Home ರಾಜ್ಯNews warriors exclusive news: ತೀರ್ಥಹಳ್ಳಿ ಮೇಲಿನ ಕುರುವಳ್ಳಿಯಲ್ಲಿ ನಿಲ್ಲುತ್ತಿಲ್ಲ ಅಕ್ರಮ ಕಲ್ಲುಗಣಿಗಾರಿಕೆ..! ಇದರಲ್ಲಿ ಇದಿಯಾ ಭ್ರಷ್ಟ ಅಧಿಕಾರಿಗಳ ಪಾಲುದಾರಿಕೆ..?! ಇಲ್ಲದಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಸುಮ್ಮನೆ ಕೂತಿರುವುದು ಏಕೆ..?! ಶಿವಮೊಗ್ಗದಲ್ಲಿ ದಕ್ಷ,ಪ್ರಾಮಾಣಿಕ, ಖಡಕ್ ಎಸ್ಪಿ ಮಿಥುನ್ ಕುಮಾರ್ ಜಿ ,ಕೆ ಇದ್ದರು ಸ್ಪೋಟಕ ಬಳಸಿ ನಡೆಸುತ್ತಿರುವ ಕಲ್ಲುಗಣಿಗಾರಿಕೆ ನಿಲ್ಲುತ್ತಿಲ್ಲ ಏಕೆ..?!

News warriors exclusive news: ತೀರ್ಥಹಳ್ಳಿ ಮೇಲಿನ ಕುರುವಳ್ಳಿಯಲ್ಲಿ ನಿಲ್ಲುತ್ತಿಲ್ಲ ಅಕ್ರಮ ಕಲ್ಲುಗಣಿಗಾರಿಕೆ..! ಇದರಲ್ಲಿ ಇದಿಯಾ ಭ್ರಷ್ಟ ಅಧಿಕಾರಿಗಳ ಪಾಲುದಾರಿಕೆ..?! ಇಲ್ಲದಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಸುಮ್ಮನೆ ಕೂತಿರುವುದು ಏಕೆ..?! ಶಿವಮೊಗ್ಗದಲ್ಲಿ ದಕ್ಷ,ಪ್ರಾಮಾಣಿಕ, ಖಡಕ್ ಎಸ್ಪಿ ಮಿಥುನ್ ಕುಮಾರ್ ಜಿ ,ಕೆ ಇದ್ದರು ಸ್ಪೋಟಕ ಬಳಸಿ ನಡೆಸುತ್ತಿರುವ ಕಲ್ಲುಗಣಿಗಾರಿಕೆ ನಿಲ್ಲುತ್ತಿಲ್ಲ ಏಕೆ..?!

by EDITOR NEWS WARRIORS
0 comments

ತೀರ್ಥಹಳ್ಳಿ : ತಾಲೂಕಿನ ಮೇಲಿನ ಕುರುವಳ್ಳಿಯಲ್ಲಿ ನಿರಂತರವಾಗಿ ಅಕ್ರಮವಾಗಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ, ತೀರ್ಥಹಳ್ಳಿಯ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲಿ ಕಂಡು ಕಾಣದಂತೆ ಕೇಳಿಸಿಕೊಂಡು ಕೇಳದಂತೆ ಮೌನವಾಗಿ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕೆಲವು ಭ್ರಷ್ಟ ಅಧಿಕಾರಿಗಳ ಪಾಲುದಾರಿಕೆ ಈ ಗಣಿಗಾರಿಕೆಯಲ್ಲಿ ಇದಿಯಾ ಎನ್ನುವ ಅನುಮಾನ ಹುಟ್ಟಿದೆ..?! ಏಕೆಂದರೆ ಪತ್ರಿಕೆ ನಿರಂತರವಾಗಿ ಈ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವರದಿ ಪ್ರಕಟಿಸುತ್ತಿದ್ದು ಸಾಕ್ಷಿ ಸಮೇತ ವರದಿ ನೀಡಿದ್ದರೂ ಕೂಡ ಇಲ್ಲಿಯವರೆಗೂ ಅಂತ ಕ್ರಮವೇನು ಕೈಗೊಂಡಿಲ್ಲ…

ವರದಿ ಬಂದಾಗ ಮೇಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಮೇಲಿನ ಅಧಿಕಾರಿಗಳಾದ ಎಸ್ ಬಿ ಅವರು ನಿರ್ದೇಶನ ನೀಡಿದಾಗ ಒಂದಷ್ಟು ಆ ಕಡೆ ಹೋಗಿಬಂದು ಹೆದರಿಸಿ ,ಬೆದರಿಸಿ ಬರುವುದು ಬಿಟ್ಟರೆ ಉಳಿದಂತೆ ಯಾವುದೂ ನಿಂತಿಲ್ಲ. ನಿರಂತರವಾಗಿ ರಾತ್ರಿ ಮತ್ತು ಬೆಳಗಿನ ಜಾವ ಸ್ಪೋಟಕ ಬಳಸಿ ಅಕ್ರಮ ಕಲ್ಲುಗಾಣಿಗಾರಿಕೆ ನಡೆಸುತ್ತಿದ್ದಾರೆ.

ಇದರ ಸದ್ದು ತೀರ್ಥಹಳ್ಳಿಯ ಪಟ್ಟಣದ ತುಂಬಾ ಕೇಳಿಸುತ್ತದೆ ಕಲ್ಲುಗಣಿಗಾರಿಕೆಯ ಸಮೀಪ ವಾಸಿಸುವ ಮನೆಗಳ ಹತ್ತಿರ ಕೇಳಿ ವಿಚಾರಿಸಿದರೂ ಕೂಡ ಹೇಳುತ್ತಾರೆ.. ಆದರೂ ಪಾಪ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಕ್ಷ ಅಧಿಕಾರಿಗಳಿಗೆ ಹಾಗೂ ತೀರ್ಥಹಳ್ಳಿಯ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಯಾಕೋ ಕೇಳಿಸುತ್ತಿಲ್ಲ..

ಶಿವಮೊಗ್ಗದಲ್ಲಿ ದಕ್ಷ ಪ್ರಾಮಾಣಿಕ ಖಡಕ್‌ ಅಧಿಕಾರಿ ಮಿಥುನ್ ಕುಮಾರ್ ಜಿ ಕೆ ಅವರು ಇದ್ದರೂ ಕೂಡ ಏಕೋ ತೀರ್ಥ‌ಹಳ್ಳಿಯ ಅಕ್ರಮ ಕಲ್ಲು ಗಣಿಗಾರಿಕೆ ಇಲ್ಲಿವರೆಗೂ ನಿಯಂತ್ರಣಕ್ಕೆ ಬರುತ್ತಿಲ್ಲ..

ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗಕ್ಕೆ ಬಂದು ಚಾರ್ಜ್ ತೆಗೆದುಕೊಂಡ ನಂತರ ಇಲ್ಲಿಯವರೆಗೂ ಹಲವು ಅಕ್ರಮಗಳನ್ನು ತಡೆಗಟ್ಟಿದ್ದಾರೆ. ಆದರೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯಲ್ಲಿ ಮಾತ್ರ ಈ ಅಕ್ರಮ ಕಲ್ಲು ಗಣಿಗಾರಿಕೆ ಅದರಲ್ಲೂ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಇಲ್ಲಿಯವರೆಗೂ ತಡೆಗಟ್ಟಲು ಆಗುತ್ತಿಲ್ಲ…

ಸ್ಪೋಟಕ ಬಳಸದೆ ತೀರ್ಥಹಳ್ಳಿ ಕುರುವಳ್ಳಿ ಬಂಡೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ ಅದೆಲ್ಲ ಕಟ್ಟುಕಥೆ…

ಇನ್ನು ಮುಂದಾದರೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲುತ್ತಾ ಕಾದುನೋಡಬೇಕು…. ಪತ್ರಿಕೆ ಮಾತ್ರ ನಿರಂತರವಾಗಿ ವರದಿ ಪ್ರಕಟಿಸುತ್ತಲೇ ಇರುತ್ತದೆ …

ರಘುರಾಜ್ ಹೆಚ್.ಕೆ…9449553305…

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!