Home ರಾಜ್ಯಶಿವಮೊಗ್ಗದಲ್ಲಿ ಕಿಡ್ನಾಪ್ ಆದ ದಾವಣಗೆರೆ ಯುವತಿ ಹುಬ್ಬಳ್ಳಿಯಲ್ಲಿ ಪೊಲೀಸರ ಕೈಗೆ..!! ಪರಿಚಯದವರೇ ಕಿಡ್ನಾಪ್ ಮಾಡುದ್ರಾ..?!

ಶಿವಮೊಗ್ಗದಲ್ಲಿ ಕಿಡ್ನಾಪ್ ಆದ ದಾವಣಗೆರೆ ಯುವತಿ ಹುಬ್ಬಳ್ಳಿಯಲ್ಲಿ ಪೊಲೀಸರ ಕೈಗೆ..!! ಪರಿಚಯದವರೇ ಕಿಡ್ನಾಪ್ ಮಾಡುದ್ರಾ..?!

by EDITOR NEWS WARRIORS
0 comments

ಶಿವಮೊಗ್ಗ: ಮೊನ್ನೆ ಅಂದರೆ ದಿನಾಂಕ 14-05.2023 ರಂದು ಶಿವಮೊಗ್ಗದಲ್ಲಿ ಕಿಡ್ನಾಪ್ ಆಗಿದ್ದ ಯುವತಿ ರಂಜಿತಾ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು.

ರಂಜಿತಾ ಹುಬ್ಬಳ್ಳಿಯಲ್ಲಿ ಸಿಕ್ಕಿದ್ದು ಶಿವಮೊಗ್ಗದ ಜಯನಗರ ಪೊಲೀಸರು ಕರೆದುಕೊಂಡು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೂಲತಃ ದಾವಣಗೆರೆಯ ವಾಸಿಯಾದ ರಂಜಿತಾ ಚೆನ್ನಗಿರಿ ತಾಲೂಕಿನ ವಾಸಿಯಾಗಿದ್ದು ನಲ್ಲೂರು ಗ್ರಾಮದ ಬಸವರಾಜ್ ಎಂಬುವವರ ಮಗಳಾಗಿದ್ದಾಳೆ.

ಎರಡು ವರ್ಷ ಆದಿಚುಂಚನಗಿರಿ ಶಾಲೆಯಲ್ಲಿ ಓದಿದ ರಂಜಿತಾ ಕಳೆದ ಒಂದುವರೆ ವರ್ಷದಿಂದ ಖಾಸಗಿ ಆಸ್ಪತ್ರೆ ಒಂದರಲ್ಲಿ ಪಿಜಿಒಥೆರಪಿ ಕೋರ್ಸ್ ಓದುತ್ತಿದ್ದಳು.

ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದ ರಂಜಿತಾ ನಂಜಪ್ಪ ಲೈಫ್ ಕೇರ್ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು ಆದರೆ ಕಳೆದ ಮೂರು ತಿಂಗಳ ಹಿಂದೆ ಸವಳಂಗ ರಸ್ತೆಯಲ್ಲಿರುವ ಸ್ಟಡಿ ಹೋಂ ಹಾಸ್ಟೆಲಿಗೆ ಶಿಫ್ಟ್ ಆಗಿದ್ದಳು.

ದಿನನಿತ್ಯ ಲೈಬ್ರರಿಗೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ ರಂಜಿತಾ ಕಿಡ್ನಾಪ್ ಆಗುವ ಮುನ್ನ ಅಂದರೆ ಮೇ 14 ರಂದು ಸಂಜೆ 5-15 ಕ್ಕೆ ತನ್ನ ಸಹೋದರ ನಿಶಾಂತ್ ಗೆ ಕರೆ ಮಾಡಿ ಎಟಿಎಂ ನಲ್ಲಿ ಹಣ ಬಿಡಿಸಿಕೊಳ್ಳಬೇಕು ಪಿನ್ ನಂಬರ್ ಕೇಳುತ್ತಾಳೆ ಅದೇ ಕೊನೆಯ ಕರೆ ಆಮೇಲೆ ಸಹೋದರನಿಗೆ ಆಕೆಯಿಂದ ಯಾವುದೇ ಕರೆ ಬರುವುದಿಲ್ಲ.

ಆದರೆ ಇತ್ತ ರಾತ್ರಿ ಪಿಜಿ ರೂಮ್ ಮೇಟ್ ರಂಜಿತಾಳ ಸಹೋದರನಿಗೆ ಕರೆ ಮಾಡಿ ಸಂಜೆ ಲೈಬ್ರರಿಗೆ ಹೋದ ರಂಜಿತಾ ಇಷ್ಟು ಹೊತ್ತಾದರೂ ಬಂದಿಲ್ಲ ಎಂದು ತಿಳಿಸುತ್ತಾಳೆ. ನಂತರ ಅವಳಿಗೆ ಫೋನ್ ಮಾಡಿದ ಅವರ ಕುಟುಂಬದವರು ರಿಂಗ್ ಆದರೂ ಮಗಳು ಕರೆ ಸ್ವೀಕರಿಸದ ಕಾರಣ ಗಾಬರಿಯಾಗಿ ಏನೋ ಎಡವಟ್ಟಾಗಿದೆ ಎಂದುಕೊಂಡು ಪೋಷಕರು ನಲ್ಲೂರಿನಿಂದ ಶಿವಮೊಗ್ಗಕ್ಕೆ ಬರುತ್ತಾರೆ.

ಈ ಬೆಳವಣಿಗೆಗಳ ಮಧ್ಯೆ ರಂಜಿತಾ ಫೋನಿಂದ ರಂಜಿತಾ ಪೋಷಕರಿಗೆ ಟೆಕ್ಸ್ಟ್ ಮೆಸೇಜ್ ಒಂದು ಬಂದಿದ್ದು ನಿಮ್ಮ ಮಗಳು ನನ್ನ ಜೊತೆ ಸೇಫ್ ಆಗಿ ಇದ್ದಾಳೆ. 20 ಲಕ್ಷ ರೂ. ರೆಡಿ ಮಾಡಿಕೊಳ್ಳಿ, ಪೊಲೀಸ್ ಅಥವಾ ರಾಜಕೀಯದವರ ಹತ್ತಿರ ಹೋದರೆ ನಿಮ್ಮ ಮಗಳ ಡೆಡೆ ಬಾಡಿನೂ ಸಿಗಲ್ಲ ಎಂದು ಬೆದರಿಕೆಯ ಮೆಸೇಜ್ ಹಾಕಿರುತ್ತಾರೆ.

ಇದನ್ನು ನೋಡಿದ ರಂಜಿತಾ ಪೋಷಕರು ಇನ್ನಷ್ಟು ಗಾಬರಿಯಿಂದ ಮಗಳ ಕಿಡ್ನಾಪ್ ಹಾಗೂ ಹಣಕ್ಕೆ ಬೇಡಿಕೆ ಎರಡು ದೂರನ್ನು ಶಿವಮೊಗ್ಗ ಜಯನಗರ ಠಾಣೆಗೆ ನೀಡುತ್ತಾರೆ.

ದೂರು ದಾಖಲಿಸಿಕೊಂಡ ಶಿವಮೊಗ್ಗ ಜಯನಗರ ಠಾಣೆಯ ಪೊಲೀಸರು ಕಿಡ್ನಾಪ್ ಆದ ರಂಜಿತಾ ನನ್ನು ಹುಡುಕಲು ಒಂದು ವ್ಯವಸ್ಥಿತ ಟೀಮ್ ರೆಡಿ ಮಾಡಿಕೊಂಡು ಎಲ್ಲೆಡೆ ಹುಡುಕಾಟ ಪ್ರಾರಂಭಿಸುತ್ತಾರೆ.

ಆದರೆ ಹುಬ್ಬಳ್ಳಿಯಲ್ಲಿ ರಂಜಿತಾ ಜಯನಗರ ಪೊಲೀಸರಿಗೆ ಸಿಕ್ಕಿದ್ದು ಆಕೆಯನ್ನು ಕರೆದುಕೊಂಡು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಂದು ವೇಳೆ ಆಕೆ ಸಿಕ್ಕಿದ್ದು ನಿಜವಾದರೆ ಆಕೆಯನ್ನು ಕರೆದುಕೊಂಡು ಹೋದವರು ಯಾರು ? ಅವರಿಗೂ ಆಕೆಗೂ ಮೊದಲೇ ಪರಿಚಯವಿತಾ..? ಈ ಕಿಡ್ನಾಪ್ ಪ್ರಕರಣದ ಹಿಂದೆ ಇರುವವರು ಯಾರು..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ…

ರಘುರಾಜ್ ಹೆಚ್.ಕೆ…9449553305…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...