Home ರಾಜ್ಯTRANSFER :ಕೋಟೆ ಠಾಣೆಯ ದಕ್ಷ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಟಿ,ಕೆ ವರ್ಗಾವಣೆ..!! ವರ್ಗಾವಣೆ ಹಿಂದೆ ಆಡಗಿದೆಯಾ ಕ್ಲಬ್ ಮಾಫಿಯಾ..?! ಸೂಕ್ಷ್ಮ ಠಾಣೆಗಳಲ್ಲಿ ಒಂದಾದ ಕೋಟೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿರುವುದೇಕೆ..?!

TRANSFER :ಕೋಟೆ ಠಾಣೆಯ ದಕ್ಷ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಟಿ,ಕೆ ವರ್ಗಾವಣೆ..!! ವರ್ಗಾವಣೆ ಹಿಂದೆ ಆಡಗಿದೆಯಾ ಕ್ಲಬ್ ಮಾಫಿಯಾ..?! ಸೂಕ್ಷ್ಮ ಠಾಣೆಗಳಲ್ಲಿ ಒಂದಾದ ಕೋಟೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿರುವುದೇಕೆ..?!

by EDITOR NEWS WARRIORS
1 comment

ಶಿವಮೊಗ್ಗ: ನಗರದ ಸೂಕ್ಷ್ಮ ಠಾಣೆಗಳಲ್ಲಿ ಒಂದಾದ ಕೋಟೆ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ ಐ ಚಂದ್ರಶೇಖರ್ ಟಿ, ಕೆ ಎ ಎನ್ ಎಫ್ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ.. ಅವರ ಜಾಗಕ್ಕೆ ಐ ಎಸ್‌ ಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರುದ್ರೇಶ್ ಕೆಪಿ ವರ್ಗಾವಣೆಗೊಂಡಿದ್ದಾರೆ…

ಚಂದ್ರಶೇಖರ್ ವರ್ಗಾವಣೆ ಹಿಂದೆ ಅಡಗಿದೆಯಾ ಕ್ಲಬ್ ಮಾಫಿಯಾ..?!

ಚಂದ್ರಶೇಖರ್ ಅವರು ಇತ್ತೀಚೆಗೆ ನಗರದ ಪ್ರತಿಷ್ಠಿತ ಕ್ಲಬ್ ಒಂದರ ಮೇಲೆ ನಿರಂತರವಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನಗದನ್ನು ವಶಪಡಿಸಿಕೊಂಡು ಹಲವರ ಮೇಲೆ ಕೇಸು ದಾಖಲಿಸಿದ್ದರು.. ಇದು ಆ ಕ್ಲಬ್ ನ ಆದಾಯಕ್ಕೆ ಹೊಡೆತ ಬಿದ್ದಿತ್ತು ಹಾಗೂ ಕ್ಲಬ್ ಗೆ ಕೆಟ್ಟ ಹೆಸರು ಬಂದಿತ್ತು. ಆ ದಾಳಿ ಈ ವರ್ಗಾವಣೆ ಹಿಂದೆ ಕೆಲಸ ಮಾಡಿರಬಹುದು ಎನ್ನುವ ಅನುಮಾನ ಕಾಡುತ್ತಿದೆ..?!

ದಕ್ಷ, ಪ್ರಾಮಾಣಿಕ ,ನಿಷ್ಠಾವಂತ ಅಧಿಕಾರಿ ಚಂದ್ರಶೇಖರ್ :

ದಕ್ಷ ,ಪ್ರಾಮಾಣಿಕ ,ನಿಷ್ಠಾವಂತ ಅಧಿಕಾರಿಯಾಗಿದ್ದ ಚಂದ್ರಶೇಖರ್ ಅವರು ಎಲ್ಲರೊಂದಿಗೂ ಸರಳವಾಗಿ ಬೆರೆಯುತ್ತಿದ್ದರು. ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರು. ಕೋಟೆಯಂತಹ ಸೂಕ್ಷ್ಮ ಪ್ರದೇಶವನ್ನು ನಿಯಂತ್ರಿಸುವಲ್ಲಿ ಇವರ ಸಾಧನೆ ಮೆಚ್ಚುವಂತದ್ದು ಎನ್ನಬಹುದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ್ದರು. ಕ್ರೀಡಾ ಪ್ರೇಮಿಯಾಗಿದ್ದ ಚಂದ್ರಶೇಖರ್ ತಮ್ಮ ಸಹೋದ್ಯೋಗಿಗಳೊಂದಿಗೆ ಸದಾ ಕ್ರಿಯಾಶೀಲರಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.

ಕೋಟೆ ಠಾಣೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿರುವುದು ಏಕೆ..?!

ಕೋಟೆ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್ ( ಚಂದ್ರಣ್ಣ ) ಹಲವು ಬಾರಿ ತಾವೇ ವರ್ಗಾವಣೆಯನ್ನು ಬಯಸಿದ್ದರು ಕೆಲವು ಬಾರಿ ಇಲಾಖೆಯಿಂದಲೇ ವರ್ಗಾವಣೆಯಾಗಿತ್ತು.. ಆದರೆ ಇಲಾಖೆ ಅವರನ್ನು ಬಿಟ್ಟು ಕೊಟ್ಟಿರಲಿಲ್ಲ ಏಕೆಂದರೆ ಕೋಟೆಯಂತಹ ಸೂಕ್ಷ್ಮ ಪ್ರದೇಶಕ್ಕೆ ಬೇರೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದರು. ಕೋಟೆ ಅಂತಹ ಸೂಕ್ಷ್ಮ ಪ್ರದೇಶವನ್ನು ನಿಯಂತ್ರಿಸುವಲ್ಲಿ ಚಂದ್ರಶೇಖರ್ ಮಹತ್ತರ ಕಾರ್ಯ ವಹಿಸಿದ್ದರಿಂದ ಅವರನ್ನು ಬಿಟ್ಟುಕೊಡಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು.. ಹಾಗೆ ನೂತನವಾಗಿ ವರ್ಗಾವಣೆಗೊಂಡ ಅಧಿಕಾರಿಗಳು ಈ ಸ್ಥಳಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು.. ಈಗ ಕೂಡ ನೂತನವಾಗಿ ವರ್ಗಾವಣೆಗೊಂಡಿರುವ ಐಎಸ್‌ಟಿ ವಿಭಾಗದ ರುದ್ರೇಶ್ ಕೆಪಿ ಅವರು ಚಾರ್ಜ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ…

ಅದೇನೆ ಇರಲಿ ಚುನಾವಣೆ ಸಮೀಪ ಇರುವುದರಿಂದ ಇನ್ನೊಂದಷ್ಟು ಕಾಲ ಚಂದ್ರಶೇಖರ್ ಅವರು ಇಲ್ಲೇ ಕಾರ್ಯ ನಿರ್ವಹಿಸಿದ್ದಾರೆ. ಚೆನ್ನಾಗಿರುತ್ತಿತ್ತು ಎನ್ನುವುದು ಹೆಸರು ಹೇಳಲಿಚ್ಚಿಸಿದ ಕೆಲವು ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಕೆಲವು ಸಂಘಟನೆಗಳ ಒಮ್ಮತದ ಅಭಿಪ್ರಾಯ…

ಹಿಂದೆ ವರ್ಗಾವಣೆಗೊಂಡಾಗ ಇಲ್ಲೇ ಉಳಿಸಿಕೊಳ್ಳುತ್ತಿದ್ದ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಈಗ ಚಂದ್ರಶೇಖರ್ ಅವರು ವರ್ಗಾವಣೆಗೊಂಡಿರುವಾಗ ಇಲ್ಲೇ ಉಳಿಸಿಕೊಳ್ಳುತ್ತಾರಾ..?! ಅಥವಾ ಚಂದ್ರಶೇಖರ್ ಅವರು ಖಾಯಂ ಆಗಿ ವರ್ಗಾವಣೆಗೊಂಡು ಹೋಗುತ್ತಾರ..?! ಕಾದುನೋಡಬೇಕು…

ರಘುರಾಜ್ ಹೆಚ್.ಕೆ…9449553305..

Related Articles

1 comment

RobertPriew August 22, 2025 - 2:40 am

Эта статья предлагает уникальную подборку занимательных фактов и необычных историй, которые вы, возможно, не знали. Мы постараемся вдохновить ваше воображение и разнообразить ваш кругозор, погружая вас в мир, полный интересных открытий. Читайте и открывайте для себя новое!
Изучить вопрос глубже – https://quick-vyvod-iz-zapoya-1.ru/

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...