹೋದರು. ನಂತರ ಇವರ ಓದಿನ ಆಧಾರದ ಮೇಲೆ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ ಶಾಂತವೀರ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ 13 ವರ್ಷಗಳ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.

ನಂತರ ಇವರ ಸಹೋದ್ಯೋಗಿಗಳು, ಮಾರ್ಗದರ್ಶಕರ ,ಪ್ರೇರಣೆ ಮೇರೆಗೆ ಕೆ ಎ ಎಸ್ ( KAS) ಮಾಡಿದರು ನಂತರ ಡಿವೈಎಸ್ಪಿ ಆಗಿ ಪ್ರಭೇಶನರಿ ವರ್ಕ್ ಅನ್ನು ತುಮಕೂರಿನಲ್ಲಿ ಪ್ರಾರಂಭಿಸಿದರು.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಗೆ ಡಿವೈಎಸ್ಪಿ ಆಗಿ ಬಂದ ಶಾಂತವೀರ್ :

ಕಳೆದ ಮೂರು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಡಿವೈಎಸ್ಪಿ ಆಗಿ ಬಂದ ಶಾಂತವೀರ್ ಅವರು ಸೌಮ್ಯ ಸ್ವಭಾವದವರು ಮೂಲತಃ ಶಿಕ್ಷಕ ವೃತ್ತಿ ಆಗಿದ್ದರಿಂದ ಒಂದಷ್ಟು ಶಿಸ್ತು ಸಂಯಮವನ್ನು ರೂಡಿಸಿಕೊಂಡಿದ್ದರು. ಪ್ರಾರಂಭದಲ್ಲಿ ತೀರ್ಥಹಳ್ಳಿಯಲ್ಲಿ ಅನೇಕ ಬದಲಾವಣೆಗಳನ್ನು, ಶಾಂತಿಸುವವಸ್ಥೆಯನ್ನು ಕಾಪಾಡುವುದು ರೌಡಿ ಚಟುವಟಿಕೆಗಳನ್ನು ನಿಗ್ರಹಿಸುವುದು ಇನ್ನಿತರ ಕಾರ್ಯದಲ್ಲಿ ಇವರ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ತೀರ್ಥಹಳ್ಳಿಯ ಜನತೆ ಕೂಡ ಇವರನ್ನು ಮೆಚ್ಚಿಕೊಂಡಿದ್ದರು .ಆದರೆ ನಂತರ ನಿಧಾನವಾಗಿ ಡಿವೈಎಸ್ಪಿ ಶಾಂತವೀರ್ ತಮ್ಮ ನೆರಳಿನಲ್ಲಿಯೇ ನಡೆಯುತ್ತಿರುವ ಕೆಲವು ಆಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಲು ಮುಂದಾದರು ಎನ್ನುವುದು ಹಲವರ ದೂರು..?! ತಾಲೂಕಿನಲ್ಲಿ ನಡೆಯುತ್ತಿದ್ದ ಆಕ್ರಮ ಕಲ್ಲುಗಣಿಗಾರಿಕೆ, ಮರಳು ಮಾಫಿಯಾ, ಅಕ್ರಮ ಮಧ್ಯ ಸರಬರಾಜು, ಗಾಂಜಾ, 18ರ ವರ್ಷದ ಒಳಗಿನ ಪ್ರಾಯದ ಮಕ್ಕಳ ಮೋಜು ಮಸ್ತಿಯನ್ನು ನಿಯಂತ್ರಿಸಲು ವಿಫಲರಾದರು..

ವರ್ಗಾವಣೆಗೆ ಕಾರಣಗಳು..?!

1) ಸ್ಪೋಟಕವನ್ನು ಬಳಸಿ ( ಬ್ಲಾಸ್ಟಿಂಗ್) ಮಾಡಿ ತೀರ್ಥಹಳ್ಳಿಯ ಮೇಲಿನ ಕುರವಳ್ಳಿಯಲ್ಲಿ ಆಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು. ಖುದ್ದು ಮಾಧ್ಯಮದವರೇ ವರದಿ ಮಾಡಿದ್ದರು ಮಾಹಿತಿ ನೀಡಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು ಅದನ್ನು ನಿಯಂತ್ರಣ ಮಾಡದೆ ವಿಫಲರಾದದ್ದು…

2) ಅಕ್ರಮ ಮರಳು ಮಾಫಿಯಾ ತಾಲೂಕಿನಲ್ಲಿ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದದ್ದು…

3) ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು ತೀರ್ಥಹಳ್ಳಿಯಲ್ಲಿ ಈಗಲೂ ಗೋವುಗಳ ಸಾಗಾಣಿಕೆ ನಿಂತಿಲ್ಲ ಅದು ಒಂದು ಪ್ರಮುಖ ಕಾರಣ..

4) ಅಕ್ರಮ ಮಧ್ಯ ಸರಬರಾಜು ನಡೆಯುತ್ತಿದ್ದು ತೀರ್ಥಹಳ್ಳಿ ತಾಲೂಕಿನ ಪ್ರತಿ ಹಳ್ಳಿಗಳ ಮನೆಮನೆಗಳಲ್ಲೂ ಅಕ್ರಮ ಮಧ್ಯ ಸಿಗುತ್ತಿರುವುದು ಇದನ್ನು ನಿಯಂತ್ರಿಸಲು ವಿಫಲರಾದದ್ದು..

5) ತಾಲ್ಲೂಕಿಗೆ ಹೂರ ಜಿಲ್ಲೆಗಳಿಂದ ಗಾಂಜಾ ಸರಬರಾಜಾಗುತ್ತಿದ್ದು ಇನ್ನೂ 18ರ ಪ್ರಾಯ ಮುಗಿಯದ ಶಾಲಾ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ತೊಡಗಿದ್ದು ಕೆಲವು ಪ್ರಕರಣಗಳನ್ನು ಭೇದಿಸಿದ್ದಾರೆ. ಆದರೆ ಶಿವಮೊಗ್ಗ ನಗರದಲ್ಲಿ ಆದಂತೆ ಅತಿಹೆಚ್ಚಿನ ಮಟ್ಟದಲ್ಲಿ ನಿಯಂತ್ರಣ ಇನ್ನು ಸಾಧ್ಯವಾಗಿಲ್ಲ…

6) ದಕ್ಷ ಪ್ರಾಮಾಣಿಕ ಅಧಿಕಾರಿಗಳು ತಮ್ಮ ಕೈ ಕೆಳಗೆ ಕಾರ್ಯನಿರ್ವಹಿಸುತ್ತಿದ್ದರು ಅವರಿಂದ ಉತ್ತಮ ಮಟ್ಟದ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು..

7) ಹೇಳಿಕೇಳಿ ತೀರ್ಥಹಳ್ಳಿ ತಾಲೂಕು ಗೃಹ ಸಚಿವರ ತವರೂರು ಗೃಹ ಸಚಿವರಿಗೆ ಮುಜುಗರ ಆಗುವಂತೆ ಅನೇಕ ಪ್ರಕರಣಗಳು ಇಲ್ಲಿ ನಡೆದಿವೆ.. ರಾತ್ರಿ 11:30 ಸುಮಾರಿಗೆ ಒಬ್ಬ ದಲಿತ ಮಹಿಳೆಯ ಮೇಲೆ ಅತ್ಯಾಚಾರ ವಾಗಿದೆ ಎಂದು ಸುಳ್ಳು ಪ್ರಕರಣ ದಾಖಲಾಗಿತ್ತು .ಅದು ಕೂಡ ಇವರ ವಿಫಲತೆಗೆ ಸಾಕ್ಷಿ.. ಏಕೆಂದರೆ ರಾತ್ರಿ ಹನ್ನೊಂದುವರೆಗೆ ಸುಮಾರಿಗೆ ಅಲ್ಲಿ ಮಧ್ಯ ಸಿಗುತ್ತಿದ್ದಿದ್ದು ಆ ಗಲಾಟೆಗೆ ಪ್ರಮುಖ ಕಾರಣ ಆ ಅಕ್ರಮ ಮಧ್ಯ ಮಾರಾಟ ಹಾಗೂ ಸರಬರಾಜನ್ನು ನಿಯಂತ್ರಿಸಲು ವಿಫಲವಾಗಿದ್ದು…

ಇದೀಗ ಶಾಂತವೀರ್ ಅವರನ್ನು ಬಾಗಲಕೋಟೆಯ ಜಮಖಂಡಿ ವಿಭಾಗಕ್ಕೆ ಟ್ರಾನ್ಸಫರ್ ಮಾಡಲಾಗಿದೆ. ಅವರ ಜಾಗಕ್ಕೆ ಸಿಐಡಿ ವಿಭಾಗದಲ್ಲಿ ಪ್ರೊಬೇಶನರಿ ವೃತ್ತಿ ಪ್ರಾರಂಭಿಸಿದ ಡಿವೈಎಸ್​ಪಿ ಆಗಿ ಇತ್ತೀಚೆಗಷ್ಟೆ ಆಯ್ಕೆ ಆಗಿದ್ದ ಗಜಾನನ ವಾಮನ ಸುತಾರ್​ ರವರು ವರ್ಗಾವಣಿ ಮಾಡಲಾಗಿದೆ.

ಕಾಕತಾಳಿವೆಂದರೆ ಸುಮಾರು 20 ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ ದಕ್ಷ, ಪ್ರಾಮಾಣಿಕ ,ನಿಷ್ಠಾವಂತ ಖಡಕ್ ಅಧಿಕಾರಿ ಬಿ ಬಾಲರಾಜ್ ಅವರು ಪ್ರಸ್ತುತ ಶಿವಮೊಗ್ಗ ತಾಲೂಕಿನ ಉಪವಿಭಾಗದಲ್ಲಿ ಡಿವೈಎಸ್ಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ಅವರಿಗೆ ಕೇಂದ್ರ ಸರ್ಕಾರ ನೀಡುವ ಅತ್ಯುತ್ತಮ ತನಿಖಾ ಪ್ರಶಸ್ತಿ ಲಭಿಸಿದೆ.. ಉತ್ತಮ ಅಧಿಕಾರಿಗಳಿಗೆ ಉತ್ತಮ ಕಾರ್ಯಕ್ಕೆ ಯಾವಾಗಲೂ ಪ್ರಶಂಸೆ ಅಭಿನಂದನೆ ಪ್ರಶಸ್ತಿಗಳು ಲಭ್ಯವಾಗುತ್ತವೆ ಕಾಯಬೇಕು ಅಷ್ಟೇ…

ಈಗ ಶಾಂತವೀರ್ ಸರದಿ ಪ್ರಾರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ನಂತರ ಏಕೆ ಶಾಂತವಾದರೂ ಗೊತ್ತಾಗಲಿಲ್ಲ..?! ವೈಯಕ್ತಿಕವಾಗಿ ತಮ್ಮ ಮೇಲೆ ಉತ್ತಮ ಅಭಿಪ್ರಾಯವಿದೆ… ಇನ್ನು ಮುಂದಾದರೂ ಬಾಗಲಕೋಟೆಯ ಜಮಖಂಡಿಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಉತ್ತಮವಾಗಿ ಕಾರ್ಯನಿರ್ವಹಿಸಿ ತಮ್ಮ ದಕ್ಷತೆ, ಪ್ರಾಮಾಣಿಕತೆಯನ್ನು ಮೆರೆಯಿರಿ ಎಂದು ಆಶಿಸುತ್ತೇವೆ…

ರಘುರಾಜ್ ಹೆಚ್. ಕೆ…9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...