Home ರಾಜ್ಯBreak for bribery in sub register office: ಲಂಚಕ್ಕೆ ಬ್ರೇಕ್ ದಲ್ಲಾಳಿಗಳಿಗೆ ಕೋಕ್ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದವರಿಗೆ ಕಡಿವಾಣ..?! ತ್ವರಿತವಾಗಿ ಸಾರ್ವಜನಿಕರಿಗೆ ಸೇವೆ ಸರ್ಕಾರದ ಮಹತ್ವದ ಯೋಜನೆ ಕಂದಾಯ ಸಚಿವ ಆರ್ ,ಅಶೋಕ್ ..!!

Break for bribery in sub register office: ಲಂಚಕ್ಕೆ ಬ್ರೇಕ್ ದಲ್ಲಾಳಿಗಳಿಗೆ ಕೋಕ್ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದವರಿಗೆ ಕಡಿವಾಣ..?! ತ್ವರಿತವಾಗಿ ಸಾರ್ವಜನಿಕರಿಗೆ ಸೇವೆ ಸರ್ಕಾರದ ಮಹತ್ವದ ಯೋಜನೆ ಕಂದಾಯ ಸಚಿವ ಆರ್ ,ಅಶೋಕ್ ..!!

by EDITOR NEWS WARRIORS
0 comments


ಬೆಂಗಳೂರು: ಸಬ್ ರಿಜಿಸ್ಟ್ರಾರ್ (ಉಪನೊಂದಾವನ ಅಧಿಕಾರಿ ಕಾರ್ಯಾಲಯ) ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರ, ಲಂಚ ಬಾಕತನಕ್ಕೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡಲು ಕಾವೇರಿ 2.0 ತಂತ್ರಾಂಶ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದ್ದು.


ಪಾಸ್ಪೋರ್ಟ್ ಮಾದರಿಯ ಸೇವೆ ಒದಗಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೊಸ ಕಾವೇರಿ 2.0 ತಂತ್ರಾಂಶ ಬಳಸಲಾಗುವುದು.
ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ದಿನಕ್ಕೆ ಸುಮಾರು 10,000 ದಾಖಲೆ ಪತ್ರಗಳನ್ನು ನೋಂದಣಿ, ದೃಢೀಕರಣ ಪತ್ರ ಸೇವೆ ಒದಗಿಸಲಾಗುತ್ತಿದೆ.

ಲಂಚಕ್ಕೆ ಬ್ರೇಕ್ ಬೀಳುವ ಸಾಧ್ಯತೆ..?!

ತ್ವರಿತಗತಿಯ ಸೇವೆಗಾಗಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗುವುದು. ಆನ್ಲೈನ್ ನಲ್ಲಿ ಸೇವೆಯ ಕಾರಣ ಅಧಿಕಾರಿಗಳಿಗೆ ಲಂಚ ಕೊಡುವಂತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬಹುದು. ದಿನವಿಡೀ ಕಚೇರಿ ಎದುರು ಕಾಯುವ ಬದಲು ನಿಗದಿತ ಸಮಯಕ್ಕೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಏಜೆಂಟರಗಳು ದಲ್ಲಾಳಿಗಳಿಗೆ ಕೋಕ್.. ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದವರಿಗೆ ಕಡಿವಾಣ…


ಏಜೆಂಟರ ಸಹಾಯ ಅಗತ್ಯ ಇರುವುದಿಲ್ಲ. ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಸರ್ವರ್ ಸಮಸ್ಯೆಯೂ ಬಗೆಹರಿಯಲಿದ್ದು, ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದವರಿಗೆ ಕಡಿವಾಣ ಬೀಳಲಿದೆ. ಫೆಬ್ರವರಿ 2ರಿಂದ ರಾಜ್ಯದ ಮೈಸೂರು, ರಾಮನಗರ, ಮಂಗಳೂರು, ಬೆಳಗಾವಿ, ಚಿಂಚೋಳಿ, ಮಂಡ್ಯದಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ,
ಸಾಕಷ್ಟು ಅಧ್ಯಯನದ ನಂತರ ಈ ತಂತ್ರಾಂಶ ಅಳವಡಿಸಲಾಗುತ್ತಿದೆ, ಇದರಿಂದ ಹಲವು ಅನುಕೂಲಗಳಾಗಲಿದ್ದು, ಭೂಗಳ್ಳರಿಗೆ ಕಡಿವಾಣ ಬೀಳಲಿದೆ. ಕೆಲವೇ ನಿಮಿಷಗಳಲಿ ನೋಂದಣಿ ಸೇವೆ ಪಡೆಯಬಹುದು. ನೋಂದಣಿ ಪತ್ರಗಳನ್ನು ದಾಖಲೆ ಪತ್ರಗಳನ್ನು ಜನರಿಗೆ ಕೊಡುವುದಿಲ್ಲ. ಅವುಗಳ ಕೋಡ್ ನಂಬರ್ ಕೊಡಲಾಗುತ್ತದೆ. ಕೋಡ್ ನಂಬರ್ ಬಳಸಿ ದೃಢೀಕೃತ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ….

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...