Home ರಾಜ್ಯಸೌಹಾರ್ದತೆಯಿಂದ ಮಾತ್ರ ಸುಂದರ ಜಗತ್ತಿನ ನಿರ್ಮಾಣ.. ಮಂಜುನಾಥ್ ಸಾಗರ್ ..!!

ಸೌಹಾರ್ದತೆಯಿಂದ ಮಾತ್ರ ಸುಂದರ ಜಗತ್ತಿನ ನಿರ್ಮಾಣ.. ಮಂಜುನಾಥ್ ಸಾಗರ್ ..!!

by EDITOR NEWS WARRIORS
0 comments

ಮಂಗಳೂರು, ಮೇ 1 : ಸಂಘಟನೆ ಮತ್ತು ಸಾಧನೆಗೆ ಅಗಾಧ ಪರಿಶ್ರಮದ ಅವಶ್ಯಕತೆ ಇದೆ. ಅತ್ಯಂತ ತಾಳ್ಮೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘಟನೆಗಳು ನಿರಂತರವಾಗಿ, ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಿಸ್ಸೆಸ್ ಇಂಡಿಯಾ ಕ್ಲಾಸಿಕ್ – ರನ್ನರ್ ಅಪ್ ವಿಜೇತೆ ಮುಂಬಯಿಯ ಶ್ರೀಮತಿ ಪ್ರಭಾ ಸುವರ್ಣ ಅವರು ಮೇ 1ರಂದು ಮಂಗಳೂರಿನ ಅಬ್ಬಕ್ಕ ವಿಹಾರ ನೌಕೆಯಲ್ಲಿ 38ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭದ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಹೀಗೆ ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಐ) ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ (ರಿ), ಮಂಗಳೂರು ಸಂಯುಕ್ತವಾಗಿ. ಸಮಾರಂಭವನ್ನು ಆಯೋಸಿದ್ದವು.

ಐಸಿಎಫ್‌ಸಿಐ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಅವರು ಮಾತನಾಡಿ “ನಾವು 30ಕ್ಕೂ ಹೆಚ್ಚು ದೇಶಗಳಲ್ಲಿ ಆಯೋಜಿಸಿರುವ. ಸಾಂಸ್ಕೃತಿಕ ಸೌರಭಗಳು ಸೌಹಾರ್ದತೆ, ಸ್ನೇಹ ಮತ್ತು ಸಹೋದರತೆಯ ಸಂದೇಶವನ್ನು ಸಾರುವ ಪ್ರಯತ್ನವನ್ನು 15 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಅದು ” ನಾವು ವಿಶ್ವ ಸೌಹಾರ್ದ ಪ್ರಿಯರು” ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ, ಸಾಮರಸ್ಯದಿಂದ ಮಾತ್ರ ಸುಂದರ ಜಗತ್ತಿನ ನಿರ್ಮಾಣ ಸಾಧ್ಯ” ಎಂದರು.

ದುಬೈಯ ತುಳುಕೂಟದ ಮಾಜಿ ಸಂಚಲಕರಾದ ಶೇಕಬ್ಬ ಕೋಟೆ ಹೆಜಮಾಡಿ ಅವರು ಮಾತನಾಡಿ ತಂದೆ ತಾಯಿಯವರು ಕೂಡುವ ಸಂಸ್ಕಾರ ಅಮೂಲ್ಯವಾದದು. ಅದು ಜೀವನ ಪರ್ಯಂತ ನಮ್ಮೊಂದಿಗೆ ಉಳಿಯುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ತೋರುವ ಮನೋಧರ್ಮ ಸರ್ವ ಶ್ರೇಷ್ಠವಾದದ್ದು. ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಫಿಶರೀಸ್ ಕಾಲೇಜಿನ ನಿವೃತ್ತ ಡೀನ್ ಡಾ‌. ಎಸ್ ಎಂ. ಶಿವಪ್ರಕಾಶ್ ” ನಮ್ಮ ದೇಶದ ಪ್ರತಿಯೊಂದು ರಾಜ್ಯವು ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿವೆ ಆದರೆ ಅವುಗಳೆಲ್ಲದರ ಸಾರ ಸಮುದಾಯಗಳ ನಡುವೆ ಸಾಮರಸ್ಯವನ್ನು ಬೆಸುವುದೇ ಆಗಿದೆ. ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಗಣ್ಯರಾದ ಬೆಂಗಳೂರಿನ ಸ್ವಾಮಿ ಎಂಟರ್ಪ್ರೈಸಸ್ ಎಂ.ಡಿ. ಗೋ ನಾ ಸ್ವಾಮಿ, ಮೈಸೂರಿನ ನಿವೃತ್ತ ಡಿವೈಎಸ್ಪಿ. ಕೆ ಎಸ್ ಕೃಷ್ಣಮೂರ್ತಿ ಮತ್ತು ಮನೋಶಾಸ್ತ್ರಜ್ಞ ಹಾಗು ಆಪ್ತ ಸಮಾಲೋಚಕರಾದ ಡಾ. ಗುರುರಾಜ್ ರಾವ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ. ಡಾ. ವಸಂತ ಮುರಳಿ ಬೆಂಗಳೂರು, ಪ್ರತಿಭಾ ಸಾಲಿಯಾನ್ ಮಂಗಳೂರು, ವಾಮನ ಕುದ್ರೊಳಿ ಮತ್ತು ಡಾ ಸಂಗೀತಾ ಹೊಳ್ಳ ಅವರಿಗೆ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸಾಲ್ಯಾನ್ , ಪ್ರತೀಕ್ಷಾ ಪ್ರಭು ಮತ್ತು ತಂಡದಿಂದ ವಿವಿಧ ನೃತ್ಯಗಳು ಹಾಗು ಗಾಯಕರಾದ ಗೋ. ನಾ. ಸ್ವಾಮಿ, ಡಾ. ಶಿವಪ್ರಕಾಶ್, ಶಿವರಾಜ್ ಪಾಂಡೇಶ್ವರ, ‌ಚಂದ್ರಕಾಂತ್ ಮತ್ತು ಎನ್. ನಾಗೇಂದ್ರ ಇವರು ಕನ್ನಡ ತುಳು ಮತ್ತು ಹಿಂದಿ ಗೀತೆಗಳನ್ನ ಹಾಡಿ ರಂಜಿಸಿದರು…

ರಘುರಾಜ್ ಹೆಚ್.ಕೆ..9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...