Homeಶಿವಮೊಗ್ಗಮಹಾನಗರ ಪಾಲಿಕೆ ವತಿಯಿಂದ ಹೊನ್ನಾಳಿ ರಸ್ತೆಯಲ್ಲಿರುವ ಡೇ ನಲ್ಮ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ..!! ಬೃಹತ್ ಸೈಕಲ್ ಜಾಥಾ ಮೂಲಕ ಮತದಾನದ ಜಾಗೃತಿ..!!
ಮಹಾನಗರ ಪಾಲಿಕೆ ವತಿಯಿಂದ ಹೊನ್ನಾಳಿ ರಸ್ತೆಯಲ್ಲಿರುವ ಡೇ ನಲ್ಮ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ..!! ಬೃಹತ್ ಸೈಕಲ್ ಜಾಥಾ ಮೂಲಕ ಮತದಾನದ ಜಾಗೃತಿ..!!
ಶಿವಮೊಗ್ಗ: “ನಗರದ ಹೊನ್ನಾಳಿ ರಸ್ತೆಯಲ್ಲಿರುವ ಡೇ ನಲ್ಮ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನ ಆಚರಿಸಲಾಯಿತು.
ನಿರಾಶ್ರಿತರಿಗೆ ಅನುಕೂಲವಾಗಲೆಂದು ಪಾಲಿಕೆಯ ವತಿಯಿಂದ ನಿರ್ಮಿಸಿರುವ ಈ ವಸತಿ ರಹಿತರ ಕೇಂದ್ರದಲ್ಲಿ ಸುಮಾರು 40 ಜನರಿಗೆ ರಾತ್ರಿ ಹೊತ್ತಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಕಳೆದ ಒಂದು ವರ್ಷದಿಂದ ಈ ಕಟ್ಟಡದಲ್ಲಿ ಸೇವೆಯನ್ನ ಒದಗಿಸಲಾಗಿದೆ. ಇಂದು ಪಾಲಿಕೆ ನಲ್ಮ್ ಅಧಿಕಾರಿ ಅನುಪಮ, ಲೋಕೇಶ್ವರಪ್ಲ, ರತ್ನಾಕರ್, ರೇಣು, ಗೀತಾ ಹಾಗೂ ಸಿಬ್ವಂದಿಗಳು ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು…
ಹಾಗೆ ಈ ದಿನ ಬೃಹತ್ ಸೈಕಲ್ ಜಾಥಾದ ಮೂಲಕ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು..
ಈ ಜಾಥಾದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿಯ ಅನುಪಮ, ಸುಪ್ರಿಯಾ ,ರತ್ನಾಕರ್, ಲೋಕೇಶ್, ಗೀತಾ, ರೇಣು ಹಾಗೂ ಸೈಕಲ್ ಕ್ಲಬ್ ನ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರುಗಳು ಭಾಗವಹಿಸಿದ್ದರು….