Home ರಾಜ್ಯಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ ಬೈಕ್ ನಿಲ್ಲಿಸಿ ದಾಖಲೆ ತಪಾಸಣೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದ ಬೈಕ್ ಕಳ್ಳರು ..!!

ಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ ಬೈಕ್ ನಿಲ್ಲಿಸಿ ದಾಖಲೆ ತಪಾಸಣೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದ ಬೈಕ್ ಕಳ್ಳರು ..!!

by EDITOR NEWS WARRIORS
0 comments

ಸೊರಬ : ದಿನಾಂಕ:07-05-2023 ರಂದು ಅಲ್ಟಿನ್ ವರ್ಗಿಸ್ ಬಿನ್ ವರ್ಗಿಸ್,25 ವರ್ಷ,ವಾಸ: ಹುನವಳ್ಳಿ ಗ್ರಾಮ,ಸೊರಬ ತಾ!! ಈತನು ಸೊರಬ ಪೊಲೀಸ್ ಠಾಣೆಗೆ ದಿನಾಂಕ:08-05-2023 ರಂದು ದೂರನ್ನು ನೀಡಿದ್ದು ಅದರಂತೆ ಸೊರಬ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 90/23 ಕಲಂ 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಬೈಕ್ ಪತ್ತೆಮಾಡಲು ಕ್ರಮ ಕೈಗೊಂಡಿರುತ್ತಾರೆ‌

ನಂತರ ದಿನಾಂಕ:15-05-23 ರಂದು ಸೊರಬ ಪೊಲಿಸ್ ಠಾಣೆಯ ಪಿ.ಎಸ್.ಐ ಮಾಳಪ್ಪ ವೈಸಿ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-427 ನಾಗರಾಜ್ ,ಪಿ.ಸಿ 1203 ರಾಘವೇಂದ್ರ ಪಿ.ಸಿ-1545 ವಿನಯ್,ಪಿ.ಸಿ-1470 ಸಂದೀಪ್ ರವರು ಸೊರಬ ಪಟ್ಟಣದ ಹೊಸಪೇಟೆ ಹಕ್ಕು ಸರ್ಕಲ್ ನಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಎರಡು ಜನ ಆನವಟ್ಟಿ ರಸ್ತೆ ಮಾರ್ಗವಾಗಿ ಬಂದ ವ್ಯಕ್ತಿಗಳ ಬೈಕ್ ಗಳನ್ನು ತಡೆದು ತಪಾಸಣೆ ಮಾಡಿದಾಗ ಸದರಿಯವರ ವಾಹನದ ದಾಖಲಾತಿಗಳು ಸರಿ ಇಲ್ಲದ ಕಾರಣ ಹಾಗೂ ಅನುಮಾನಾಸ್ಪದವಾಗಿ ಕಂಡು ಬಂದ ಕಾರಣ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ಮಾಡಿದಾಗ ಸದರಿ ಎರಡು ಬೈಕ್ ಗಳಲ್ಲಿ ಸೊರಬ ಠಾಣೆ ಗುನ್ನ ನಂ:90/23 ರಲ್ಲಿ ಕಳ್ಳತನವಾಗಿದ್ದ ಕೆ.ಎ 15 ಇಬಿ 7947 ರ ಸುಜುಕಿ ಜಿಕ್ಸರ್ ಬೈಕ್ ಆಗಿರುತ್ತದೆ.ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿದಾಗ1)ಜುಂಜಪ್ಪ ಬಿನ್ ಮರಿಯಪ್ಪ ಹವಳಮ್ಮನವರ್,24 ವರ್ಷ,ವಾಲ್ಮೀಕಿ ಜಾತಿ,ವಾಟರ್ ಪೂಪ್ ಕೆಲಸ ವಾಸ;ಮಿಳಗಟ್ಟಿ ಗ್ರಾಮ,ಸವಣೂರು ತಾ!!ಹಾವೇರಿ ಜಿ!! 2)ಗದಿಗೆಪ್ಪ ಬಿನ್ ನಾಗಪ್ಪ ದಾಸಣ್ಣನವರ್,27 ವರ್ಷ,ವಾಲ್ಮೀಕಿ ಜಾತಿ,ವ್ಯವಸಾಯ ಕೆಲಸ ವಾಸುಹುಲಗೂರು ಗ್ರಾಮ,ಶಿಗ್ಗಾವಿ ತಾ!! ಹಾವೇರಿ ಜಿ!! ರವರುಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮಾಡಿದಾಗ ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1)ಕೆ.ಎ 15 ಎಕ್ಸ್ 4552 ಬಜ್ಜ್ ಸಿ.ಟಿ 100 ಬೈಕ್,2) ಆನವಟ್ಟಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೆ.ಎ 15 ಇ.ಬಿ 4600 ಬಜಾಜ್ ಪ್ಲಾಟಿನಾ ಬೈಕ್,3) ಸೊರಬ ಠಾಣೆಯ ಗುನ್ನೆ ನಂ:94/2023 ರಂತೆ ದಾಖಲಾದ ಕೆ.ಎ3 ಯು3876 ಗ್ಲಾಮರ್ ಬೈಕ್ ನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.

ಆರೋಪಿಗಳು ಜೊತೆ ಸೇರಿ ಸದರಿ ಸದರಿ ಪ್ರಕರಣದಲ್ಲಿನ ಆರೋಪಿತರ ಪತ್ತೆಗಾಗಿ ಶಿವಮೊಗ್ಗ ಎಸ್,ಪಿ ಮಿಥುನ್ ಕುಮಾರ್ ಜಿ ಕೆ ಎ,ಎಸ್,ಪಿ ಮತ್ತು ಡಿ.ಎಸ್,ಪಿ , ಶಿಕಾರಿಪುರ ಉಪವಿಭಾಗ, ಸಿ,ಪಿಐ ಸೊರಬ ವೃತ್ತ ರವರ ಮಾರ್ಗದರ್ಶನದಲ್ಲಿ ನಾಗರಾಜ್ ಹೆಚ್.ಎನ್ ಪಿ.ಎಸ್.ಐ ಮಾಳಪ್ಪ ವೈ.ಸಿ ಪಿ,ಎಸ್,ಐ ತನಿಖೆ ಸೊರಬ ಠಾಣೆ ರವರ ನೇತೃತ್ವದಲ್ಲಿ ಎರಡು ಜನ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು ಸದರಿ ಪ್ರಕರಣವಲ್ಲದೇ ಶಿಕಾರಿಪುರ ನಗರ ಹಾಗೂ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್ ಗಳನ್ನು ಹಾಗೂ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 02 ಬೈಕ್ ಗಳನ್ನು ಹೀಗೆ ಒಟ್ಟು 04 ಬೈಕ್ ಕಳ್ಳತನ ಮಾಡಿದ ಬೈಕ್ ಗಳನ್ನು ವಶಪಡಿಕೊಂಡಿದ್ದು ಸದರಿ ಮೇಲ್ಕಂಡ 04 ಬೈಕ್‌ ಹಾಗೂ ಆರೋಪಿತರನ್ನು ನಮ್ಮ ವಶಕ್ಕೆ ಪಡೆದುಕೊಂಡಿರುತ್ತೇವೆ ಒಟ್ಟು ನಾಲ್ಕು ಬೈಕ್ ಗಳ ಅಂದಾಜು ಮೌಲ್ಯ 370,000/ರೂಗಳಾಗಿರುತ್ತೆವೆ.ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸೊರಬ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬುದಿಯವರಿಗೆ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ…

ಓಂಕಾರ ಎಸ್. ವಿ. ತಾಳಗುಪ್ಪ….

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...