Home ರಾಜ್ಯಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅವರಿಂದ ಭದ್ರಾ ಸಂಚಾರ ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ..! ಹಾಗೂ ಉತ್ತಮ ಕರ್ತವ್ಯ ನಿರ್ವಹಿಸಿದ ತಾಲೂಕಿನ ವಿವಿಧ ಠಾಣೆಗಳ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವ..!!

ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅವರಿಂದ ಭದ್ರಾ ಸಂಚಾರ ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ..! ಹಾಗೂ ಉತ್ತಮ ಕರ್ತವ್ಯ ನಿರ್ವಹಿಸಿದ ತಾಲೂಕಿನ ವಿವಿಧ ಠಾಣೆಗಳ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವ..!!

by EDITOR NEWS WARRIORS
0 comments
 ಶಿವಮೊಗ್ಗ : ಇಂದು ನಗರದಲ್ಲಿ ಸಾರ್ವಜನಿಕ ಮತ್ತು ಸುಗಮ ಸಂಚಾರದ ಹಿತದೃಷ್ಠಿಯಿಂದ  ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಾದ  ಮಿಥುನ್ ಕುಮಾರ್ ಜಿ.ಕೆ  ಮತ್ತು  ಅನಿಲ್ ಕುಮಾರ್ ಭೂಮರಡ್ಡಿ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು 04 ಭದ್ರಾ ಸಂಚಾರ ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ಮಾನೆ, ಪೊಲೀಸ್ ವೃತ್ತ ನಿರೀಕ್ಷಕರು, ಸಂಚಾರ ವೃತ್ತ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಶ್ರೀಮತಿ ಶೈಲಜಾ ಮತ್ತು ದೊಡ್ಡಮನಿ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು. 

        ಸದರಿ ಸಂಚಾರ ಗಸ್ತು ವಾಹನಗಳು ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪಿಎಎಸ್ (ಪಬ್ಲಿಕ್ ಅಡ್ರೆಸ್ ಸಿಸ್ಟಮ್), ಸೈರನ್, ಲೈಟಿಂಗ್ಸ್, ವಾಕಿ-ಟಾಕಿ ಮತ್ತು ಇತರೆ ಉಪಕರಣಗಳನ್ನು ಹೊಂದಿದ್ದು, ಸದರಿ ವಾಹನಗಳಿಗೆ ಕರ್ತವ್ಯಕ್ಕೆ ನೇಮಿಸಲಾದ ಸಿಬ್ಬಂಧಿಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಉಪಕರಣಗಳ ಬಳಕೆಯ ಕುರಿತಂತೆ ತರಬೇತಿಯನ್ನು ನೀಡಲಾಗಿರುತ್ತದೆ. 


     ಭದ್ರಾ ಸಂಚಾರ ಗಸ್ತು ವಾಹನಗಳು ಬೆಳಗ್ಗೆ 08:00 ರಿಂದ ರಾತ್ರಿ 09:00 ಗಂಟೆಯ ವರೆಗೆ ಗಸ್ತು ಮಾಡಲಿದ್ದು,   ಅಫಘಾತ ನಡೆದ ಸ್ಥಳಕ್ಕೆ ತಕ್ಷಣ ಹೋಗಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳುವುದು, ಸಂಚಾರ ದಟ್ಟಣೆ ಸಂದರ್ಭದಲ್ಲಿ ಕೂಡಲೇ ಸ್ಥಳಕ್ಕೆ ಹೋಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು, ವಾಹನ ನಿಲುಗಡೆ ನಿಷೇಧ ಪ್ರದೇಶಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುವುದು, ಶಾಲಾ ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಗಸ್ತು ಮಾಡಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವುದು ಗಸ್ತು ವಾಹನಗಳ ಕರ್ತವ್ಯಕ್ಕೆ ನೇಮಕವಾದ ಸಿಬ್ಬಂಧಿಗಳ ಪ್ರಮುಖ  ಕರ್ತವ್ಯವಾಗಿರುತ್ತದೆ.

ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಅಭಿನಂದಿಸಿ ಗೌರವ ಪ್ರಶಂಸಾನ ಪತ್ರ ನೀಡಿ ಗೌರವಿಸಿದ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳು..!!
       ಕಳೆದ 02 ತಿಂಗಳುಗಳಲ್ಲಿ
 ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಲ್ಲಿ ಒಟ್ಟು 12 ಪ್ರಕರಣಗಳಲ್ಲಿ ಘನ ನ್ಯಾಯಾಲಯವು  ಆರೋಪಿತರಿಗೆ ಶಿಕ್ಷೆಯನ್ನುವಿಧಿಸಿದ್ದು, ಸದರಿ ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ತನಿಖೆ ಕೈಗೊಂಡು ಉತ್ತಮ ಕರ್ತವ್ಯವನ್ನು ನಿರ್ವಹಿಸಿದ 1)  ಪ್ರವೀಣ್ ನೀಲಮ್ಮ ನವರ್, ಸಿಪಿಐ ಮಾಳೂರು ವೃತ್ತ, 2)  ಗಿರೀಶ್, ಸಿಪಿಐ, ಹೊಸನಗರ ವೃತ್ತ, 3)  ನವೀನ್ ಕುಮಾರ್ ಮಠಪತಿ, ಪಿಎಸ್ಐ ಮಾಳೂರು ಪೊಲೀಸ್ ಠಾಣೆ, 4)  ಆಂಟೋನಿ ಆನಂದ್, ಎಎಸ್ಐ ದೊಡ್ಡಪೇಟೆ, 5)  ಶ್ರೀನಿವಾಸ್, ಎಎಸ್ಐ ಕೋಟೆ ಪೊಲೀಸ್ ಠಾಣೆ, 6)  ಸಿದ್ದರಾಮಪ್ಪ, ಎಎಸ್ಐ ಆನಂದಪುರ  ಪೊಲೀಸ್ ಠಾಣೆ , 7)  ದಿವಾಕರ್ ರಾವ್, ಎಎಸ್ಐ ಭದ್ರಾವತಿ ಗ್ರಾಮಾಂತರ ಠಾಣೆ, 8)  ಕರಿಬಸಪ್ಪ, ಎಎಸ್ಐ, ಜಯನಗರ ಪೊಲೀಸ್ ಠಾಣೆ, 9) ಶ್ರೀಮತಿ ಸವಿತಾ ಮಹೆಚ್.ಸಿ, ಹೊಳೆಹೊನ್ನೂರು ಠಾಣೆ, 10) ಶ್ರೀಮತಿ ವಿಶಾಲಾಕ್ಷಿ, ಮಹೆಚ್.ಸಿ, ಭದ್ರಾವತಿ ನಗರ ವೃತ್ತ ಕಛೇರಿ, 11)  ಮಹೇಶ್, ಹೆಚ್.ಸಿ ಡಿಸಿಆರ್.ಬಿ, 12)  ಪರಮೇಶ್, ಹೆಚ್.ಸಿ ರಿಪ್ಪನ್ ಪೇಟೆ ಪೊಲೀಸ್ ಠಾಣೆ, 13)  ಲೋಕೇಶ್, ಹೆಚ್.ಸಿ ಮಾಳೂರು ಪೊಲೀಸ್ ಠಾಣೆ, 14) ಶ್ರೀಮತಿ ಸರೋಜಮ್ಮ, ಹೆಚ್.ಸಿ ಜಯನಗರ ಪೊಲೀಸ್ ಠಾಣೆ, 15) ಶ್ರೀಮತಿ ವಿಜಯಕಲಾ, ಮಹೆಚ್.ಸಿ, ಭದ್ರಾವತಿ ನಗರ ವೃತ್ತ ಕಛೇರಿ, 16)  ಪರಶುರಾಮ್, ಎಸ್, ಹೆಚ್.ಸಿ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು 17)  ಮಕ್ಸೂದ್ ಖಾನ್. ಸಿಪಿಸಿ ಹೊಸನಗರ ಠಾಣೆ ರವರುಗಳಿಗೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರು ಅಭಿನಂದಿಸಿ ಪ್ರಶಂಸಾನ ಪತ್ರ ನೀಡಿ ಗೌರವಿಸಿದರು...

     ಈ ಸಂದರ್ಭದಲ್ಲಿ,  ಪ್ರಭು ಡಿ. ಟಿ,ಪೊಲೀಸ್‌ ಉಪಾಧೀಕ್ಷಕರು, ಡಿಸಿಆರ್.ಬಿ, ಜಿಲ್ಲಾ ಪೊಲೀಸ್‌ ಕಛೇರಿ,  ಶಿವಮೊಗ್ಗ ಜಿಲ್ಲೆ ರವರು ಉಪಸ್ಥಿತರಿದ್ದರು....

ರಘುರಾಜ್ ಹೆಚ್.ಕೆ…9449553305….

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...