Home ಶಿವಮೊಗ್ಗBig news:ಶಿವಮೊಗ್ಗ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಗೆ ದಿನಾಂಕ ಫಿಕ್ಸ್..! ಅಧ್ಯಕ್ಷ ಸ್ಥಾನಕ್ಕೆ ಆರ್ ಎಂ ಮಂಜುನಾಥ್ ಗೌಡರ ಆಯ್ಕೆ ಬಹುತೇಕ ಖಚಿತ..!

Big news:ಶಿವಮೊಗ್ಗ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಗೆ ದಿನಾಂಕ ಫಿಕ್ಸ್..! ಅಧ್ಯಕ್ಷ ಸ್ಥಾನಕ್ಕೆ ಆರ್ ಎಂ ಮಂಜುನಾಥ್ ಗೌಡರ ಆಯ್ಕೆ ಬಹುತೇಕ ಖಚಿತ..!

by EDITOR NEWS WARRIORS
0 comments

ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್ (ಜಿಲ್ಲಾ ಸಹಕಾರ ಕೇಂದ್ರ) ನ ಚುನಾವಣೆ ದಿನಾಂಕ ನಿಗದಿಯಾಗಿದ್ದು ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದ್ದು ಯಾರಾಗುತ್ತಾರೆ ಅಧ್ಯಕ್ಷರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

ಅಪೇಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಚುನಾವಣೆಗೆ ಬರುವ ಮುನ್ನವೇ ಸಾಕಷ್ಟು ಬೆಳವಣಿಗೆ ನಡೆದಿದ್ದು ಹಾಲಿ ಅಧ್ಯಕ್ಷರಾಗಿದ್ದ ಶಿಕಾರಿಪುರದ ಚನ್ನವೀರಪ್ಪ ಅವರನ್ನು ಅವಿಶ್ವಾಸ ಮಂಡನೆ ಮಂಡಿಸುವುದರ ಮೂಲಕ ಕೆಳಗಿಳಿಸಿದ್ದು ಅವರ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಅವರು ಅಧ್ಯಕ್ಷರಾಗಿ ಮುಂದುವರೆದಿದ್ದರೂ ನಂತರದ ಬೆಳವಣಿಗೆಯಲ್ಲಿ ಆರ್ ಎಂ ಮಂಜುನಾಥ್ ಗೌಡರನ್ನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ತರುವ ದೃಷ್ಟಿಯಿಂದ ಉಳಿದ ನಿರ್ದೇಶಕರುಗಳು ಪೂರ್ವ ನಿಯೋಜಿತ ಪ್ಲಾನ್ ಮಾಡಿಕೊಂಡು ಹಾಲಿ ನಿರ್ದೇಶಕರಾಗಿದ್ದ ದುಗ್ಗಪ್ ಗೌಡ ಅವರನ್ನ ರಾಜೀನಾಮೆ ಕೊಡಿಸಿ ತೆರವಾಗಿದ್ದ ನಿರ್ದೇಶಕರ ಸ್ಥಾನಕ್ಕೆ ಆರ್ ಎಂ ಮಂಜುನಾಥ್ ಗೌಡರು ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗುವಂತೆ ನೋಡಿಕೊಂಡರು.

ನಿರ್ದೇಶಕರಾಗಿದ್ದ ದುಗ್ಗಪ್ ಗೌಡರು ಅಪೇಕ್ಷ ಬ್ಯಾಂಕ್ ಗೆ ಡಿಸಿಸಿ ಬ್ಯಾಂಕ್ ನ ಪ್ರತಿನಿಧಿಯಾಗಿ ಆಯ್ಕೆಯಾದರು.

ಇದರ ನಡುವೆ ಆಡಳಿತ ಮಂಡಳಿಯ ಅವಧಿಯು ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು ಈ ಬೆಳವಣಿಗೆಯಲ್ಲಿ ಆರ್.ಎಂ ಮಂಜುನಾಥ್ ಗೌಡರು ಅಧ್ಯಕ್ಷರಾದರೇ ಸಹಕಾರಿ ಕ್ಷೇತ್ರಕ್ಕೆ ಬಲಬಂದಂತೆ ಆಗುತ್ತದೆ ಎನ್ನುವುದು ಅವರ ಒಡನಾಡಿಗಳ ಹಾಗೂ ಈಗಾಗಲೇ ಇರುವ ನಿರ್ದೇಶಕರಗಳ ಅಭಿಪ್ರಾಯ.

ಒಟ್ಟಿನಲ್ಲಿ ಸಹಕಾರಿ ಕ್ಷೇತ್ರದ ದಿಗ್ಗಜ ಆರ್ ಎಂ ಮಂಜುನಾಥ್ ಗೌಡರು ಅಧ್ಯಕ್ಷರಾದರೆ ಮತ್ತೆ ಸಹಕಾರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡುವುದು ಸಹಜ ಎನ್ನುವುದು ಹಲವು ಸಹಕಾರಿ ಕ್ಷೇತ್ರಗಳ ದೂರಿಣರ ಒಮ್ಮತದ ಅಭಿಪ್ರಾಯ..

ರಘುರಾಜ್ ಹೆಚ್‌. ಕೆ..9449553305.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...