Home ರಾಜ್ಯTHIRTHALLI: ಸರ್ಕಾರಿ ಕೆಲಸ ಸೇವೆಯಲ್ಲ ಕರ್ತವ್ಯ ನಿವೃತ್ತ ಹಿರಿಯ ಫಾರ್ಮಸಿ ಅಧಿಕಾರಿ ಸುಭಾಷ್..!!

THIRTHALLI: ಸರ್ಕಾರಿ ಕೆಲಸ ಸೇವೆಯಲ್ಲ ಕರ್ತವ್ಯ ನಿವೃತ್ತ ಹಿರಿಯ ಫಾರ್ಮಸಿ ಅಧಿಕಾರಿ ಸುಭಾಷ್..!!

by EDITOR NEWS WARRIORS

ತೀರ್ಥಹಳ್ಳಿ: ಸರ್ಕಾರಿ ಕೆಲಸವನ್ನು ಸೇವೆ ಎಂದು ಕರೆಯಲಾಗುತ್ತದೆ. ಆದರೆ ಸಾಕಷ್ಟು ಗೌರವಯುತವಾದ ಸಂಬಳ ಸವಲತ್ತುಗಳನ್ನು ಪಡೆದು ಮಾಡುವ ಕೆಲಸಗಳನ್ನು ಸೇವೆ ಎಂದು ಪರಿಗಣಿಸಲಾಗದು ಅದು ಕರ್ತವ್ಯ ಎಂದೇ ನನ್ನ ಭಾವನೆ.ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿವುದೇ ನಾವು ನಮ್ಮ ಕರ್ತವ್ಯಕ್ಕೆ ಸಲ್ಲಿಸುವ ನಿಜವಾದ ಗೌರವ ಎಂದು ವಯೋನಿವೃತ್ತಿ ಹೊಂದಿದ ಜೆ ಸಿ ಆಸ್ಪತ್ರೆಯ ಹಿರಿಯ ಫಾರ್ಮಸಿ ಅಧಿಕಾರಿ,ತಾಲ್ಲೂಕು ಆರೋಗ್ಯ ಇಲಾಖಾ ಸಂಘದ ಕಾರ್ಯದರ್ಶಿ ಸುಭಾಷ್ ನುಡಿದರು. ಅವರು ತಾಲ್ಲೂಕು ಆರೊಗ್ಯ ಇಲಾಖಾ ನೌಕರರ ಸಂಘದ ವತಿಯಿಂದ ಜೆ ಸಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಮುಂದುವರೆದು,ಮೂವತ್ತೊಂಬತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ನಾನು ನನ್ನ ಕರ್ತವ್ಯವನ್ನು ಸಾಕಷ್ಟು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ.ನನಗೆ ಕರ್ತವ್ಯ ನಿರ್ವಹಣೆಯಲ್ಲಿ ಒಂದಿಷ್ಟು ಉತ್ತಮ ಹೆಸರು ಬರಲು ವೈದ್ಯಾಧಿಕಾರಿಗಳು ಸಿಬ್ಬಂದಿಗಳೆಲ್ಲರ ಉತ್ತಮ ಸಹಕಾರವೂ ಮುಖ್ಯ ಕಾರಣವಾಗಿದೆ. ಎಲ್ಲರನ್ನೂ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.ಎಂದರು.

ವೈದ್ಯಾಧಿಕಾರಿ ಡಾ.ನಿಶ್ಚಲ್ ಮಾತನಾಡಿ, ಆಸ್ಪತ್ರೆಗೆ ಅಗತ್ಯ ಔಷಧಿ ಸಾಮಾಗ್ರಿಗಳ ಕೊರತೆಯಾಗದಂತೆ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತಿದ್ದ ಅವರ ಕರ್ತವ್ಯ ನಿಷ್ಟೆ ನಿಜಕ್ಕೂ ಮಾದರಿ.ನಿವೃತ್ತಿಗೆ ಒಂದೆರಡು ದಿನವಿರುವಾಗಲೂ ರಜೆ ದಿನಗಳಲ್ಲಿಯೂ ಬಂದು ಅಗತ್ಯ ಔಷಧಿಗಳನ್ನು ಹೊತ್ತು ತಂದು ಜೋಡಿಸುವುದನ್ನು ಕಂಡಾಗ ಇವರ ಬಗ್ಗೆ ಇದ್ದ ಅಭಿಮಾನ ಮತ್ತಷ್ಟು ಹೆಚ್ಚಿದೆ. ಈ ರೀತಿಯ ಕರ್ತವ್ಯನಿಷ್ಟೆಯೇ ನಮ್ಮ ಕರ್ತವ್ಯಕ್ಕೆ ಸಲ್ಲಿಸುವ ನೈಜ ಗೌರವ ಎನಿಸಿದೆ.ನಾನೂ ಕೂಡ ಇವರಂತಾಗಬೇಕು,ಇನ್ನಷ್ಟು ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂಬ ಪ್ರೇರಣೆ ಇವರಿಂದ ದೊರಕಿದೆ. ಇಂತವರ  ನಿವೃತ್ತಿ ಸರ್ಕಾರಕ್ಕೆ,ಇಲಾಖೆಗೆ ನಿಜಕ್ಕೂ ದೊಡ್ಡ ನಷ್ಟ. ಇವರ ಸೇವೆ ಸದಾ ಸ್ಮರಣೀಯ. ಇವರ ನಿವೃತ್ತಿ ಬದುಕಿಗೆ ಹಾರ್ದಿಕವಾಗಿ ಶುಭಹಾರೈಸುವುದಾಗಿ ನುಡಿದರು.

  ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ವಿ ಪ್ರಭಾಕರ್ ಮಾತನಾಡಿ, ವೈದ್ಯಾಧಿಕಾರಿಯೊಬ್ಬರು ಇನ್ನಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆನಿಸಿದ್ದಕ್ಕೆ ತಮ್ಮ ಸಿಬ್ಬಂದಿಯೊಬ್ಬರು ಪ್ರೇರಣೆ ಎಂದು ಹೇಳಿದ್ದನ್ನು ನಾನು ಕೇಳಿದ್ದು ಇದೇ ಮೊದಲು. ಇಂತಹ ಅಭಿಮಾನ,ಗೌರವಕ್ಕೆ ಪಾತ್ರರಾದ ಸುಭಾಷ್ ರವರ ಬಗ್ಗೆ ಹೆಮ್ಮೆಯಾಗುತ್ತಿದೆ. ಇವರಿಂದ ಕೇವಲ ಅವರ ಗೌರವವಷ್ಟೇ ಹೆಚ್ಚಿಲ್ಲ.ನಮ್ಮ ವೃಂದದ ಗೌರವವನ್ನೂ ಅವರು ಹೆಚ್ಚಿಸಿದ್ದಾರೆ. ಸಂಘಟನಾತ್ಮಕ ಕೆಲಸಗಳಿಗೂ ಉತ್ತಮ ಸಹಕಾರ ಬೆಂಬಲ ಸದಾ ಸ್ಮರಣೀಯ.ಇವರ ವ್ಯಕ್ತಿತ್ವ ನಿಜಕ್ಕೂ ಮಾದರಿ ಎಂದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ,ಸರಳ ಸಜ್ಜನಿಕೆ ಕರ್ತವ್ಯ ನಿಷ್ಟೆಗಳಿಂದ ಸದ್ದಿಲ್ಲದೆ ಸುಭಾಷ್ ರವರು ಎಲ್ಲರ ಅಭಿಮಾನ ಪ್ರೀತಿಗೆ ಪಾತ್ರರಾಗಿದ್ದರು. ಹಾಗಾಗಿ ಇವರ ನಿವೃತ್ತಿ ಭಾವನಾತ್ಮಕವಾಗಿ ಹಲವರಿಗೆ ಕಾಡಿದೆ. ನಾನು ಬಾಲ್ಯದಿಂದಲೇ ಇವರನ್ನು ಬಲ್ಲೆ. ಇವರ ಕರ್ತವ್ಯನಿಷ್ಟೆ ಸೇವಾ ಮನೋಭಾವ ನಿಜಕ್ಕೂ ಅನನ್ಯ. ನನ್ನ ವೃತ್ತಿ ಬದುಕು ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲೂ ಇವರ ಸಹಕಾರವಿದೆ.ಅದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ಇವರ ನಿವೃತ್ತಿ ಬದುಕು ಆರೋಗ್ಯ ನೆಮ್ಮದಿಗಳಿಂದ ಕೂಡಿರಲಿ ಇಂತವರ ಸಂಖ್ಯೆ ಹೆಚ್ಚಲಿ ಎಂದು ಶುಭಹಾರೈಸಿದರು.

ಮೆಗ್ಗಾನ್ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ವಿಜಯಕಾಂತ್ ಮತ್ತಿತರರು ಸುಭಾಷ್ ವ್ಯಕ್ತಿತ್ವವನ್ನು ಶ್ಲಾಘಿಸಿ ಶುಭಹಾರೈಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಫಾರ್ಮಸಿ ಅಧಿಕಾರಿಗಳ ಸಂಘದಿಂದಲೂ ಅವರನ್ನು ಗೌರವಿಸಲಾಯಿತು.

ವೈದ್ಯಾಧಿಕಾರಿ ಡಾ. ಸುಮ,ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಕೆ ರಾಮಕೃಷ್ಣ, ಮೇಟ್ರನ್ ಪಾರ್ವತಿ ಭಟ್,  ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯಾಧ್ಯಕ್ಷೆ ಗೀತಾ ಎಲ್, ಕಾರ್ಯದರ್ಶಿ ಈಶ್ವರ, ಖಜಾಂಚಿ ರಾಘವೇಂದ್ರ , ಉಪಾಧ್ಯಕ್ಷರಾದ ಅನುಸೂಯ,ತಿಲಕಮ್ಮ, ವತ್ಸಲಕೃಷ್ಣ, ಪದಾಧಿಕಾರಿಗಳಾದ ಗೀತಾ ಎಂ , ಕೃಷ್ಣಮೂರ್ತಿ, ವಿನಾಯಕ, ನೀಲಮ್ಮ, ಹನುಮಂತರೆಡ್ಡಿ, ಸುಶೀಲ್ ಕುಮಾರ್, ದೇವಪ್ರಸಾದ್, ಗುರುಪ್ರಸಾದ್,ದುಗ್ಗಣ್ಣ,ಕುಸುಮ ಸೇರಿದಂತೆ ಜೆ ಸಿ ಆಸ್ಪತ್ರೆ ಮತ್ತು ವಿವಿಧ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗಳು ಹಾಜರಿದ್ದ ಕಾರ್ಯಕ್ರಮದಲ್ಲಿ ಫಾರ್ಮಸಿ ಅಧಿಕಾರಿ ಶೋಭ ಸ್ವಾಗತಿಸಿ, ಪ್ರಸನ್ನ ವಂದಿಸಿದರು....

ರಘುರಾಜ್ ಹೆಚ್. ಕೆ..9449553305...

Related Posts

2 comments

GeorgeZew July 20, 2025 - 9:14 pm

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply
köpa receptfritt September 18, 2025 - 1:49 pm

Köpa Cialis Sverige – Vill du köpa Cialis i Sverige? Vi erbjuder enkla och trygga beställningar online, med originalprodukter som garanterar effekt och säkerhet. Diskret leverans direkt hem till dig.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!