Home ರಾಜ್ಯಶಿವಮೊಗ್ಗ: ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನಟ್ಟಿ ಹಿಡಿದ ಪೊಲೀಸರು..!!

ಶಿವಮೊಗ್ಗ: ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನಟ್ಟಿ ಹಿಡಿದ ಪೊಲೀಸರು..!!

by EDITOR NEWS WARRIORS
0 comments

ಶಿವಮೊಗ್ಗ: ಪ್ರತಿನಿತ್ಯ ಪಡ್ಡೆ ಹುಡುಗರು ಕಾಲೇಜುಗಳ ಹತ್ತಿರ ಪ್ರಮುಖ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಾ ಜನರಲ್ಲಿ ಭಯವನ್ನು ಹುಟ್ಟಿಸುವ ವಾತಾವರಣವನ್ನು ದಿನನಿತ್ಯ ನೋಡುತ್ತಿರುತ್ತೇವೆ.

ಪೊಲೀಸರಿಗೂ ಸಹ ಸಾಕಷ್ಟು ದೂರುಗಳು ಸಾರ್ವಜನಿಕರ ವಲಯದಿಂದ ಇವರ ವಿರುದ್ಧ ಕೇಳಿ ಬಂದಿದೆ.

ಆದರೆ ಸೂಕ್ತ ಸಮಯದಲ್ಲಿ ಇವರನ್ನು ಹಿಡಿಯಲು ಪೊಲೀಸರಿಗೂ ಸಹ ಕಷ್ಟವಾಗುತ್ತಿತ್ತು ಎಲ್ಲಿ ಅಪಾಯ ಮಾಡಿಕೊಳ್ಳುತ್ತಾರೋ ಎನ್ನುವ ಮುನ್ನೆಚ್ಚರಿಕೆಯಿಂದ ಹಿಡಿಯಲು ಹಿಂಜರಿಕೆಯಿಂದ ಇರುತ್ತಿದ್ದರು..

ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ವೀಲಿಂಗ್ ಮಾಡುವ ಯುವಕರು ಹುಡುಗಿಯರನ್ನು ಚುಡಾಯಿಸುವುದು ದಿನನಿತ್ಯ ವಿಲಿಂಗ್ ಮಾಡುವುದು ಇವರಿಗೆ ಶೋಕಿಯ ವಾತಾವರಣ ಆಗಿ ಪರಿಣಮಿಸಿದೆ.

ಆದರೆ ಶಿವಮೊಗ್ಗದ ಟ್ರಾಫಿಕ್ ಪೊಲೀಸರು ನಿನ್ನೆ ಉಷಾ ನರ್ಸಿಂಗ್ ಹೋಮ್ ನಿಂದ ರೈಲ್ವೆ ಸ್ಟೇಷನ್ ಕಡೆಗೆ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಜುಲ್ಪಿ ಮತ್ತು ಆತನ ಸ್ನೇಹಿತ ಪೃಥ್ವಿ ಎನ್ನುವ ಯುವಕರನ್ನು ಬೆನ್ನಟ್ಟಿ ಕೆಇಬಿ ಸರ್ಕಲ್ ಗೂಡ್ ಸೆಡ್ ಹತ್ತಿರ ಹಿಡಿದು ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ..

ಈ ಕಾರ್ಯಾಚರಣೆಯಲ್ಲಿ ಟ್ರಾಫಿಕ್ asi ರಾಜಕುಮಾರ್ ಡ್ರೈವರ್ ಸಮೀರ್ , ಪೊಲೀಸರಾದ ಶಶಿ, ಮೋಹನ್ ಅವರು ಪಾಲ್ಗೊಂಡಿದ್ದರು.

ಇದು ವೀಲಿಂಗ್ ಮಾಡುವ ಯುವಕರಿಗೆ ಒಂದು ಮುನ್ನೆಚ್ಚರಿಕೆಯ ಕ್ರಮವಾಗಿದ್ದು ಇನ್ನು ಮುಂದೆ ವೀಲಿಂಗ್ ಮಾಡುವ ಮುನ್ನ ಅರಿತುಕೊಳ್ಳಿ ನಿಮ್ಮ ಕುಟುಂಬದವರನ್ನು ನೆನೆಸಿಕೊಳ್ಳಿ ನೀವು ವೀಲಿಂಗ್ ಮಾಡುವ ಸಮಯದಲ್ಲಿ ಒಂದು ವೇಳೆ ಅಪಘಾತ ಸಂಭವಿಸಿದರೆ ನಿಮ್ಮನ್ನೇ ನಂಬಿಕೊಂಡಿರುವ ಕುಟುಂಬದವರ ಕಥೆ ಏನು‌..?!

ರಘುರಾಜ್ ಹೆಚ್.ಕೆ..9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...