Home ರಾಜ್ಯಸಂಪುಟ ಸರ್ಕಸ್ ಗೆ ಕೊನೆಗೂ ಮುಕ್ತಿ ನಾಳೆ ಬೆಳಿಗ್ಗೆ 11:30ಕ್ಕೆ ರಾಜ ಭವನದಲ್ಲಿ ಮುಹೂರ್ತ ಪಿಕ್ಸ್..! 24 ಸಚಿವರ ಹೆಸರು ಪ್ರಕಟ‌..!!ಯಾರಿಗೆ ಮಂತ್ರಿ ಭಾಗ್ಯ..?!

ಸಂಪುಟ ಸರ್ಕಸ್ ಗೆ ಕೊನೆಗೂ ಮುಕ್ತಿ ನಾಳೆ ಬೆಳಿಗ್ಗೆ 11:30ಕ್ಕೆ ರಾಜ ಭವನದಲ್ಲಿ ಮುಹೂರ್ತ ಪಿಕ್ಸ್..! 24 ಸಚಿವರ ಹೆಸರು ಪ್ರಕಟ‌..!!ಯಾರಿಗೆ ಮಂತ್ರಿ ಭಾಗ್ಯ..?!

by EDITOR NEWS WARRIORS
0 comments

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ಜನ ಸಚಿವರ ಜೊತೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಉಳಿದ ಸಚಿವರ ಸಂಪುಟ ಸೇರ್ಪಡೆ ಬಗ್ಗೆ ತೀವ್ರ ಕುತೂಹಲ ಎಲ್ಲರನ್ನೂ ಕೆರಳಿಸಿತ್ತು

ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟ ಫೈನಲ್‌ ಮಾಡಲು ತಮ್ಮ ತಮ್ಮ ಬೆಂಬಲಿಗರ ಪಟ್ಟಿ ಹಿಡಿದುಕೊಂಡು ದೆಹಲಿಗೆ ತೆರಳಿದ್ದರು.

ಸುದೀರ್ಘ ಮೂರು ದಿನದ ಚರ್ಚೆಗಳ ನಂತರ ಇಂದು ಕಾಂಗ್ರೆಸ್ ಪಟ್ಟಿ ಪ್ರಕಟಿಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತ್ಯವಾಗಿದೆ.


ಹಿರಿಯ ನಾಯಕರನ್ನು ಸಂಪುಟದಿಂದ ಕೈ ಬಿಡುವುದು, ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಸೇರಿ ಕೆಲವು ಸಮಸ್ಯೆಗಳ ಬಗ್ಗೆ ವೇಣುಗೋಪಾಲ್, ಸುರ್ಜೇವಾಲ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಈ ನಿರ್ಣಯದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಕೆಲವು ಸಲಹೆಗಳನ್ನು ನೀಡಿದ್ದಾರೆ. ಮಹತ್ವದ ಸಭೆಗಳ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಂದು ಪ್ರತ್ಯೇಕವಾಗಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ 24 ಹೆಸರುಗಳನ್ನು ಅಂತಿಮಗೊಳಿಸಿದ್ದು .

ನಾಳೆ ಬೆಳಗ್ಗೆ 11:45 ಕ್ಕೆ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶನಿವಾರ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ:

ದಿನೇಶ್ ಗುಂಡೂರಾವ್,

ಕೃಷ್ಣ ಬೈರೇಗೌಡ,

ಈಶ್ವರ್ ಖಂಡ್ರೆ,

ರಹೀಂ ಖಾನ್,

ಸಂತೋಷ್ ಲಾಡ್,

ಕೆ ಎನ್ ರಾಜಣ್ಣ,

ಪಿರಿಯಾಪಟ್ಟಣ ವೆಂಕಟೇಶ್,

ಎಚ್. ಸಿ. ಮಹದೇವಪ್ಪ,

ಬೈರತಿ ಸುರೇಶ್, ಸಿ.

ಪುಟ್ಟರಂಗಶೆಟ್ಟಿ,

ಶಿವರಾಜ್ ತಂಗಡಗಿ,

ಆರ್.ಬಿ. ತಿಮ್ಮಾಪುರ,

ಬಿ ನಾಗೇಂದ್ರ,

ಲಕ್ಷ್ಮೀ ಹೆಬ್ಬಾಳ್ಕರ್,

ಮಧು ಬಂಗಾರಪ್ಪ,

ಡಿ ಸುಧಾಕರ್,

ಚೆಲುವರಾಯ ಸ್ವಾಮಿ,

ಮಂಕಾಳ ವೈದ್ಯ,

ಶಿವಾನಂದ ಪಾಟೀಲ್

,ಎಂಸಿ ಸುಧಾಕರ್,

ಹೆಚ್.ಕೆ. ಪಾಟೀಲ್,

ಶರಣಪ್ರಕಾಶ ಪಾಟೀಲ್,

ಎಸ್ ಎಸ್ ಮಲ್ಲಿಕಾರ್ಜುನ,

ಶರಣಬಸಪ್ಪ ದರ್ಶನಾಪುರ ….

ಜಾತಿ ಲೆಕ್ಕಾಚಾರ , ರಾಜಕೀಯ ಲೆಕ್ಕಾಚಾರ ಹಿರಿಯ, ಕಿರಿಯ ಶಾಸಕರ ಲೆಕ್ಕಾಚಾರ ಹಾಗೂ ಮುಂಬರುವ ಲೋಕಸಭೆಯ ಚುನಾವಣೆಯ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎರಡೂ ಬಣಗಳನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಲಾಗಿದೆ ಈ ಪಟ್ಟಿಯಲ್ಲಿ …

ಪಟ್ಟಿ ಪ್ರಕಟವಾದ ಬೆನ್ನಲ್ಲೇ ಬಿ,ಕೆ ಹರಿಪ್ರಸಾದ್ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ ..

ರಾಜ್ಯ ಕಾಂಗ್ರೆಸ್ ನಲ್ಲಿ ತಣ್ಣಗೆ ಭಿನ್ನಮತ ಭುಗಿಲೆದ್ದಿದೆ… ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ ನಾಯಕರು ಇದನ್ನು ಹೇಗೆ ಸರಿಪಡಿಸುತ್ತಾರೆ ಕಾದು ನೋಡಬೇಕು…

ರಘುರಾಜ್ ಹೆಚ್.ಕೆ…9449553305….

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!