
ತೀರ್ಥಹಳ್ಳಿ : ಸಿ ಜಿ ಐ ಲಿಮಿಟೆಡ್ ಇವರ ಸಿಎಸ್ಆರ್ ಯೋಜನೆಯೊಂದಿಗೆ ಅಭ್ಯುದಯ ಸ್ವಯಂ ಸೇವಾ ಸಂಸ್ಥೆ ಹಾಗೂ ಎ ಐ ಟಿ ಅಲ್ಯೂಮಿನಿ ಸಹಕಾರದೊಂದಿಗೆ ಆಗುಂಬೆ ವ್ಯಾಪ್ತಿಯ 38 ಶಾಲೆಗಳಿಗೆ ಪುಸ್ತಕ ಕಲಿಕಾ ಸಾಮಗ್ರಿಗಳ ವಿತರಣೆ ಸಮಾರಂಭ…
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೇಕೇರಿ ಆವರಣದಲ್ಲಿ ಶಾಲೆ ಸಹಕಾರದೊಂದಿಗೆ ಆಗುಂಬೆ ವ್ಯಾಪ್ತಿಯ 38 ಶಾಲೆಗಳಿಗೆ ಲ್ಯಾಪ್ಟಾಪ್ ಸೇರಿದಂತೆ 36 ಗ್ರೀನ್ ಮತ್ತು ವೈಟ್ ಬೋರ್ಡ್ ,16 ಬೆಂಚ್, 500 ಸ್ಕೂಲ್ ಬ್ಯಾಗ್ ,5,000 ನೋಟ್ಬುಕ್ ,ಎಸ್ ಎಸ್ ಎಲ್ ಸಿ ಮಕ್ಕಳಿಗೆ ಕಾರ್ಡ್ ಬೋರ್ಡ್ ಮತ್ತು ಜಾಮಿಟರಿ ಸೇರಿದಂತೆ ಅನೇಕ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಗುಡ್ಡೇಕೇರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಸುಬ್ರಮಣ್ಯ ಭಟ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಸಿ ಜಿ ಐ ಕಂಪನಿಯ ವೈಸ್ ಪ್ರೆಸಿಡೆಂಟ್ ಗಳಾದ ಶ್ರೀವಿದ್ಯಾ, ಇನ್ನೋರ್ವ ವೈಸ್ ಪ್ರೆಸಿಡೆಂಟ್ ಪ್ರಕಾಶ್ ಅಭ್ಯುದಯ ಸಂಸ್ಥೆಯ ಭರತ್ ಜಿ ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರತ್ನ ಆನಂದ್ ಉಪಾಧ್ಯಕ್ಷರಾದ ರಾಘವೇಂದ್ರ ಅವರು ಸದಸ್ಯರುಗಳಾದ ಜಯಪ್ರಕಾಶ್ ಭಟ್ ,ಜಗದೀಶ್ ಮಳಲಿ, ಶ್ವೇತಾ ಗಿರೀಶ್, ಶಶಾಂಕ್ ಹೆಗಡೆ, ಸರಸ್ವತಿ ಕೃಷ್ಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ನಿರಂಜನ್ ಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖರುವಾರಿಗಳಾದಂತಹ ಹಸಿರು ಮನೆ ನಂದನ್, ಪುಷ್ಪಾನಂದ್, ಪುರುಷೋತ್ತಮ್, ಸಂದೀಪ್ ಮಂಗಳ ,ಸುಧಾಕರ್ ಪೈ, ಗೋಪಾಲ್ ಆನಂದ್ ಅವರನ್ನು ಸನ್ಮಾನಿಸಲಾಯಿತು.
ಕಲಿಕಾ ಸಾಮಗ್ರಿಗಳನ್ನು ಸ್ವೀಕರಿಸಿದ ಶಾಲಾ ಮಕ್ಕಳು ಎಸ್ ಡಿ ಎಂ ಸಿ ಸದಸ್ಯರು ಶಿಕ್ಷಕರು ತಮ್ಮ ಶಾಲೆಗಳಿಗೆ ಮೌಲ್ಯಯುತವಾದ ವಸ್ತುಗಳನ್ನು ಪಡೆಯಲು ಕಾರಣಕರ್ತರಾಗಿರುವ ಹಸಿರು ಮನೆ ನಂದನ್ ಮತ್ತು ಅರುಣ್ ಗುಡ್ಡೇಕೇರಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು..

ರಘುರಾಜ್ ಹೆಚ್.ಕೆ…9449553305…


2 comments
**mitolyn official**
Mitolyn is a carefully developed, plant-based formula created to help support metabolic efficiency and encourage healthy, lasting weight management.
**purdentix**
PurDentix is a revolutionary oral health supplement designed to support strong teeth and healthy gums. It tackles a wide range of dental concerns