ತೀರ್ಥಹಳ್ಳಿ: ಇಪ್ಪತ್ತನಾಲ್ಕು ವರ್ಷ ಪ್ರಾ.ಆ.ಕೇಂದ್ರ ಆಗುಂಬೆಯಲ್ಲಿ ಆನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಒಟ್ಟು ಮೂವತ್ತೆಂಟು ವರ್ಷ ದೊರೆತ ಸುದೀರ್ಘ ಕರ್ತವ್ಯ ನಿರ್ವಹಣಾ ಅವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಎಲ್ಲಾ ಅಧಿಕಾರಿಗಳು ಮತ್ತು ಸಹೊದ್ಯೋಗಿಗಳು ಮತ್ತು ಕುಟುಂಬದ ಉತ್ತಮ ಸಹಕಾರದಿಂದ ಇದು ಸಾಧ್ಯವಾಗಿದೆ.ಉತ್ತಮ ಅನುಭವಗಳ ನೆನಪಿನ ಬುತ್ತಿಯೊಂದಿಗೆ ನನ್ನ ಕರ್ತವ್ಯಕ್ಕೆ ವಿಧಾಯ ಹೇಳುತಿದ್ದೇನೆ. ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ, ತಾಲ್ಲೂಕು ಅರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎ ಎಂ ಜಗದೀಶ್ ನುಡಿದರು.
ವಯೋ ನಿವೃತ್ತಿ ಹೊಂದಿದ ಅವರಿಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ಸಂಘದ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರೆದು, ಬದುಕಲ್ಲಿ ನೆಮ್ಮದಿ ಇದೆ. ಮಕ್ಕಳಿಬ್ಬರೂ ಒಳ್ಳೆಯ ಹುದ್ದೆಗಳಲ್ಲಿದ್ದಾರೆ. ಇದು ನನ್ನ ಕರ್ತವ್ಯಕ್ಕೆ ದೊರೆತ ಪ್ರತಿಫಲ ಎಂದೇ ಭಾವಿಸಿದ್ದೇನೆ. ಶ್ರೀಮಂತಿಕೆಯ ಹಿನ್ನಲೆ ಇರದ ನನಗೆ ಇದೆಲ್ಲವನ್ನೂ ಸಾಧ್ಯವಾಗಿದ್ದು ಸರ್ಕಾರ ನೀಡುತ್ತಿರುವ ಸಂಬಳ ಸವಲತ್ತುಗಳಿಂದ ಅದಕ್ಕಾಗಿ ಸರ್ಕಾರಕ್ಕೆ ನಾನು ಕೃತಜ್ಣನಾಗಿದ್ದೇನೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಟರಾಜ್ ಮಾತನಾಡಿ, ಜಗದೀಶ್ ರವರ ಅನುಭವ ಅಗಾಧವಾದದ್ದು ನನ್ನ ಸುಗಮ ಕರ್ತವ್ಯ ನಿರ್ವಹಣೆಗೆ ಇವರ ಸಹಕಾರ ದೊಡ್ಡದು. ಎಲ್ಲಾ ಕೆಲಸಗಳನ್ನೂ ಅತ್ಯಂತ ಜವಬ್ದಾರಿಯಿಂದ ನಿರ್ವಹಿಸುತಿದ್ದ ಇವರ ನಿವೃತ್ತಿ ನನಗೆ ಭಾವನಾತ್ಮಕವಾಗಿ ಕಾಡುತ್ತಿದೆ. ವೃತ್ತಿ ಬದುಕಿನಲ್ಲಿ ದೊಡ್ಡ ಕೊರತೆಯೊಂದನ್ನು ಸೃಷ್ಟಿಸಿದೆ. ಇವರ ಕರ್ತವ್ಯ ನಿಷ್ಟೆ ನಿಜಕ್ಕೂ ಮಾದರಿ.ಇವರ ನಿವೃತ್ತಿ ಬದುಕು ಸುಖ ಶಾಂತಿಯಿಂದ ಕೂಡಿರಲಿ ಎಂದು ಹಾರ್ದಿಕವಾಗಿ ಶುಭ ಹಾರೈಸುತ್ತೇನೆ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಜಗದೀಶ್ ಎಲ್ಲರೊಂದಿಗೂ ಆತ್ಮೀಯ ಒಡನಾಟ ಹೊಂದಿದ್ದರು.ಎಲ್ಲರೂ ಅವರನ್ನು ಆತ್ಮೀಯತೆಯಿಂದ ಜಗ್ಗಣ್ಣ ಎಂದೇ ಕರೆಯುತಿದ್ದುದು.ಕರ್ತವ್ಯ ನಿಷ್ಠೆಯ ಜೊತೆಗೆ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿಯಾಗಿ ಅವರ ಕೊಡುಗೆ ಸ್ಮರಣೀಯ.ಇತ್ತೀಚಿಗಿನ ಸಂಭ್ರಮ ಕಾರ್ಯಕ್ರಮದಲ್ಲಿ ಇವರಿಗೆ ಮತ್ತು ಇಂದೇ ನಿವೃತ್ತಿ ಹೊಂದುತ್ತಿರುವ ಜೆ ಸಿ ಆಸ್ಪತ್ರೆಯ ಸುಭಾಷ್ ರವರಿಗೆ ಸಂದ ಸನ್ಮಾನದ ಗೌರವ ಪ್ರಾಯಶಃ ತಾಲ್ಲೂಕಿನ ಆರೋಗ್ಯ ಇಲಾಖೆಯ ಬಹು ದೊಡ್ಡ ಸಭಾ ಗೌರವ.ಒಳ್ಳೆಯತನಗಳು ಸದಾ ಒಳ್ಳೆಯ ಫಲಗಳನ್ನೇ ನೀಡುತ್ತವೆ ಎಂಬುದಕ್ಕೆ ಉದಾಹರಣೆಯಿದು. ಮುಂದಿನ ದಿನಗಳಲ್ಲೂ ಇವರ ಸಲಹೆ ಮಾರ್ಗದರ್ಶನ ನಮ್ಮ ಸಂಘಟನಾ ಚಟುವಟಿಕೆಗಳಿಗೆ ದೊರಕಲಿ ಎಂದು ಶುಭ ಹಾರೈಸಿದರು.
ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ವಿ ಪ್ರಭಾಕರ್ ಮಾತನಾಡಿ, ಜಗದೀಶ್ ರವರದ್ದು ದೊಡ್ಡ ವ್ಯಕ್ತಿತ್ವ. ಇವರ ಕಾರ್ಯಚಟುವಟಿಕೆಗಳನ್ನು ಸಾಕಷ್ಟು ಕಾಲದಿಂದ ಗಮನಿಸಿದ್ದೇನೆ. ಇಂದು ಇಬ್ಬರು ಉತ್ತಮ ಸಹೊದ್ಯೋಗಿಗಳ ನಿವೃತ್ತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿರುವುದು ಸುದೈವ.ಇವರ ನಿವೃತ್ತಿ ಬದುಕಿಗೆ ಹಾರ್ದಿಕವಾಗಿ ಶುಭ ಹಾರೈಸುವುದಾಗಿ ತಿಳಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು ಬಿ, ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ,ಜಿಲ್ಲಾ ಫಾರ್ಮಸಿ ಅಧಿಕಾರಿಗಳ ಸಂಘದ ವಿಜಯಕಾಂತ್, ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯಾಧ್ಯಕ್ಕೆ ಗೀತಾ ಎಲ್, ಹಿರಿಯ ಉಪಾಧ್ಯಕ್ಷೆ ಅನಿತ ಬಿ ಸಿ, ಕಾರ್ಯದರ್ಶಿ ಈಶ್ವರ್ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಸುನೀತ, ಗುರುಪ್ರಸಾದ್,ಹನುಮಂತ ರೆಡ್ಡಿ ,ಬಿ ಪಿ ಎಂ ಗಿರಿ ಡಿ ಟಿ ಮತ್ತಿತರರು ಮಾತನಾಡಿ ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ಟಿ ಹೆಚ್ ಓ ಕಚೇರಿವತಿಯಿಂದ ಮತ್ತು ಆಶಾ ಬಳಗದಿಂದ ಜಗದೀಶ್ ರವರನ್ನು ಗೌರವಿಸಲಾಯಿತು.
ಆರ್ ಬಿ ಎಸ್ ಕೆ ವೈದ್ಯಾಧಿಕಾರಿ ಡಾ.ವಿಶ್ವಾಸ್,ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಸುಷ್ಮ ಎಸ್ ಪಿ, ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್,ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ,ಉಪಾಧ್ಯಕ್ಷರು ಗಳಾದ ತಿಲಕಮ್ಮ ವತ್ಸಲಕೃಷ್ಣ ಅನುಸೂಯ, ಪದಾಧಿಕಾರಿಗಳಾದ ವಿಜಯಲಕ್ಷ್ಮಿ,ಸುಶೀಲ್ ಕುಮಾರ್, ಪ್ರಸನ್ನ,ನೀಲಮ್ಮ, ಫಾರ್ವತಿ,ದುಗ್ಗಣ್ಣ ಸೇರಿದಂತೆ ಟಿ ಹೆಚ್ ಓ ಕಚೇರಿ ಹಾಗೂ ಇತರ ಸಂಸ್ಥೆಗಳ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹೆಚ್ ಜಿ ವಿನಾಯಕ ಸ್ವಾಗತಿಸಿ ನಿರೂಪಿಸಿದರು,ಕುಸುಮ ವಂದಿಸಿದರು...
ರಘುರಾಜ್ ಹೆಚ್.ಕೆ..9449553305...
В этой информационной статье вы найдете интересное содержание, которое поможет вам расширить свои знания. Мы предлагаем увлекательный подход и уникальные взгляды на обсуждаемые темы, побуждая пользователей к активному мышлению и критическому анализу!
Разобраться лучше – https://nakroklinikatest.ru/
Эта информационная заметка содержит увлекательные сведения, которые могут вас удивить! Мы собрали интересные факты, которые сделают вашу жизнь ярче и полнее. Узнайте нечто новое о привычных аспектах повседневности и откройте для себя удивительный мир информации.
Детальнее – https://quick-vyvod-iz-zapoya-1.ru/
3 comments
В этой информационной статье вы найдете интересное содержание, которое поможет вам расширить свои знания. Мы предлагаем увлекательный подход и уникальные взгляды на обсуждаемые темы, побуждая пользователей к активному мышлению и критическому анализу!
Разобраться лучше – https://nakroklinikatest.ru/
Эта информационная заметка содержит увлекательные сведения, которые могут вас удивить! Мы собрали интересные факты, которые сделают вашу жизнь ярче и полнее. Узнайте нечто новое о привычных аспектах повседневности и откройте для себя удивительный мир информации.
Детальнее – https://quick-vyvod-iz-zapoya-1.ru/
**mitolyn reviews**
Mitolyn is a carefully developed, plant-based formula created to help support metabolic efficiency and encourage healthy, lasting weight management.